ಮೇನಲ್ಲಿ ದಾಖಲೆಯ ಮಾರಾಟ ದಾಖಲಿಸಿದ ಟಾಟಾ ನೆಕ್ಸಾನ್: ಅಗ್ರಸ್ಥಾನದತ್ತ ಹೆಜ್ಜೆ ಟಾಟಾನೆಕ್ಸಾನ್ಮೇತಿಂಗಳಲ್ಲಿಹೆಚ್ಚುಮಾರಾಟವಾದಕಾರುಗಳಪಟ್ಟಿಯಲ್ಲಿನಂಬರ್-1ಸ್ಥಾನದಿಂದಕೇವಲಒಂದುಹೆಜ್ಜೆದೂರದಲ್ಲಿದೆ. ಕಳೆದ ಕೆಲ ವರ್ಷಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಯಶಸ್ಸು ದಾಖಲಿಸಿರುತ್ತಿರುವ ದೇಶದ ಆಟೋಮೊಬೈಲ್ ಕಂಪನಿ ಟಾಟಾ ಮೋಟಾರ್ಸ್ ( ), ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದೆ. ಕಳೆದ ಕೆಲವು ತಿಂಗಳುಗಳಿಂದ, ಗ್ರಾಹಕರು ಹೆಚ್ಚಾಗಿ ಟಾಟಾ ಕಾರುಗಳ ಮೊರೆ ಹೋಗುತ್ತಿದ್ದು, ಅದರಲ್ಲೂ ಹೆಚ್ಚಿನ ಗ್ರಾಹಕರು ಟಾಟಾ ನೆಕ್ಸಾನ್ಗೆ ( )ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಟಾಟಾ ವಾಹನಗಳ ಮಾರಾಟದ ಹೆಚ್ಚಳದ ಹಿಂದಿನ ಪ್ರಮುಖ ಕಾರಣವೆಂದರೆ ಅದರ ಸುರಕ್ಷತಾ ಅಂಶಗಳು. ಗ್ಲೋಬಲ್ ಎನ್ಸಿಎಪಿ ( ) ನಿಂದ ಸುರಕ್ಷತೆಗಾಗಿ ಬಹುತೇಕ ಎಲ್ಲಾ ಟಾಟಾ ಕಾರುಗಳು 4 ರಿಂದ 5 ಸ್ಟಾರ್ಗಳನ್ನು ಪಡೆದುಕೊಂಡಿದೆ. ಟಾಟಾ ನೆಕ್ಸನ್ 5 ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ.ಟಾಟಾ ನೆಕ್ಸಾನ್ ದಾಖಲೆಯ ಮಾರಾಟಟಾಟಾ ನೆಕ್ಸಾನ್ ಮೇ ತಿಂಗಳಲ್ಲಿ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ನಂಬರ್-1 ಸ್ಥಾನದಿಂದ ಕೇವಲ ಒಂದು ಹೆಜ್ಜೆ ದೂರದಲ್ಲಿದೆ. ಟಾಟಾ ನೆಕ್ಸಾನ್ 2022 ರ ಮೇನಲ್ಲಿ ಒಟ್ಟು 16,614 ವಾಹನಗಳನ್ನು ಮಾರಾಟ ಮಾಡಿದ್ದರೆ, ಮಾರುತಿ ವ್ಯಾಗನ್ಆರ್ ಮೊದಲ ಸ್ಥಾನದಲ್ಲಿದೆ. ಇದು ಒಟ್ಟು 16,814 ವಾಹನಗಳನ್ನು ಮಾರಾಟ ಮಾಡಿದೆ. ಅಂದರೆ ಈ ಕಾರುಗಳ ನಡುವೆ ಇರುವುದು ಕೇವಲ 200 ವಾಹನಗಳ ಅಂತರವಷ್ಟೇ. ಮೇ 2022 ರಲ್ಲಿ ಹೆಚ್ಚು ಮಾರಾಟವಾಗಿರುವ ಕಾರುಗಳು: ಮೇತಿಂಗಳಲ್ಲಿ ಟಾಪ್-10 ಅತ್ಯುತ್ತಮ ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಮಾರುತಿ ಪ್ರಾಬಲ್ಯವನ್ನು ಮುಂದುವರೆಸಿದೆ. ಟಾಪ್-10 ಪಟ್ಟಿಯಲ್ಲಿ ಎಂಟು ವಾಹನಗಳು ಮಾರುತಿ ಸುಜುಕಿಗೆ ಸೇರಿವೆ. ಉಳಿದ ಎರಡರಲ್ಲಿ ಟಾಟಾ ನೆಕ್ಸಾನ್ ಎರಡನೇ ಸ್ಥಾನದಲ್ಲಿದೆ ಮತ್ತು ಹುಂಡೈ ಕ್ರೆಟಾ 8 ನೇ ಸ್ಥಾನದಲ್ಲಿದೆ. ಇದು ಮೇ ತಿಂಗಳಲ್ಲಿ ಒಟ್ಟು 10,972 ವಾಹನಗಳನ್ನು ಮಾರಾಟ ಮಾಡಿದೆ.ಕಳೆದ ಕೆಲವು ತಿಂಗಳುಗಳಲ್ಲಿ ಟಾಟಾದ ಮಾರಾಟದ ವೇಗ ಹೆಚ್ಚಿದೆ ಮತ್ತು ಕಂಪನಿಯು ಹೆಚ್ಚು ಮಾರಾಟವಾದ ಪಟ್ಟಿಯಲ್ಲಿ ಎರಡನೇ ಸಂಖ್ಯೆಯನ್ನು ತಲುಪಿದೆ. ಶೀಘ್ರದಲ್ಲೇ ಅದು ಅಗ್ರಸ್ಥಾನಕ್ಕೇರುವ ಸಾಧ್ಯತೆಯಿದೆ. ಆದರೆ, , ಕಳೆದ ಕೆಲವು ವರ್ಷಗಳಿಂದ, ಮಾರುತಿ ನಿರಂತರವಾಗಿ ನಂಬರ್ -1 ದಲ್ಲಿಯೇ ಇದೆ. ಈಗ ಅದು ಬದಲಾಗುವ ಲಕ್ಷಣಗಳು ಕಾಣುತ್ತಿವೆಈ ಮಧ್ಯೆ, ಮಾರುತಿ ಸುಜುಕಿ ಬ್ರೀಝಾ ಸೇರಿದಂತೆ ಹಲವು ಹೊಸ ವಾಹನಗಳನ್ನು ತರುತ್ತಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಸ್ಪರ್ಧೆ ಕುತೂಹಲ ಮೂಡಿಸಲಿದೆ. ಮೇ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ಕಾರುಗಳು:ಮಾರುತಿ ವ್ಯಾಗನ್ ಆರ್ ( 16,814), ಟಾಟಾ ನೆಕ್ಸಾನ್ (16,614), ಮಾರುತಿ ಸ್ವಿಫ್ಟ್ (14,133), ಮಾರುತಿ ಬಲೆನೋ (13,970), ಮಾರುತಿ ಆಲ್ಟೋ ( 12,933) ಮಾರುತಿ ಎರ್ಟಿಗಾ (12,226), ಮಾರುತಿ ಡಿಸೈರ್ (11,603), ಹ್ಯುಂಡೈ ಕ್ರೇಟಾ (10,973), ಮಾರುತಿ ಎಕೋ (10,482), ಮಾರುತಿ ಬ್ರೀಜಾ (10,312) ಟಾಟಾ ನೆಕ್ಸಾನ್ ಬೆಲೆ 7.55 ಲಕ್ಷ ರೂ.ಗಳಿಂದ 13.90 ಲಕ್ಷ ರೂ.ಗಳವರೆಗೆ ಇದೆ. ಇದು ಐದು ವಿಶಾಲವಾದ ಟ್ರಿಮ್ಗಳಲ್ಲಿ ಬರುತ್ತದೆ: ಎಕ್ಸ್ಎ, ಎಕ್ಸ್ಎಂ, ಎಕ್ಸ್ಝೆಡ್,ಎಕ್ಸ್ಝೆಡ್ ಪ್ಲಸ್ ಮತ್ತು ಎಕ್ಸ್ಝೆಡ್ ಪ್ಲಸ್ (ಒ) ( , , , +, ಮತ್ತು +()). ಇದು ಡಾರ್ಕ್ ಆವೃತ್ತಿಯಲ್ಲಿ ಕೂಡ ಲಭ್ಯವಿದೆ. ಇದು ಐದು ಆಸನಗಳ ಉಪ-ಕಾಂಪ್ಯಾಕ್ಟ್ ಆಗಿದೆ. ಟಾಟಾ ನೆಕ್ಸನ್ 1.2-ಲೀಟರ್ ಟರ್ಬೊ-ಪೆಟ್ರೋಲ್ (120PS/170ಎನ್ಎಂ) ಮತ್ತು 1.5-ಲೀಟರ್ ಟರ್ಬೊ-ಡೀಸೆಲ್ (110PS/260ಎನ್ಎಂ) ಅನ್ನು ಪಡೆಯುತ್ತದೆ, ಪ್ರತಿಯೊಂದೂ ಸ್ಟ್ಯಾಂಡರ್ಡ್ 6-ಸ್ಪೀಡ್ ಮತ್ತು ಐಚ್ಛಿಕ 6-ಸ್ಪೀಡ್ AMTಗಳನ್ನು ಒಳಗೊಂಡಿದೆ.