ಹೊಸ ಮೈಲಿಗಲ್ಲು ಸ್ಥಾಪಿಸಿದ ಜುಪಿಟರ್, ಕೈಗೆಟುಕವ ಬೆಲೆಗೆ ಕ್ಲಾಸಿಕ್ ಸ್ಕೂಟರ್ ಬಿಡುಗಡೆ! ಟಿವಿಎಸ್ ಇದೀಗ ಗ್ರಾಹಕರಿಗೆ ಹೊಸ ಕೂಡುಗೆ ನೀಡುತ್ತಿದೆ. 5 ಮಿಲಿಯನ್ ಸ್ಕೂಟರ್ ಮಾರಾಟಗೊಂಡಿರುವ ಕಾರಣ ಟಿವಿಎಸ್ ಹೊಸ ಸ್ಕೂಟರ್ ಬಿಡುಗಡೆ ಮಾಡಲಾಗಿದೆ. 110 ಸಿಸಿ ಸ್ಕೂಟರ್ ಪೈಕಿ ಟಿವಿಎಸ್ ಕೈಗೆಟುಕವ ದರದಲ್ಲಿ ಹೊಚ್ಚ ಹೊಸ ಸ್ಕೂಟರ್ ಬಿಡುಗಡೆ ಮಾಡಿದೆ. ಬೆಂಗಳೂರು(ಸೆ.25):ದ್ವಿಚಕ್ರ ವಾಹನ ಮತ್ತು ತ್ರಿಚಕ್ರ ವಾಹನ ತಯಾರಿಕೆಯ ಜಾಗತಿಕ ಪ್ರತಿಷ್ಠಿತ ಟಿವಿಎಸ್ ಮೋಟರ್ ಕಂಪನಿಯು, ದೇಶಿ ಮಾರುಕಟ್ಟೆಗೆ ಹೊಸ ಪರಿಚಯಿಸಿದೆ.. ಟಿವಿಎಸ್ ಜುಪಿಟರ್ ‘ಫಾಸ್ಟೆಸ್ಟ್ ಫೈವ್ ಮಿಲಿಯನ್ ವೆಹಿಕಲ್ಸ್ ಆನ್ ರೋಡ್’ ಮೈಲುಗಲ್ಲು ತಲುಪಿದೆ. ಇದರ ಹಿನ್ನಲೆಯಲ್ಲಿ ಹೊಚ್ಚ ಹೊಸ ಟಿವಿಎಸ್ ಜುಪಿಟರ್ ಕ್ಲಾಸಿಕ್ ಬಿಡುಗಡೆ ಮಾಡಲಾಗಿದೆ. ನೂತನ ಸ್ಕೂಟರ್ ಬೆಲೆ 85,866 ರೂಪಾಯಿ(ಎಕ್ಸ್ ಶೋ ರೂಂ. ಪ್ರೀಮಿಯಂ ನೋಟ ಹೊಂದಿದೆ. ಕನ್ನಡಿಯ ಎತ್ತರದ ಉದ್ದಕ್ಕೂ ಬ್ಲ್ಯಾಕ್ ಥೀಮ್, ಫೆಂಡರ್ ಗಾರ್ನಿಷ್, ಟಿಂಟೆಡ್ ವೈಸರ್ ಮತ್ತು 3ಡಿ ಕಪ್ಪು ಬಣ್ಣದ ಪ್ರೀಮಿಯಂ ಲಾಂಛನ ಒಳಗೊಂಡಿದೆ. ಹ್ಯಾಂಡಲ್‌ಬಾರ್ ತುದಿಗಳು, ಡೈಮಂಡ್ ಕಟ್ ಮಿಶ್ರ ಲೋಹದ ಚಕ್ರಗಳು ಮತ್ತು ಸಮೃದ್ಧ ಗಾಢ ಕಂದು ಬಣ್ಣದ ಒಳ ಫಲಕಗಳನ್ನು ಹೊಂದಿದೆ. ಥೀಮ್‌ಗೆ ಅನುಗುಣವಾಗಿ, ಇದು ಬ್ಯಾಕ್ ರೆಸ್ಟ್ನೊಂದಿಗೆ ಪ್ರೀಮಿಯಂ ಸ್ಯೂಡ್ ಲೆಥೆರೆಟ್ ಸೀಟ್ ಹೊಂದಿದೆ. ಡೆಕಾಲ್‌ಗಳು, ಡಯಲ್ ಆರ್ಟ್, ಕಾಲಾತೀತ ಶ್ರೇಷ್ಠ ಬಗೆಯ ಹೊಳಪು ನೀಡುತ್ತವೆ. ಈ ಮಾದರಿಯು ಮಿಸ್ಟಿಕ್ ಗ್ರೇ ಮತ್ತು ರೀಗಲ್ ಪರ್ಪಲ್ ಎಂಬ ಎರಡು ವಿಶೇಷ ಬಣ್ಣಗಳಲ್ಲಿ ಕಂಗೊಳಿಸುತ್ತಿದೆ. , ಪ್ರೀಮಿಯಂ ಕ್ಲಾಸಿಕ್ ಥೀಮ್‌ನ ಸಮಕಾಲೀನ ನಿರೂಪಣೆಯಾಗಿದೆ. ಹೆಚ್ಚಿನ ಪ್ರಯೋಜನಗಳು (ಜ್ಯಾದಾ ಕಾ ಫಾಯ್ದಾ) ಧ್ಯೇಯೊದ್ದೇಶಕ್ಕೆ ಅನುಗುಣವಾಗಿ ಈ ಮಾದರಿಯು ಡಿಸ್ಕ್ ಬ್ರೇಕ್‌ಗಳು ಮತ್ತು ಎಂಜಿನ್ ಕಿಲ್ ಸ್ವಿಚ್‌ನೊಂದಿಗೆ ಹೆಚ್ಚಿನ ಸುರಕ್ಷತೆಯ ಭರವಸೆ ನೀಡುತ್ತವೆ. ಆಲ್-ಇನ್-ಒನ್ ಲಾಕ್, ಯುಎಸ್‌ಬಿ ಚಾರ್ಜರ್ ಮತ್ತು ಪಿಲಿಯನ್ ಬ್ಯಾಕ್ ರೆಸ್ಟ್ನ ಹೆಚ್ಚಿನ ಅನುಕೂಲತೆಯೊಂದಿಗೆ ಇದೊಂದು ಹೊಸ ಶೈಲಿಯ ಅನನ್ಯ ಕೊಡುಗೆಯಾಗಿದೆ. ಆಕರ್ಷಕ ಬೆಲೆಗೆ ಅತ್ಯಾಕರ್ಷಕ ಟಿವಿಎಸ್ 125 ರೇಸ್ ಎಡಿಶನ್ ಸ್ಕೂಟರ್ ಬಿಡುಗಡೆ! ಹೊಸ ಸಮಕಾಲೀನ ಪ್ರೀಮಿಯಂ ಕ್ಲಾಸಿಕ್ ದ್ವಿಚಕ್ರ ವಾಹನ ಆಗಿದೆ. ಈ ಮಾದರಿಯು ‘ಫಾಸ್ಟೆಸ್ಟ್ ಫೈವ್ ಮಿಲಿಯನ್ ವೆಹಿಕಲ್ಸ್ ಆನ್ ರೋಡ್’ ಮೈಲುಗಲ್ಲು ಸಾಧಿಸುವುದರ ಸಂಭ್ರಮಾಚರಿಸುತ್ತಿದೆ. ಲಕ್ಷಾಂತರ ಗ್ರಾಹಕರು Jupitarನಲ್ಲಿ ಇಟ್ಟಿರುವ ಅಸಾಮಾನ್ಯ ನಂಬಿಕೆ ಮತ್ತು ಪ್ರೀತಿಯಿಂದ ಇದು ಸಾಧ್ಯವಾಗಿದೆ ಎಂಬ ಅಂಶದ ಅಂಗೀಕಾರ ಮತ್ತು ಸಂಭ್ರಮಾಚರಣೆಯಾಗಿದೆ. ಬ್ರ‍್ಯಾಂಡ್‌ನ ವಾಗ್ದಾನವಾಗಿರುವ ‘ಹೆಚ್ಚಿನ ಪ್ರಯೋಜನ’ವನ್ನು (ಜ್ಯಾದಾ ಕಾ ಫಾಯ್ದಾ) ಸುಸ್ಥಿರ ರೀತಿಯಲ್ಲಿ ತಲುಪಿಸಲು ನೊಂದಿಗೆ ನಾವು ಮತ್ತೊಮ್ಮೆ ಬದ್ಧತೆ ತೋರುತ್ತಿದ್ದೇವೆ’ ಎಂದು ಟಿವಿಎಸ್ ಕಂಪನಿಯ ಅನಿರುದ್ಧ್ ಹಲ್ದಾರ್ ಹೇಳಿದ್ದಾರೆ. ಆಧುನಿಕ-ರೆಟ್ರೋ ಶೈಲಿಯ ರೋನಿನ್ ಬೈಕ್ ಬಿಡುಗಡೆ! ಹೊಸ ತಲೆಮಾರಿನ ಅಲ್ಯೂಮಿನಿಯಂ, ಕಡಿಮೆ-ಘರ್ಷಣೆಯ 110 ಸಿಸಿ ಎಂಜಿನ್‌ ಹೊಂದಿದೆ. ಇದು ನಂಬಲಾಗದ ಶಕ್ತಿಯ ಮಿಶ್ರಣ ನೀಡುತ್ತದೆ. ಉನ್ನತ ವೇಗವರ್ಧನೆ ಮತ್ತು ಅತ್ಯುತ್ತಮ ದರ್ಜೆಯ ಇಂಧನ-ದಕ್ಷತೆ ನೀಡುತ್ತದೆ. ಮೆಟಲ್ ಬಾಡಿ ಸ್ವರೂಪದ ರಸ್ತೆಯ ಪರಿಸ್ಥಿತಿಗೆ ಗಣನೀಯವಾಗಿ ಹೊಂದಿಕೊಳ್ಳುವ ಬಗೆಯಲ್ಲಿ ವಿನ್ಯಾಸಗೊಳಿಸಲಾಗಿದೆ, ಇದು ಉತ್ತಮ-ಕಾರ್ಯಕ್ಷಮತೆಯ ಸವಾರಿ ಗುಣಮಟ್ಟವನ್ನು ಉತ್ತಮ ಸವಾರಿ ಸೌಕರ್ಯದೊಂದಿಗೆ ನೀಡುತ್ತದೆ. ಈ ಮೂಲಕ ಸವಾರರ ಪಾಲಿಗೆ ಇದೊಂದು ಪರಿಪೂರ್ಣ, ಸಂವೇದನಾಶೀಲ ಒಡನಾಡಿಯನ್ನಾಗಿ ಮಾಡಿದೆ. ಈ ಸ್ಕೂಟರ್, ಟಿವಿಎಸ್ ಮೋಟರ್ ಪೇಟೆಂಟ್ ಇಕೊನೊಮೀಟರ್‌ನೊಂದಿಗೆ ಬರುತ್ತದೆ. ಇದು ‘ಇಕೊ ಮೋಡ್' ಮತ್ತು ‘ಪವರ್ ಮೋಡ್' ಎರಡರಲ್ಲೂ ಸವಾರರಿಗೆ ಮಾರ್ಗದರ್ಶನ ನೀಡುತ್ತದೆ. ಎಂಜಿನ್, ‘ಇಕೊ' ಮೋಡ್‌ನಲ್ಲಿ ಅತ್ಯುತ್ತಮ ದರ್ಜೆಯ ಇಂಧನ ಮಿತವ್ಯಯ ನೀಡುತ್ತದೆ.