ಶೀಘ್ರದಲ್ಲಿ ಮಹೀಂದ್ರ KUV100ಗೆ ಪ್ರತಿಸ್ಪರ್ಧಿ ಟಾಟಾ ಹಾರ್ನ್‌ಬಿಲ್ ಬಿಡುಗಡೆ! ಟಾಟಾ ಮೋಟಾರ್ಸ್ ಇದೀಗ ಮೈಕ್ರೋ ಕಾರು ಬಿಡುಗಡೆಗೆ ಮುಂದಾಗಿದೆ. ಸಣ್ಣ ಕಾರುಗಳ ವಿಭಾಗದಲ್ಲಿ ಟಾಟಾ ಹಾರ್ನ್‌ಬಿಲ್ ಹೊಸ ಅಧ್ಯಾಯ ಬರೆಯಲಿದೆ. ಕಡಿಮೆ ಬೆಲೆ, ಹಾಗು ಆಧುನಿಕ ತಂತ್ರಜ್ಞಾನ ಬಳಸಿಕೊಂಡು ನೂತನ ಕಾರು ಬಿಡುಗಡೆಯಾಗಲಿದೆ. ನವದೆಹಲಿ(ಜ.03):ಟಾಟಾ ಮೋಟಾರ್ಸ್ ಇತರ ಕಾರು ಕಂಪೆನಿಗಳಿಗೆ ತೀವ್ರ ಪೈಪೋಟಿ ನೀಡುತ್ತಿದೆ. ಕಾರುಗಳ ಮೂಲಕ ಇತರ ಬ್ರಾಂಡ್ ಕಾರುಗಳ ನಿದ್ದೆಗೆಡಿಸಿರುವ ಟಾಟ ಇದೀಗ ಮಹೀಂದ್ರ KUV100 ಸೇರಿದಂತೆ ಇತರ ಸಣ್ಣ ಕಾರುಗಳಿಗೆ ಪೈಪೋಟಿ ನೀಡಲು ಸಜ್ಜಾಗಿದೆ. ಇದನ್ನೂ ಓದಿ:ಬೀಚ್‌ಗೆ ಹೋದ ಸಚಿವರ ಕಾರಿಗೆ ಬಂತು ಸಂಕಟ-ವಿಡಿಯೋ ವೈರಲ್ ಟಾಟಾ ಮೋಟಾರ್ಸ್ ಸಣ್ಣ ಹಾರ್ನ್‌ಬಿಲ್ ಕಾರು ಬಿಡುಗಡೆ ಮಾಡಲು ಮುಂದಾಗಿದೆ. ಸಣ್ಣ ಕಾರುಗಳ ವಿಭಾಗದಲ್ಲಿ ನೂತನ ಟಾಟ ಹಾರ್ನ್‌ಬಿಲ್ ಕಾರು ಸಂಚಲನ ಮೂಡಿಸಲಿದೆ. ಬಹುತೇಕ ಟಾಟಾ ನೆಕ್ಸಾನ್ ಶೈಲಿಯಲ್ಲೇ ಈ ಕಾರು ಬಿಡುಗಡೆಯಾಗಲಿದೆ. - ಎಮಿಶನ್ ಎಂಜಿನ್ ಹೊಂದಿರುವ ನೂತನ ಹಾರ್ನ್‌ಬಿಲ್ 1.2 ಲೀಟರ್ ಎಂಜಿನ್ ಹೊಂದಿದೆ. ಮೈಕ್ರೋ ಹೈಬ್ರಿಡ್ ಟೆಕ್ನಾಲಜಿ ಬಳಸಿಕೊಂಡಿರುವ ಹಾರ್ನ್‌ಬಿಲ್ 5 ಸ್ಪೀಡ್ ಮ್ಯಾನ್ಯುಯೆಲ್ ಹಾಗೂ 5 ಸ್ಪೀಡ್ ಅಟೋಮ್ಯಾಟಿಕ್ ಟ್ರಾನ್ಸಿಮಿಶನ್ ಲಭ್ಯವಿದೆ. ಈಗಾಗಲೇ ರೋಡ್ ಟೆಸ್ಟ್ ಕೂಡ ನಡೆಸಿದೆ. ಇದನ್ನೂ ಓದಿ:ಕಾರಿನಲ್ಲಿ ಮಾಡಬೇಡಿ ಈ 6 ತಪ್ಪು- ಆಗಬಹುದು ಪ್ರಾಣಕ್ಕೆ ಕುತ್ತು! ನೂತನ ಹಾರ್ನ್ ಬಿಲ್ ಬೆಲೆ 5-8 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಮಹೀಂದ್ರ KUV100, ಮಾರುತಿ ಇಗ್ನಿಸ್ ಹಾಗೂ ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಮಾರುತಿ Y1K ಮೈಕ್ರೋ ಕಾರಿಗೆ ಪೈಪೋಟಿ ನೀಡಲಿದೆ. ಆಟೋಮೊಬೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: