ಅಂಬಾನಿ ಬಾಡಿಗಾರ್ಡ್ಸ್ ಬಳಸೋ ಕಾರು ಯಾವುದು? ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ದುಬಾರಿ ಕಾರು ಬಳಸೋದು ಅಚ್ಚರಿಯೇನಲ್ಲ. ಆದರೆ ಅಂಬಾನಿಗೆ + ಭದ್ರತೆ ನೀಡೋ ಪೊಲೀಸರು ಬಳಸೋ ಕಾರು ಕೂಡ ಅತ್ಯಂತ ದುಬಾರಿ ಕಾರು. ಹಾಗಾದರೆ ಅಂಬಾನಿ ಬಾಡಿಗಾರ್ಡ್ಸ್ ಬಳಿ ಇರೋ ಕಾರು ಯಾವುದು? ಇಲ್ಲಿದೆ. ಮುಂಬೈ(ನ.04):ಉದ್ಯಮಿ ಮುಕೇಶ್ ಅಂಬಾನಿ ಭಾರತದ ಮಾತ್ರವಲ್ಲ, ವಿಶ್ವದ ಶ್ರೀಮಂತ ಉದ್ಯಮಿ. ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿಗೆ ಅಗ್ರಸ್ಥಾನವಿದೆ. ನಿಮಿಷಕ್ಕೆ ಕೋಟಿ ಕೋಟಿ ಆದಾಯಗಳಿಸೋ ಮುಕೇಶ್ ಅಂಬಾನಿ ಹಾಗೂ ಕುಟುಂಬಕ್ಕೆ + ಭದ್ರತೆ ನೀಡಲಾಗಿದೆ. ಅಂಬಾನಿ ರಸ್ತೆ ಮೂಲಕ ಎಲ್ಲೇ ಪ್ರಯಾಣ ಮಾಡುವಾಗ ಈ ಬಾಡಿಗಾರ್ಡ್ ಅಂಬಾನಿಯ ಕಾರಿನ ಸುತ್ತ ಸುತ್ತುವರೆದಿರುತ್ತಾರೆ. ವಿಶೇಷ ಅಂದರೆ ಅಂಬಾನಿ ಬಾಡಿಗಾರ್ಡ್ಸ್ ಬಳಸೋ ಕಾರು X5.ಇದು ದುಬಾರಿ ಕಾರು. ಮುಕೇಶ್ ಅಂಬಾನಿ ಗರಿಷ್ಠ ಸುರಕ್ಷತೆಯ ಮರ್ಸಡೀಸ್ ಬೆಂಜ್ ಎಸ್ ಕ್ಲಾಸ್ ಹಾಗೂ 7 ಸೀರಿಸ್ ಕಾರು ಬಳಸುತ್ತಾರೆ. ಜೊತೆಗೆ + ಭದ್ರತೆ ಕೂಡ ಇದೆ. ಅಂಬಾನಿಗೆ + ಭದದ್ರತೆ ನೀಡೋ ಪೊಲೀಸರು ಇದೇ X5 ಕಾರಿನಲ್ಲಿ ಎಸ್ಕಾರ್ಟ್ ಮಾಡುತ್ತಾರೆ. ಈ X5 ಕಾರನ್ನ ಅಂಬಾನಿ ಖರೀದಿಸಿ ತಮಗೆ ಭದ್ರತೆ ನೀಡೋ ಪೊಲೀಸರಿಗೆ ನೀಡಿದ್ದಾರೆ. ಈ ಕಾರಿನ ಬೆಲೆ 70 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). 3.0 ಲೀಟರ್ ಇನ್‌ಲೈನ್ 6 ಸಿಲಿಂಡರ್ ಎಂಜಿನ್ ಹೊಂದಿದೆ. 258 ಪವರ್ ಹಾಗೂ 560nm ಟಾರ್ಕ್ ಉತ್ಪಾದಿಸುತ್ತೆ. ಈ ಶಕ್ತಿಶಾಲಿ ಕಾರು ಅಂಬಾನಿಗೆ ಎಸ್ಕಾರ್ಟ್ ಮಾಡುತ್ತೆ.