ಶೀಘ್ರದಲ್ಲೇ ಮಹೀಂದ್ರ XUV500 ಪ್ರತಿಸ್ಪರ್ಧಿ-ಮಾರುತಿ ಗ್ರ್ಯಾಂಡ್ ವಿಟಾರ ! ಮಹೀಂದ್ರ 7 ಸೀಟರ್ ಕಾರುಗಳಿಗೆ ಪೈಪೋಟಿ ನೀಡಲು ಇದೀಗ ಮಾರುತಿ ಸುಜುಕಿ ಹೊಸ ಕಾರು ಬಿಡುಗಡೆ ಮಾಡಲು ಮುಂದಾಗಿದೆ. 7 ಸೀಟರ್ ವಿಟಾರ ಗ್ರ್ಯಾಂಡ್ ಕಾರು ಬಿಡುಗಡೆ ಮಾಡಲಿರುವ ಮಾರುತಿ, ಗರಿಷ್ಠ ಫೀಚರ್ ನೀಡಲು ನಿರ್ಧರಿಸಿದೆ. ನವದೆಹಲಿ(ಡಿ.14):ಮಾರುತಿ ವಿಟಾರ ಬ್ರಿಜಾ ಕಾರು ಭಾರತದಲ್ಲಿ ಗರಿಷ್ಠ ಮಾರಾಟವಾಗುತ್ತಿರುವ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. 4 ಮೀಟರ್ ಸಬ್ ಕಾರಿನಲ್ಲಿ ಹೆಚ್ಚು ಗಮನಸೆಳೆದಿರುವ ಮಾರುತಿ ಬ್ರಿಜಾ ಫೋರ್ಡ್ ಇಕೋಸ್ಪೋರ್ಟ್ ಸೇರಿದಂತೆ ಹಲವು ಕಾರುಗಳಿಗೆ ಪೈಪೋಟಿ ನೀಡುತ್ತಿದೆ. ಇದನ್ನೂ ಓದಿ:5 ಸಾವಿರಕ್ಕೆ ಬುಕ್ ಮಾಡಿ ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್! ಮಾರುತಿ ಇದೀಗ ಮಹೀಂದ್ರ XUV500 ಕಾರಿಗೆ ಪೈಪೋಟಿ ನೀಡಲು ಮುಂದಾಗಿದೆ. ಇದಕ್ಕಾಗಿ 7 ಸೀಟರ್ ಮಾರುತಿ ಗ್ರ್ಯಾಂಡ್ ವಿಟಾರ ಕಾರು ಭಾರತದಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ. ಭಾರತದಲ್ಲಿ ಗ್ರ್ಯಾಂಡ್ ವಿಟಾರಾ ಕಾರು 2005ರಲ್ಲಿ ಬಿಡುಗಡೆಯಾಗಿತ್ತು. ಆದರೆ ಮಾರಾಟದಲ್ಲಿ ಇಳಿಮುಖವಾಗಿತ್ತು. ಇದನ್ನೂ ಓದಿ:ದಿವಾಳಿಯಾಗಿದೆ ಭಾರತೀಯರ ಮನಗೆದ್ದ ಪ್ರಿಮಿಯರ್ ಪದ್ಮಿನಿ ಕಂಪೆನಿ! ಭಾರತದಲ್ಲಿ ಸದ್ಯ ಕಾರಿಗೆ ಹೆಚ್ಚಿನ ಬೇಡಿಕೆ ಇದೆ. 4 ಮೀಟರ್ ಸಬ್ ಕಾರಿನಲ್ಲಿ ಮುಂಚೂಣಿಯಲ್ಲಿರುವ ಮಾರುತಿ, 7 ಸೀಟರ್ ಕಾರಿನಲ್ಲಿ ಹಿನ್ನಡೆ ಅನುಭವಿಸಿದೆ. ಮಹೀಂದ್ರ 7 ಸೀಟರ್ ಕಾರುಗಳು ಭಾರತದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಇದಕ್ಕಾಗಿ ಮಾರುತಿ ಗ್ರ್ಯಾಂಡ್ ವಿಟಾರಾ ಬಿಡುಗಡೆ ಮಾಡಲು ಮುಂದಾಗಿದೆ. 2019ರ ಅಂತ್ಯದಲ್ಲಿ ವಿಟಾರ ಗ್ರ್ಯಾಂಡ್ ಭಾರತದಲ್ಲಿ ಬಿಡುಗಡೆಯಾಗಲಿದೆ.ಆಟೋಮೊಬೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: