ನೂತನ ಬಜಾಜ್ ಪ್ಲಾಟಿನ 110 ಬೈಕ್ ಬಿಡುಗಡೆ-ಬೆಲೆ ಎಷ್ಟು? ಬಜಾಜ್ ಪ್ಲಾಟಿನ ಬೈಕ್ ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ. ಹೊಸ ಫೀಚರ್ಸ್ ಹಾಗೂ ಹೆಚ್ಚು ದಕ್ಷತೆ ಹೊಂದಿರುವ ನೂತನ ಪ್ಲಾಟಿನ ಬೆಲೆ ಎಷ್ಟು? ಇದರ ವಿಶೇಷತೆ ಏನು? ಇಲ್ಲಿದೆ ಹೆಚ್ಚಿನ ವಿವರ. ಮುಂಬೈ(ಡಿ.17):ಬಜಾಜ್ ಆಟೋ ನೂತನ ಪ್ಲಾಟಿನ 110 ಬೈಕ್ ಬಿಡುಗಡೆ ಮಾಡಿದೆ. ಹಲವು ವಿಶೇಷತೆಗಳನ್ನೊಳಗೊಂಡಿರುವ ಈ ಮೂಲಕ ಹೀರೋ ಪ್ಯಾಶನ್ ಪ್ರೋ, ಹೊಂಡಾ ಸಿಡಿ110, ಡ್ರೀಮ್ ಡಿಎಕ್ಸ್ ಸೇರಿದಂತೆ 110 ಸಿಸಿ ಎಂಜಿನ್ ಬೈಕ್‌ಗಳಿಗೆ ಪೈಪೋಟಿ ನೀಡಲು ಮುಂದಾಗಿದೆ. ಇದನ್ನೂ ಓದಿ:ಭಾರತದಲ್ಲಿ ಮತ್ತೆ ಬಿಡುಗಡೆಯಾಗುತ್ತಿದೆ ಲ್ಯಾಂಬಿ ಸ್ಕೂಟರ್! ಟ್ಯೂಬ್‌ಲೆಸ್ ಟೈಯರ್, ಆ್ಯಂಟಿ ಸ್ಕಿಡ್ ಬ್ರೇಕ್ ಸೇರಿದಂತೆ ಹೆಚ್ಚುವರಿ ಫೀಚರ್ಸ್ ಸೇರಿಸಲಾಗಿದೆ. ನೂತನ ಪ್ಲಾಟಿನ 115 ಸಿಸಿ , ಸಿಂಗಲ್ ಸಿಲಿಂಡರ್, ಏರ್ ಕೂಲ್‌ಡ್ ಎಂಜಿನ್ ಹೊಂದಿದೆ. 8.4 ಪವರ್ ಹಾಗೂ 9.81 ಪೀಕ್ ಟಾರ್ಕ್ ಉತ್ಪಾದಿಸಲಿದೆ. ಇದನ್ನೂ ಓದಿ:ಪೆಟ್ರೋಲ್-ಡೀಸೆಲ್ ಕಾರುಗಳಿಗೆ ಪೈಪೋಟಿ- ಬಿಡುಗಡೆಯಾಗಲಿದೆ 4 ಎಲೆಕ್ಟ್ರಿಕ್ ಕಾರು! 4 ಸ್ಪೀಡ್ ಗೇರ್‌ಬಾಕ್ಸ್, 135mm ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್, ಕಂಬೈಂಡ್ ಬ್ರೇಕಿಂಗ್ ಸಿಸ್ಟಮ್(),ನೂತನ ಗ್ರಾಫಿಕ್ಸ್, ಎಲ್ಇಡಿ ಲೈಟ್ಸ್, ಬ್ಲಾಕ್ ಆಲೋಯ್ ವೀಲ್ಹ್ಸ್ ಕೂಡ ನೂತನ ಪ್ಲಾಟಿನ ಬೈಕ್ ವಿಶೇಷತೆ. ಈ ಬೈಕ್ ಬೆಲೆ 49,147 ರೂಪಾಯಿ(ಎಕ್ಸ್ ಶೋ ರೂಂ). ಆಟೋಮೊಬೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: