ನವೆಂಬರ್‌ನಲ್ಲಿ ಗರಿಷ್ಠ ಮಾರಾಟವಾದ ಟಾಪ್ 10 ಕಾರು- ಸ್ವಿಫ್ಟ್‌ಗೆ ಅಗ್ರಸ್ಥಾನ! ನವೆಂಬರ್ 2018ರಲ್ಲಿ ಕಾರು ಕಂಪೆನಿಗಳು ರಿಯಾಯಿತಿ ಸೇರಿದಂತೆ ಹಲವು ಆಫರ್ ನೀಡಿ ಗ್ರಾಹಕರನ್ನ ಸೆಳೆಯೋ ಪ್ರಯತ್ನ ಮಾಡಿದೆ. ಇದೀಗ ನವೆಂಬರ್ ತಿಂಗಳಲ್ಲಿ ಗರಿಷ್ಠ ಮಾರಾಟವಾದ ಕಾರಿನ ಪಟ್ಟಿ ಬಹಿರಂಗವಾಗಿದೆ. ಇಲ್ಲಿಗೆ ಲಿಸ್ಟ್ ವಿವರ. ನವದೆಹಲಿ(ಡಿ.25): ಭಾರತದ ಕಾರು ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಪೈಪೋಟಿ ಹೆಚ್ಚಾಗುತ್ತಿದೆ. ಹೊಸ ಹೊಸ ಕಾರುಗಳು, ಆಧುನಿಕ ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗುತ್ತಿದೆ. ಇದೀಗ ತೀವ್ರ ಪೈಪೋಟಿ ಎದುರಿಸಿದರೂ ಮಾರುತಿ ಸುಜುಕಿ ಮಾರಾಟದಲ್ಲಿ ಅಗ್ರಗಣ್ಯ ಸ್ಥಾನ ಪಡೆದಿದೆ. ಇದನ್ನೂ ಓದಿ:ಮಹೀಂದ್ರ XUV300 ಕಾರಿನ ಬುಕಿಂಗ್ ಆರಂಭ-ಮಾರುತಿ ಬ್ರಿಜಾಗೆ ಪೈಪೋಟಿ! ಕಳೆದ ನವೆಂಬರ್‌ನಲ್ಲಿ ಗರಿಷ್ಠ ಮಾರಾಟವಾದ ಕಾರು ಪಟ್ಟಿಗಳಲ್ಲಿ ಮಾರುತಿ ಸುಜುಕಿ ಸಂಸ್ಥೆಯ 6 ಕಾರುಗಳು ಆಗ್ರಸ್ಥಾನದಲ್ಲಿದೆ. 2018ರಲ್ಲಿ ಬಿಡುಗಡೆಯಾದ ನೂತನ ಮಾರುತಿ ಸ್ವಿಫ್ಟ್ ಕಳೆದ ನವೆಂಬರ್‌ ತಿಂಗಳಲ್ಲೂ ಮಾರಾಟದಲ್ಲಿ ಮೊದಲ ಸ್ಥಾನ ಅಲಂಕರಿಸಿದೆ. ಇದನ್ನೂ ಓದಿ:2018ರಲ್ಲಿ ಸಂಚಲನ ಮೂಡಿಸಿದ ಬೈಕ್-ಜಾವಾಗೆ ಮೊದಲ ಸ್ಥಾನ! 2018- ನವೆಂಬರ್ ತಿಂಗಳಲ್ಲಿ ಗರಿಷ್ಠ ಮಾರಾಟವಾದ ಕಾರು!