ಟಾಟಾ ಟಿಯಾಗೋ / ಮಾರುತಿ ಬಲೆನೋ -ಯಾವುದು ಬೆಸ್ಟ್? ಟಾಟಾ ಮೋಟಾರ್ಸ್ ಸಂಸ್ಥೆಯ ನೂತನ ಟಿಯಾಗೋ ಭಾರಿ ಸದ್ದು ಮಾಡುತ್ತಿದೆ. ಈ ನೂತನ ಕಾರು ಮಾರುತಿ ಸುಜುಕಿ ಬಲೆನೋ ಕಾರಿಗಿಂತ ಹೇಗೆ ಭಿನ್ನ. ಇದರ ವಿಶೇಷತೆ ಏನು? ಇಲ್ಲಿದೆ ಸಂಪೂರ್ಣ ವಿವರ. ಬೆಂಗಳೂರು(ಅ.30):ಮಾರುತಿ, ಹ್ಯುಂಡೈ ಸೇರಿದಂತೆ ಇತರ ಬ್ರ್ಯಾಂಡ್ ಕಾರುಗಳಿಗೆ ಭಾರಿ ಪೈಪೋಟಿ ನೀಡುತ್ತಿರುವ ಟಾಟಾ ಮೋಟಾರ್ಸ್ ಹೊಸ ಹೊಸ ಕಾರುಗಳನ್ನ ಬಿಡುಗಡೆ ಮಾಡುತ್ತಲೇ. ಈಗಾಗಲೇ ಟಾಟಾ ಟಿಯಾಗೋ ವೆರಿಯೆಂಟ್ ಬಿಡುಗಡೆಯಾಗಿದೆ. ಈ ನೂತನ ಕಾರು ಇತರ ಹ್ಯಾಚ್‌ಬ್ಯಾಕ್ ಕಾರುಗಳಿಗೆ ಪೈಪೋಟಿ ನೀಡುತ್ತಿದೆ. ನೂತನ ಟಿಯಾಗೋ ಕಾರು ಹಾಗೂ ಮಾರುತಿ ಸುಜುಕಿ ಬಲೆನೋ ಕಾರಿನ ವಿಶೇಷತೆ ವಿವರ ಇಲ್ಲಿದೆ. ಸಣ್ಣ ಕಾರು ಕಾರುಗಳಲ್ಲಿ ಸಂಚಲನ ಮೂಡಿಸಿರುವ ಟಾಟಾ ಟಿಯಾಗೋ ಕಾರು ಇದೀಗ ಬಲೆನೋ ಕಾರಿಗೆ ಸ್ಪರ್ಧೆ ನೀಡುತ್ತಿದೆ.