ಶೀಘ್ರದಲ್ಲೇ ಓಟ ನಿಲ್ಲಿಸಲಿದೆ ಭಾರತದ ಪ್ರಮುಖ 7 ಕಾರುಗಳು! ಕನಿಷ್ಠ ಸುರಕ್ಷತೆ, ಮಾಲಿನ್ಯ ಮಾಡುತ್ತಿರುವ ಭಾರತದ ಪ್ರಮುಖ ಬ್ರ್ಯಾಂಡ್ ಕಾರುಗಳು ಓಟ ನಿಲ್ಲಿಸಲಿದೆ. ನೂತನ ನಿಯಮದ ಪ್ರಕಾರ ನಿಷೇಧಕ್ಕೆ ಒಳಗಾಗಲಿರುವ ಕಾರುಗಳು ಯಾವುದು? ಇಲ್ಲಿದೆ ವಿವರ. ಬೆಂಗಳೂರು(ನ.04):ಭಾರತದಲ್ಲಿ ಆಟೋಮೊಬೈಲ್ ಕ್ಷೇತ್ರ ಆಧುನಿಕತೆಗೆ ಒಗ್ಗಿಕೊಳ್ಳುತ್ತಿರುವಂತೆಯೇ ಕಟ್ಟು ನಿಟ್ಟಿನ ನಿಯಮಗಳು ಕೂಡ ಜಾರಿಯಾಗಿದೆ. ಇದೀಗ ಭಾರತದಲ್ಲಿ ಕನಿಷ್ಠ ಸುರಕ್ಷತೆ ಇಲ್ಲದ ಕಾರುಗಳನ್ನ ಮಾರಾಟ ಮಾಡುವಂತಿಲ್ಲ. ಇಷ್ಟೇ ಅಲ್ಲ ಮಾಲಿನ್ಯರಹಿತ ವಾಹನಗಳಿಗೆ ಮಾತ್ರ ಅವಕಾಶ. ಹೀಗಾಗಿ ಈ ನಿಯಮಕ್ಕೆ ವಿರುದ್ಧವಾಗಿರೋ ಕೆಲ ಪ್ರಮುಖ ಕಾರುಗಳು ಭಾರತದ ಭೂಪಟದಿಂದ ಅಳಿಸಿ ಹೋಗಲಿದೆ. 2020ರಿಂದ ಬಿಎಸ್ 6 ವಾಹನಗಳು ಮಾತ್ರ ರಸ್ತೆಗಿಳಿಯಲು ಅವಕಾಶ. 2019ರಿಂದ ಗರಿಷ್ಠ ಸುರಕ್ಷತೆ ಹಾಗೂ ಮಾಲಿನ್ಯ ರಹಿತ ವಾಹನಗಳಿಗೆ ಮಾತ್ರ ಸ್ಥಾನ. ಹೀಗಾಗಿ ಭಾರತದಲ್ಲಿ ಹೆಚ್ಚು ಪ್ರಸಿದ್ಧಿ ಹೊಂದಿದೆ ಕೆಲ ಕಾರುಗಳು ನಿಷೇಧಕ್ಕೆ ಒಳಗಾಗಲಿದೆ. ಕಾರು: ಮಾರುತಿ ಜಿಪ್ಸಿಕಾರಣ: ಸುರಕ್ಷತೆ ಕಾರು: ಮಾರುತಿ ಒಮ್ನಿಕಾರಣ: ಸುರಕ್ಷತೆ ಕಾರು: ಹ್ಯುಂಡೈ ಇಯಾನ್ಕಾರಣ: ಸುರಕ್ಷತೆ ಕಾರು: ಮಹೀಂದ್ರ ವೆರಿಟೋಕಾರಣ: ಸುರಕ್ಷತೆ ಕಾರು: ಟಾಟಾ ಸುಮೋಕಾರಣ: ಸುರಕ್ಷತೆ ಕಾರು: ಟೊಯೊಟಾ ಇಟಿಯೋಸ್ ಲಿವಾಕಾರಣ: ಎಮಿಶನ್ ಸಮಸ್ಯೆ ಕಾರು: ಟೊಯೊಟಾ ಇಟಿಯೋಸ್ಕಾರಣ: ಎಮಿಶನ್ ಸಮಸ್ಯೆ