ಭಾರತದ ರಸ್ತೆಗಿಳಿಯುತ್ತಿದೆ ಅಮೇರಿಕದ ಟೆಸ್ಲಾ ಕಾರು! ಅಮೇರಿಕದ ಟೆಸ್ಲಾ ಕಾರು ಇನ್ಮುಂದೆ ಭಾರತದ ರಸ್ತೆಗಳಲ್ಲಿ ಓಡಾಟ ಶುರು ಮಾಡಲಿದೆ. ವಿಶ್ವದ ಅತೀ ದೊಡ್ಡ ಎಲೆಕ್ಟ್ರಿಕಲ್ ಕಾರು ತಯಾರಿಕಾ ಕಂಪೆನಿ ಭಾರತಕ್ಕೆ ಕಾಲಿಡುತ್ತಿರುವುದು, ಕಾರು ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಿದೆ. ಕ್ಯಾಲಿಫೋರ್ನಿಯಾ(ನ.05):ವಿಶ್ವದ ಅತೀ ದೊಡ್ಡ ಎಲೆಕ್ಟ್ರಿಕ್ ಕಾರು ತಯಾರಿಕಾ ಕಂಪೆನಿ ಟೆಸ್ಲಾ ಇದೀಗ ಭಾರತಕ್ಕೆ ಕಾಲಿಡುತ್ತಿದೆ. 2019ರಲ್ಲಿ ಟೆಸ್ಲಾ ಮೋಟಾರ್ಸ್ ಭಾರತದಲ್ಲಿ ಕಾರ್ಯಆರಂಭಿಸಲಿದೆ. ಈ ಮೂಲಕ ಎಲೆಕ್ಟ್ರಿಕಲ್ ಕಾರಿನಲ್ಲಿ ಹೊಸ ಶಕೆ ಆರಂಭವಾಗಲಿದೆ. 3 @../1rmNyGZqbp ಕ್ಯಾಲಿಫೋರ್ನಿಯಾದ ಟೆಸ್ಲಾ ಮೋಟಾರ್ಸ್ ಭಾರತದಲ್ಲಿ ಎಲೆಕ್ಟ್ರಿಕಲ್ ಕಾರು ಮಾರಾಟಕ್ಕೆ ಮುಂದಾಗಿದೆ. ಈ ಕುರಿತು ಕಂಪೆನಿ ಸಿಇಓ ಎಲೆನ್ ಮಸ್ಕ್ ಸ್ಪಷ್ಟಪಡಿಸಿದ್ದಾರೆ. 2020ರ ವೇಳೆಗೆ ಯುರೋಪ್, ಚೀನಾ ಹಾಗೂ ಜಪಾನ್ ದೇಶಗಳಿಗೂ ವಿಸ್ತರಿಸಲು ಯೋಜನೆ ಹಾಕಿಕೊಂಡಿದೆ. 3 - : “ ’ ’ - ” ಎಲೆಕ್ಟ್ರಿಕ್ ಕಾರು ಬ್ಯಾಟರಿ ತಯಾರಿಕೆಯಲ್ಲಿ ವಿಶ್ವದ ಶೇಕಡಾಾ 60 ರಷ್ಟು ಪಾಲು ಟೆಸ್ಲಾ ಹೊಂದಿದೆ. ಲಕ್ಸುರಿ ಕಾರು, ಆಕರ್ಷಕ ವಿನ್ಯಾಸ ಹೊಂದಿರುವ ಟೆಸ್ಲಾ ಕಾರು ಭಾರತದ ಕಾರು ಗ್ರಾಹಕರನ್ನ ಮೋಡಿ ಮಾಡೋ ವಿಶ್ವಾಸದಲ್ಲಿದೆ.