ಶೀಘ್ರದಲ್ಲೇ ಮಾರುತಿ ಬಲೇನೋ ಫೇಸ್‌ಲಿಫ್ಟ್ ಕಾರು ಬಿಡುಗಡೆ! ಮಾರಾಟದಲ್ಲಿ ದಾಖಲೆ ಬರೆದಿರುವ ಮಾರುತಿ ಸುಜುಕಿ ಸಂಸ್ಥೆಯ ಬಲೆನೋ ಕಾರು ಹೊಚ್ಚ ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ. ಈ ಕಾರಿನ ಹೆಚ್ಚಿನ ವಿವರ ಇಲ್ಲಿದೆ. ನವದಹೆಲಿ(ಜ.02):ಮಾರುತಿ ಸುಜುಕಿ ಸಂಸ್ಥೆ ನೂತನ ಬಲೆನೋ ಫೇಸ್‌ಲಿಫ್ಟ್ ಕಾರು ಬಿಡುಗಡೆ ಮಾಡಲು ಸಜ್ಜಾಗಿದೆ. 2018ರಲ್ಲಿ ಮಾರಾಟದಲ್ಲಿ ದಾಖಲೆ ಬರೆದ ಬಲೆನೋ ಇದೀಗ ಹೊಸ ಅವತಾರದೊಂದಿಗೆ ಕಣಕ್ಕಿಳಿಯಲಿದೆ. ಹೆಡ್ ಲ್ಯಾಂಪ್ ಕ್ಲಸ್ಟರ್, ಮುಂಭಾಗದ ಬಂಪರ್ ಸೇರಿದಂತೆ ಕೆಲ ಬದಲಾವಣೆಗಳೊಂದಿಗೆ ಹೊಸ ಬಲೆನೋ ಕಾರು ಬಿಡುಗಡೆಯಾಗುತ್ತಿದೆ. ಇದನ್ನೂ ಓದಿ:ನಿದ್ದೆ ಕಣ್ಣಿನಲ್ಲಿ ಕಾರನ್ನ ವಿಮಾನ ತರ ಹಾರಿಸಿದ ಭೂಪ-ವೀಡಿಯೋ ವೈರಲ್! ಸ್ಟೈಲಿಶ್ ಫಾಗ್ ಲ್ಯಾಂಪ್, ಆಲೋಯ್ ವೀಲ್ಹ್ಸ್ ಸೇರಿದಂತೆ ಹೊರ ವಿನ್ಯಾಸದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಇನ್ನೂ ಡ್ಯಾಶ್ ಬೋರ್ಡ್ ಸೇರಿದಂತೆ ಒಳವಿನ್ಯಾಸದಲ್ಲೂ ಕೆಲ ಬದಲಾವಣೆಗಳೊಂದಿಗೆ ಬಲೆನೋ ರಸ್ತೆಗಿಳಿಯಲಿದೆ. ಇದನ್ನೂ ಓದಿ:2018ರಲ್ಲಿ ಬಿಡುಗಡೆಯಾದ ಗರಿಷ್ಠ ಮೈಲೇಜ್ ಬೈಕ್! ನೂತನ ಬಲೆನೋ 1.2 ಲೀಟರ್ ಕೆ12 ಪೆಟ್ರೋಲ್ ಎಂಜಿನ್ ಹೊಂದಿದೆ. 83 ಪವರ್ ಹಾಗೂ 115nm ಟಾರ್ಕ್ ಹೊಂದಿದೆ. ಇನ್ನು 1.3 ಲೀಟರ್ ಡೀಸೆಲ್ ಎಂಜಿನ್ ಕಾರು ಕೂಡ ಲಭ್ಯವಿದೆ. ಕಳೆದ ವರ್ಷ ಪ್ರತಿ ತಿಂಗಳು ಸರಾಸರಿ 17,000 ಕಾರುಗಳು ಮಾರಾಟವಾಗಿತ್ತು. ಇದೀಗ ಈ ದಾಖಲೆಯನ್ನ ಮತ್ತಷ್ಟು ಉತ್ತಮ ಪಡಿಸಿಕೊಳ್ಳಲು ಮಾರುತಿ ಮುಂದಾಗಿದೆ. ಶೀಘ್ರದಲ್ಲೇ ಬಲೆನೋ ಫೇಸ್‌ಲಿಫ್ಟ್ ಕಾರು ಬಿಡುಗಡೆ ದಿನಾಂಕ ಪ್ರಕಟವಾಗಲಿದೆ.ಆಟೋಮೊಬೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: