ಹೊಸ ವರ್ಷಕ್ಕೆ ಬಂಪರ್ ಆಫರ್- ಮಹೀಂದ್ರ ಕಾರುಗಳ ಮೇಲೆ ಭಾರಿ ಡಿಸ್ಕೌಂಟ್! ಮಹೀಂದ್ರ ಸಂಸ್ಥೆಯ ಇದೀಗ ಹೊಸ ಆಫರ್ ಘೋಷಿಸಿದೆ. 2019ರ ಆರಂಭದಲ್ಲಿ ಮಾರಾಟದಲ್ಲಿ ಗಣನೀಯ ಏರಿಕೆಗೆ ಮುಂದಾಗಿರುವ ಮಹೀಂದ್ರ ಭರ್ಜರಿ ಡಿಸ್ಕೌಂಟ್ ಆಫರ್ ನೀಡಿದೆ. ಮಹೀಂದ್ರ ಕಾರುಗಳ ಮೇಲಿನ ಡಿಸ್ಕೌಂಟ್ ಕುರಿತ ಮಾಹಿತಿ ಇಲ್ಲಿದೆ. ಮುಂಬೈ(ಜ.05):ಹೊಸ ವರ್ಷದ ಆರಂಭದಲ್ಲೇ ಮಹೀಂದ್ರ ಬಂಪರ್ ಆಫರ್ ಘೋಷಿಸಿದೆ. ಮಹೀಂದ್ರ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ ಘೋಷಿಸಲಾಗಿದೆ. ಕ್ಯಾಶ್ ಡಿಸ್ಕೌಂಟ್, ಎಕ್ಸ್‌ಚೇಂಜ್ ಡಿಸ್ಕೌಂಟ್ ಸೇರಿದಂತೆ ಹಲವು ಆಫರ್ ನೀಡಲಾಗಿದೆ. ಈ ಆಫರ್ ಕೆಲ ದಿನಗಳು ಮಾತ್ರ ಲಭ್ಯವಿದೆ. ಮಹೀಂದ್ರ KUV100ಗರಿಷ್ಠ ಡಿಸ್ಕೌಂಟ್: 75,000 ರೂ ಮಹೀಂದ್ರ TUV300ಗರಿಷ್ಠ ಡಿಸ್ಕೌಂಟ್: 59,500 ರೂ ಮಹೀಂದ್ರ ಬೊಲೆರೊಗರಿಷ್ಠ ಡಿಸ್ಕೌಂಟ್: 34,000 ರೂ ಮಹೀಂದ್ರ ಥಾರ್ಗರಿಷ್ಠ ಡಿಸ್ಕೌಂಟ್: 6,000 ರೂ ಮಹೀಂದ್ರ ಮರಾಜೋಗರಿಷ್ಠ ಡಿಸ್ಕೌಂಟ್: 15,000 ರೂ ಮಹೀಂದ್ರ ಸ್ಕಾರ್ಪಿಯೋಗರಿಷ್ಠ ಡಿಸ್ಕೌಂಟ್: 75,000 ರೂ ಮಹೀಂದ್ರ XUV500ಗರಿಷ್ಠ ಡಿಸ್ಕೌಂಟ್: 64,000 ರೂ ಮಹೀಂದ್ರ ಘೋಷಿಸಿರುವ ರಿಯಾಯಿತಗಳಲ್ಲಿ ಕೆಲ ಷರತ್ತುಗಳು ಅನ್ವಯಿಸುತ್ತದೆ. ಹೀಗಾಗಿ ಗ್ರಾಹಕರು ಪರಿಶೀಲಿಸಿ ಖರೀದಿಸುವುದು ಸೂಕ್ತ.