2019ರ ಸುಜುಕಿ ಹಯಬುಸಾ ಸೂಪರ್ ಬೈಕ್ ಬಿಡುಗಡೆ- ಬೆಲೆ 13.74 ಲಕ್ಷ! 2019ರ ಸುಜುಕಿ ಹಯಬುಸಾ ಬೈಕ್ ಭಾರತದಲ್ಲಿ ಬಿಡುಗಡೆಯಾಗಿದೆ. ಯುರೋಪ್‌ನಲ್ಲಿ 2019ರಿಂದ ಹಯಬುಸಾ ಮಾರಾಟ ಸ್ಥಗಿತಗೊಳಿಸುತ್ತಿದೆ. ಆದರೆ ಭಾರತ ಹಾಗೂ ಅಮೇರಿಕಾದಲ್ಲಿ ಹಯಬುಸಾ ಘರ್ಜಿಸಲಿದೆ. ನವದೆಹಲಿ(ಡಿ.27):ಸುಜುಕಿ ಮೋಟರ್‌ ಸೈಕಲ್ ಇಂಡಿಯಾ 2019ರ ಹಯಬುಸಾ ಸೂಪರ್ ಬೈಕ್ ಬಿಡುಗಡೆ ಮಾಡಿದೆ. 2 ಕಲರ್‌ಗಳಲ್ಲಿ ಸುಜುಕಿ ಹಯಬುಸಾ ಬಿಡುಗಡೆಯಾಗಿದೆ. ನೂತನ ಬೈಕ್ ಬೆಲೆ ಬರೋಬ್ಬರಿ 13.74 ಲಕ್ಷ ರೂಪಾಯಿ. ಕಳೆದ 20 ವರ್ಷಗಳಿಂದ ಸೂಪರ್ ಬೈಕ್‌ಗಳಲ್ಲಿ ಅಗ್ರಸ್ಥಾನ ಪಡೆದಿರುವ ಹಯಬುಸ ಇದೀಗ ಹೊಸ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ. ಇದನ್ನೂ ಓದಿ:ರಾಜಧಾನಿಯಲ್ಲಿ ನಾಳೆಯಿಂದ ರಸ್ತೆಗಿಳಿಯಲಿದೆ ಎಲೆಕ್ಟ್ರಿಕ್ ಬಸ್! ಯುರೋಪ್‌ನಲ್ಲಿ ಸುಜುಕಿ ಹಯಬುಸಾ ಡಿಸೆಂಬರ್ 31, 2018ಕ್ಕೆ ನಿರ್ಮಾಣ ನಿಲ್ಲಿಸಲಿದೆ. ಯುರೋ ಎಮಿಶನ್ 4 ಟೆಸ್ಟ್‌ನಲ್ಲಿ ಹಯಬುಸಾ ವಿಫಲವಾಗಿದೆ. ಮಾಲಿನ್ಯ ನಿಯಂತ್ರಣದಲ್ಲಿ ಸುಜುಕಿ ಹಯಬುಸಾ ಯುರೋಪ್ ನೀತಿ ಪಾಲಿಸಲು ಸಾಧ್ಯವಾಗಿಲ್ಲ. ಆದರೆ ಭಾರತ ಹಾಗೂ ಅಮೇರಿಕಾದಲ್ಲಿ ಹಯಬುಸಾ ಬೈಕ್ ಮಾರುಕಟ್ಟೆಯಲ್ಲಿ ರಾರಾಜಿಸಲಿದೆ. ಇದನ್ನೂ ಓದಿ:ಶ್ರೇಷ್ಠ ರಸ್ತೆ-ವಿಶ್ವದ ಕೆಟ್ಟ ಬೈಕ್ ಇದುವೇ ಮಂಕಿ ರನ್ ರೇಸ್! ಹಯಬುಸಾ ಬೈಕ್ 1340 ಸಿಸಿ, 4 ಸಿಲಿಂಡರ್, 197 ಪವರ್ ಹಾಗೂ 155nm ಪೀಕ್ ಟಾರ್ಕ್ ಉತ್ವಾದಿಸಲಿದೆ. ಟಾಪ್ ಸ್ಪೀಡ್ 300 . 1999ರಲ್ಲಿ ಸುಜುಕಿ ಸಂಸ್ಥೆ ಮೊದಲ ಬಾರಿಗೆ ಹಯಬುಸಾ ಬೈಕ್ ಬಿಡುಗಡೆ ಮಾಡಿತು. 90ರ ದಶಕದಲ್ಲಿ ಹಯಬುಸಾ ಹೊಸ ಸಂಚಲನ ಮೂಡಿಸಿತು.ಆಟೋಮೊಬೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: