ಶೀಘ್ರದಲ್ಲಿ 790 ಡ್ಯೂಕ್ ಬೈಕ್ ಬಿಡುಗಡೆ-ಬೆಲೆ ಎಷ್ಟು? -S750 ಹಾಗೂ Z900 ಬೈಕ್‌ಗಳಿಗೆ ಪ್ರತಿಸ್ಪರ್ಧಿಯಾಗಿ ಇದೀಗ 790 ಡ್ಯೂಕ್ ಬೈಕ್ ಬಿಡುಗಡೆಯಾಗುತ್ತಿದೆ. ಹೆಚ್ಚುವರಿ ಫೀಚರ್ಸ್, ಅತ್ಯಾಕರ್ಷಕ ವಿನ್ಯಾಸ ಸೇರಿದಂತೆ ಹಲವು ವಿಶಿಷ್ಠತೆಗಳು ಈ ಬೈಕ್‌ನಲ್ಲಿದೆ. ನವದೆಹಲಿ(ಜ.23):ಯುವಕರ ನೆಚ್ಚಿನ ಬೈಕ್ ಆಗಿ ಹೊರಹೊಮ್ಮಿರುವ ಡ್ಯೂಕ್ ಇದೀಗ ಬಲಿಷ್ಠ ಎಂಜಿನ್ ಹಾಗೂ ಹೊಸ ವಿನ್ಯಾಸದೊಂದಿಗೆ ಬಿಡುಗಡೆಯಾಗಲಿದೆ. 799 ಸಿಸಿ ಎಂಜಿನ್ ಹೊಂದಿರುವ ನೂತನ 790 ಡ್ಯೂಕ್ ಬೈಕ್ ಮಾರ್ಚ್, 2019ರಲ್ಲಿ ಬಿಡುಗಡೆಯಾಗಲಿದೆ. ಇದನ್ನೂ ಓದಿ:ಒಂದು ವಾರದಲ್ಲಿ 12 ಸಾವಿರ ಕಾರು ಬುಕ್! ನೂತನ 790 ಡ್ಯೂಕ್ ಬೈಕ್ ಬೆಲೆ 8 ರಿಂದ 8.5 ಲಕ್ಷ ರೂಪಾಯಿ(ಆನ್ ರೋಡ್) ಎಂದು ಅಂದಾಜಿಸಲಾಗಿದೆ. ಈ ಮೂಲಕ -S750 ಹಾಗೂ Z900 ಬೈಕ್‌ಗಳಿ ಪೈಪೋಟಿ ನೀಡಲು ರೆಡಿಯಾಗಿದೆ. ಈ ಎರಡು ಬೈಕ್ ಬೈಕ್ ಬೆಲೆ 7.46 ಲಕ್ಷ ರೂಪಾಯಿ ಹಾಗೂ 7.68 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇದನ್ನೂ ಓದಿ:ಮಕ್ಕಳಿಗಾಗಿ ಪುಟ್ಟ ಆಟೋ ರಿಕ್ಷಾ ನಿರ್ಮಿಸಿದ ತಂದೆ! ನೂತನ 790 ಡ್ಯೂಕ್ ಬೈಕ್ ಭಾರತದಲ್ಲಿ ನಿರ್ಮಾಣವಾಗುವುದಿಲ್ಲ. ಬಿಡಿಭಾಗಗಳನ್ನ ಆಮದು ಮಾಡಿಕೊಂಡು ಇಲ್ಲಿ ಜೋಡಿಸಲಾಗುತ್ತೆ. 2017 ಮೋಟಾರ್ ಶೋನಲ್ಲಿ 790 ಡ್ಯೂಕ್ ಪರಿಚಯಿಸಲಾಗಿತ್ತು. ಇನ್ನೆರಡು ತಿಂಗಳಲ್ಲೇ ಭಾರತದ ರಸ್ತೆಗಿಳಿಯಲಿದೆ.