2018ರಲ್ಲಿ ಬಿಡುಗಡೆಯಾದ ಅತ್ಯುತ್ತಮ ಕಾರು-ನಿಮ್ಮ ಆಯ್ಕೆ ಯಾವುದು? 2018ರಲ್ಲಿ ಹಲವು ಕಾರುಗಳು ಬಿಡುಗಡೆಯಾಗಿದೆ. ಇದರಲ್ಲಿ ಅತ್ಯುತ್ತಮ ಕಾರುಗಳ ಪಟ್ಟಿ ಇಲ್ಲಿ ನೀಡಲಾಗಿದೆ. ಕಾರಿನ ಗುಣಮಟ್ಟ, ಬೆಲೆ, ಮಾರಾಟ ಸೇರಿದಂತೆ ಹಲವು ಅಂಶಗಳನ್ನ ಆಧರಿಸಿ ಕಾರುಗಳನ್ನ ಪಟ್ಟಿ ನೀಡಲಾಗಿದೆ. ಬೆಂಗಳೂರು(ಡಿ.12):ಆಟೋಮೊಬೈಲ್ ಕ್ಷೇತ್ರ ತ್ವರಿಗತಿಯಲ್ಲಿ ಬೆಳೆಯುತ್ತಿದೆ. ಇತರ ದೇಶದ ಬಹುತೇಕ ಕಂಪೆನಿಗಳು ಇದೀಗ ಭಾರತದಲ್ಲಿ ಕಾರು ಮಾರಾಟ ಹಾಗೂ ನಿರ್ಮಾಣಕ್ಕೆ ತುದಿಗಾಲಲ್ಲಿ ನಿಂತಿದೆ. ಇಷ್ಟೇ ಅಲ್ಲ ಹಲವು ಕಂಪೆನಿಗಳು ಪೈಪೋಟಿಗೆ ಬಿದ್ದು ಹೊಸ ಹೊಸ ಕಾರುಗಳನ್ನ ಬಿಡುಗಡೆ ಮಾಡುತ್ತಿದೆ. ಇದನ್ನೂ ಓದಿ:ಹಾರ್ಲೆ ಡೇವಿಡ್ಸನ್ ಬೈಕ್ ಮೇಲೆ 1 ಲಕ್ಷ ರೂಪಾಯಿ ಡಿಸ್ಕೌಂಟ್! ಇದೀಗ 2018ರ ವರ್ಷಾಂತ್ಯದಲ್ಲಿದ್ದೇವೆ. ಈ ವರ್ಷ ಹಲವು ಕಾರುಗಳು ಬಿಡುಗಡೆಯಾಗಿದೆ. ದುಬಾರಿ ಕಾರುಗಳು ಸಣ್ಣ ಹಾಗೂ ಅಗ್ಗದ ಕಾರುಗಳಂತೆ ಮಾರಾಟವಾಗಿಲ್ಲ. ಆದರೆ ಮಾರಾಟದಲ್ಲಿ ಏರಿಕೆ ಕಂಡಿರುವುದಂತೂ ನಿಜ. ಹೀಗೆ 2018ರಲ್ಲಿ ಗ್ರಾಹಕರನ್ನ ಸೆಳೆದ ಟಾಪ್ 10 ಕಾರುಗಳ ಪಟ್ಟಿ ಇಲ್ಲಿದೆ. ಇದನ್ನೂ ಓದಿ:ಅಂಬಿ ಕಾರ್ ಕ್ರೇಜ್: 2 ಗಂಟೆಯಲ್ಲಿ ಮೈಸೂರು ಬೆಂಗಳೂರು! ಮಾರುತಿ ಸುಜುಕಿ ಸಿಫ್ಟ್ ಹ್ಯುಂಡೈ ಸ್ಯಾಂಟ್ರೋ ಫೋರ್ಡ್ ಫ್ರೀ ಸ್ಟೈಲ್ ಮಾರುತಿ ಸುಜುಕಿ ಸಿಯಾಜ್ ಹೊಂಡಾ ಅಮೇಜ್ ಮಹೀಂದ್ರ ಮೊರಾಜೋ ಮಾರುತಿ ಸುಜುಕಿ ಎರ್ಟಿಗಾ ಟಾಟಾ ಟಿಯಾಗೋ ಜಿಟಿಪಿ ಮರ್ಸಡೀಸ್ ಬೆಂಜ್ ಸಿ ಕ್ಲಾಸ್ ಆಡಿ Q5