ತಂತ್ರಜ್ಞಾನದೊಂದಿದೆ ಹೊಂಡಾ ಬ್ಲೇಡ್ ಬೈಕ್ ಬಿಡುಗಡೆ! ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿರುವ ಹೊಂಡಾ ನೂತನ ಬ್ಲೇಡ್ ಬೈಕ್ ಬಿಡುಗಡೆ ಮಾಡಿದೆ. ಈ ಬೈಕ್ ವಿಶೇಷತೆ ಏನು? ಇದರ ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ಮಾಹಿತಿ. ಬೆಂಗಳೂರು(ಡಿ.9):ಜಪಾನ್ ಮೋಟರ್‌ಸೈಕಲ್ ಹೊಂಡಾ ಇದೀಗ ಆ್ಯಂಟಿ ಲಾಕ್ ಬ್ರೇಕ್ ಸಿಸ್ಟಮ್() ತಂತ್ರಜ್ಞಾನದೊಂದಿಗೆ ನೂತನ ಬೈಕ್ ಬಿಡುಗಡೆ ಮಾಡಿದೆ. ಹೊಂಡಾ ಬ್ಲೇಡ್ ಹೆಸರಿನಲ್ಲಿ ಮಾರುಕಟ್ಟೆ ಪ್ರವೇಶಿಸಿರುವ ನೂತನ ಬೈಕ್ ಹಲವು ವಿಶೇಷತೆ ಹೊಂದಿದೆ. . - – .##../Mf4s0godKf ನೂತನ ಹೊಂಡಾ ಬ್ಲೇಡ್ ಬೈಕ್ ಬೆಲೆ 87,776 ರೂಪಾಯಿ(ಎಕ್ಸ್ ಶೋ ರೂಂ). ಇದು ಹಳೆ ಎಕ್ಸ್ ಬ್ಲೇಡ್ ಬೈಕ್ ಬೆಲೆಗಿಂತ 6,000 ರೂಪಾಯಿ ಹೆಚ್ಚಾಗಿದೆ. ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿರುವ ಈ ಬೈಕ್‌ನಲ್ಲಿ ಎಂಜಿನ್ ಹಾಗೂ ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆಗಳಿಲ್ಲ. -. 2.0 .##2Point0Know :://./QAf0N2dxAcpic../ 162.7 ಸಿಸಿ ಸಿಂಗಲ್ ಸಿಲಿಂಡರ್ ಎರ್‌ಕೂಲ್‌ಡ್ ಎಂಜಿನ್, 13.93 ಪವರ್ ಹಾಗೂ 13.9 ಟಾರ್ಕ್ ಉತ್ಪಾದಿಸಲಿದೆ. 5 ಸ್ವೀಡ್ ಗೇರ್ ಬಾಕ್ಸ್ ಹೊಂದಿದೆ. 276 ಡಿಸ್ಕ್ ಬ್ರೇಕ್() ಹಾಗೂ 130mm ರೇರ್ ಡ್ರಮ್ ಬ್ರೇಕ್ ಹೊಂದಿದೆ. ಫುಲ್ ಎಲ್ಇಡಿ ರೊಬೊಟ್ ಫೇಸ್ ಹೆಡ್‌ಲ್ಯಾಂಪ್ಸ್, ಡಿಜಿಟಲ್ ಇಂಸ್ಟ್ರುಮೆಂಟ್ ಕ್ಲಸ್ಟರ್, ಡಿಜಿಟಲ್ ಕ್ಲಾಕ್ ಸೇರಿದಂತೆ ಹಲವು ನೂತನ ತಂತ್ರಜ್ಞಾನಗಳನ್ನ ಅಳವಡಿಸಲಾಗಿದೆ. 5 ವಿವಿದ ಬಣ್ಣಗಳಲ್ಲಿ ಈ ಬೈಕ್ ಲಭ್ಯವಿದೆ.