ಹೊಂಡಾ ಪಾಸ್‌ಪೋರ್ಟ್ ಕಾರು ಅನಾವರಣ! ಹೊಂಡಾ ಕಂಪನಿ ನೂತನ ಪಾಸ್‌ಪೋರ್ಟ್ ಕಾರು ಅನಾವರಣ ಮಾಡಿದೆ. ಈ ಕಾರಿನ ವಿಶೇಷತೆ ಏನು? ಇತರ ಕಾರಿಗಿಂತ ಭಿನ್ನ ಹೇಗೆ? ಇಲ್ಲಿದೆ ಹೆಚ್ಚಿನ ವಿವರ. ಲಾಸ್ ಎಂಜಲ್ಸ್(ನ.28):ಹೊಂಡಾ ಕಂಪನಿ ನೂತನ ಕಾರು ಅನಾವರಣ ಮಾಡಿದೆ. ಲಾ ಮೋಟಾರ್ ಸ್ಪೋರ್ಟ್ಸ್‌ನಲ್ಲಿ ನೂತನ ಕಾರನ್ನ ರಿವೀಲ್ ಮಾಡಿದ ಹೊಂಡಾ ಪಾಸ್‌ಪೋರ್ಟ್ ಎಂದು ನಾಮಕರಣ ಮಾಡಿದೆ. . . -# 2019. ://./ltuz8uVGkEpic../G5WO7S8VLE ನೂತನ ಪಾಸ್‌ಪೋರ್ಟ್ ಕಾರು 3.6 ಲೀಟರ್,ವಿ6 ಪೆಟ್ರೋಲ್ ಹೊಂದಿರುವ ಪಾಸ್‌ಪೋರ್ಟ್ ಕಾರು 284hp ಹಾಗೂ 355nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ಹೀಗಾಗಿ ಹೆಚ್ಚು ಬಲಿಷ್ಠ ಕಾರಾಗಿ ಹೊರಹೊಮ್ಮಲಿದೆ. ನೂತನ ಪಾಸ್‌ಪೋರ್ಟ್ ಕಾರು ಇತರ 4 ಸೀಟರ್ ಸೆಗ್ಮೆಂಟ್ ಕಾರುಗಳಿಂದ ಗಾತ್ರದಲ್ಲಿ ದೊಡ್ಡದಿದೆ. 1,167 ಲೀಟರ್ ಬೂಟ್ ಸ್ಪೇಸ್ ಹೊಂದಿರುವ ಈ ಕಾರು, 8.0 ಇನ್ಫೋಟೈನ್‌ಮೆಂಟ್ ಟಚ್ ಸ್ಕ್ರೀನ್, ಆ್ಯಂಡ್ರಾಯಿಡ್ ಆಟೋ ಹಾಗೂ ಆ್ಯಪಲ್ ಆಟೋ ಪ್ಲೇ ಹೊಂದಿದೆ. ಇದರ ಬೆಲೆ ಇನ್ನು ಬಹಿರಂಗಪಡಿಸಿಲ್ಲ. ಇಷ್ಟೇ ಅಲ್ಲ ಈ ಕಾರು ಭಾರತದಲ್ಲಿ ಬಿಡುಗಡೆಯಾಗೋ ಸಾಧ್ಯತೆ ಕಡಿಮೆ.