ಕೈಗೆಟುಕುವ ದರದಲ್ಲಿ ಹೊಚ್ಚ ಹೊಸ ಆ್ಯಕ್ಟಿವಾ ಪ್ರೀಮಿಯಂ ಎಡಿಶನ್ ಸ್ಕೂಟರ್ ಬಿಡುಗಡೆ! 3 ಹೊಸ ಆಕರ್ಷಕ ಬಣ್ಣಗಳಲ್ಲಿ ನೂತನ ಆ್ಯಕ್ಟಿವಾ ಪ್ರಿಮಿಯಂ ಎಡಿಶನ್ ಸ್ಕೂಟರ್ ಬಿಡುಗೆಯಾಗಿದೆ. ಕೈಗೆಟುಕವ ದರದಲ್ಲಿ ಸ್ಕೂಟರ್ ಲಾಂಚ್ ಮಾಡಲಾಗಿದ್ದು, ಭಾರಿ ಬೇಡಿಕೆ ವ್ಯಕ್ತವಾಗಿದೆ. ನವದೆಹಲಿ(ಆ.19):ಕಳೆದ ಎರಡು ದಶಕಗಳಲ್ಲಿ ತನ್ನ ವಿಶ್ವಾಸಾರ್ಹತೆ ಮೂಲಕ ಲಕ್ಷಾಂತರ ಭಾರತೀಯರಲ್ಲಿ ಸಂತಸ ತುಂಬಿರುವ ʻಹೋಂಡಾ ಆಕ್ಟಿವಾʼ ಹೊಚ್ಚ ಹೊಸ 2022 ʻಆಕ್ಟಿವಾ ಪ್ರೀಮಿಯಂ ಎಡಿಶನ್ ಸ್ಕೂಟರ್ ಬಿಡುಗಡೆ ಮಾಡಿದೆ. ಆಕ್ಟಿವಾ ಪ್ರೀಮಿಯಂ ಆವೃತ್ತಿಯು 3 ಹೊಸ ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ - ಮ್ಯಾಟ್ ಸಾಂಗ್ರಿಯಾ ರೆಡ್ ಮೆಟಾಲಿಕ್, ಮ್ಯಾಟ್ ಮಾರ್ಷಲ್ ಗ್ರೀನ್ ಮೆಟಾಲಿಕ್ ಮತ್ತು ಪರ್ಲ್ ಸೈರನ್ ಬ್ಲೂ. ಹೊಸ ಆಕ್ಟಿವಾ ಪ್ರೀಮಿಯಂ ಆವೃತ್ತಿಯು ಡಿಲಕ್ಸ್ ರೂಪಾಂತರದಲ್ಲಿ ಮಾತ್ರ ಲಭ್ಯವಿರಲಿದ್ದು, ಇದರ ಬೆಲೆ 75,400 ರೂಪಾಯಿ (ಎಕ್ಸ್ ಶೋರೂಂ). ಸದ್ಯ ಸ್ಕೂಟರ್ ಬೆಲೆ ಸರಿಸುಮಾರು 1 ಲಕ್ಷ ರೂಪಾಯಿ ಆಸುಪಾಸಿನಲ್ಲಿದೆ. ಹೆಚ್ಚುವರಿ ಫೀಚರ್ಸ್ ಹೊಂದಿರುವ ಆ್ಯಕ್ಟಿವಾ ಪ್ರಿಮಿಯಂ 75,400 ರೂಪಾಯಿ ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ಹೋಂಡಾ ಆಕ್ಟಿವಾ ತನ್ನ ಸರ್ವಾಂಗೀಣ ನೋಟದೊಂದಿಗೆ ದೇಶದ ಎಲ್ಲಾ ವಯೋಮಾನದವರ ಸವಾರಿ ಅಗತ್ಯವನ್ನೂ ಪೂರೈಸಿದೆ. ಕಳೆದ ಎರಡು ದಶಕಗಳಲ್ಲಿ, ʻಆಕ್ಟಿವಾʼ ಬ್ರಾಂಡ್ ಕೇವಲ ತಾಂತ್ರಿಕ ವಿಕಸನಕ್ಕೆ ಸಾಕ್ಷಿಯಾಗಿರುವುದು ಮಾತ್ರವಲ್ಲದೆ ಅದರ ವಿನ್ಯಾಸ ಆಕರ್ಷಣೆಯನ್ನು ಹೆಚ್ಚಿಸಿಕೊಂಡಿದೆ. ಆ ಮೂಲಕ ಇದು ಪ್ರತಿ ಹೊಸ ನವೀಕರಣದೊಂದಿಗೆ ತೀಕ್ಷ್ಣ ಮತ್ತು ಟ್ರೆಂಡಿಯಾಗಿ ಮರ್ಪಟ್ಟಿದೆ. 2022ರ ಪ್ರೀಮಿಯಂ ಆವೃತ್ತಿಯೊಂದಿಗೆ, ಆಕ್ಟಿವಾವನ್ನು ಹೊಚ್ಚ ಹೊಸ ಅವತಾರದಲ್ಲಿ ಹೊರತರಲು ನಾವು ಸಂತಸಗೊಂಡಿದ್ದೇವೆ. ಅದು ಚಿನ್ನದ ಸ್ಪರ್ಶದೊಂದಿಗೆ ತನ್ನ ಗ್ರಾಹಕರಿಗೆ ಸಾಟಿಯಿಲ್ಲದ ಅತ್ಯಾಧುನಿಕತೆಯ ಭರವಸೆಯನ್ನು ನೀಡುತ್ತದೆ ಎಂದು ಹೋಂಡಾ ಮೋಟಾರ್‌ ಸೈಕಲ್ & ಸ್ಕೂಟರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕರು ಅತ್ಸುಷಿ ಒಗಾಟಾ ಹೇಳಿದ್ದಾರೆ. 70 ಸಾವಿರ ರೂ ಆ್ಯಕ್ಟಿವಾ ಸ್ಕೂಟರ್ ಫ್ಯಾನ್ಸಿ ನಂಬರ್‌ಗಾಗಿ ಮಾಲೀಕನಿಂದ 15.14 ಲಕ್ಷ ರೂ ಖರ್ಚು! ಹೊಚ್ಚ-ಹೊಸ ಚೆಲುವಿನೊಂದಿಗೆ ಪ್ರೀಮಿಯಂ ಡಿಸೈನ್ಹೊಚ್ಚ ಹೊಸ 2022 ʻಆಕ್ಟೀವಾ ಪ್ರೀಮಿಯಂ ಆವೃತ್ತಿʼಯು ಐಷಾರಾಮಿತನದ ಅತ್ಯುತ್ತಮ ಸಮತೋಲನದ ಜೊತೆಗೆ ವಿಫುಲತೆ, ವೈಭವವನ್ನು ಹೊರಸೂಸುತ್ತದೆ. ಮುಂಭಾಗದಿಂದ ಹಿಡಿದು, ಹಿಂಬದಿಯ ಗ್ರ್ಯಾಬ್‌ ರೈಲ್‌ವರೆಗೂ ಇದರ ಅದ್ಧೂರಿತನ ಗೋಚರಿಸುತ್ತದೆ. ಹೊಸ ಯುಗದ ಸವಾರರ ಗಮನ ಸೆಳೆಯುವ ಆಕ್ಟೀವಾ ಹೊಸ ಆವೃತ್ತಿಯು ತನ್ನ ಮುಂಭಾಗದ ಕವರ್‌ ಮೇಲೆ ಗೋಲ್ಡನ್ ಹೋಂಡಾ ಮಾರ್ಕ್‌ ಅನ್ನು ಹೊಂದಿದೆ. ಇದರ ಎರಡೂ ಬದಿಗಳು ಗೋಲ್ಡನ್ ಗಾರ್ನಿಶ್‌, 3ಡಿ ಗೋಲ್ಡನ್ 'ಆಕ್ಟಿವಾ' ಲಾಂಛನ ಮತ್ತು ಪ್ರೀಮಿಯಂ ಆವೃತ್ತಿಯ ಪಟ್ಟೆಗಳೊಂದಿಗೆ ಅಲಂಕರಿಸಲ್ಪಟ್ಟಿವೆ. ಆ ಮೂಲಕ ಇದು ಬೀದಿಗಳಲ್ಲಿ ತನ್ನ ಪಾರ್ಶ್ವ ಮತ್ತು ಮುಂಭಾಗದ ಕೋನಗಳಿಂದ ತನ್ನ ಘನ ಆಗಮನವನ್ನು ಪ್ರಕಟಿಸುತ್ತದೆ. Activa125 : ಮತ್ತಷ್ಟು ಆಕರ್ಷಕ, ಹೋಂಡಾ ಆ್ಯಕ್ಟೀವಾ 125 ಪ್ರೀಮಿಯಂ ಸ್ಕೂಟರ್ ಬಿಡುಗಡೆ! ಇದಲ್ಲದೆ, ಕಂದು ಬಣ್ಣದ ಸ್ಯಾಡಲ್ ಸೀಟುಗಳ ಜೊತೆಗೆ ಒಳ ಹೊದಿಕೆಗಳ ಮೇಲಿನ ಕೆಫೆ ಕಂದು ಬಣ್ಣಗಳು ಈ ಆವೃತ್ತಿಯ ಒಟ್ಟಾರೆ ಆಕರ್ಷಣೆಗೆ ಅತ್ಯಾಧುನಿಕ ಮತ್ತು ಪ್ರೀಮಿಯಂ ನೋಟವನ್ನು ನೀಡುತ್ತವೆ. ಹೊಸ ಆವೃತ್ತಿಯು ಚಿನ್ನದ ಬಣ್ಣದ ಚಕ್ರಗಳೊಂದಿಗೆ ತನ್ನ ಸ್ಟೈಲ್‌ ಅಂಶವನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಕಪ್ಪು ಬಣ್ಣದ ಔಟ್-ಫ್ರಂಟ್ ಸಸ್ಪೆನ್ಷನ್ ಮತ್ತು ಎಂಜಿನ್ ಕವರ್ ನೊಂದಿಗೆ ಒಟ್ಟಾರೆ ಛಾಯೆಯನ್ನು ಉಳಿಸಿಕೊಳ್ಳುತ್ತದೆ. ಎಂಜಿನ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ. 109.51cc, ಏರ್‌ಕೂಲ್ಡ್, 4 ಸ್ಟ್ರೋಕ್, ಎಂಜಿನ್ ಹೊಂದಿದ್ದು, 7.80bhp ಪವರ್( 8,000rpm) ಹಾಗೂ 8.84Nm(5,500rpm) ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 130mm ಫ್ರಂಟ್ ಹಾಗೂ ರೇರ್ ಡ್ರಮ್ ಬ್ರೇಕ್ ಸೇರಿದಂತೆ ಹಲುವು ಹೊಸತನಗಳು ಈ ಸ್ಕೂಟರ್‌ನಲ್ಲಿದೆ.