ಜೂನ್ 27ರಂದು ಮಹೀಂದ್ರಾ ಸ್ಕಾರ್ಪಿಯೋ- ಎನ್ ಬಿಡುಗಡೆ ಮಹೀಂದ್ರಾ ಆ್ಯಂಡ್‌ ಮಹೀಂದ್ರಾತನ್ನಬಹುನಿರೀಕ್ಷಿತ ಎಸ್‌ಯುವಿ‘ಸ್ಕಾರ್ಪಿಯೋ-ಎನ್‌’ ('-')ಜೂನ್27ರಂದುಬಿಡುಗಡೆಯಾಗಲಿದೆ ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ( & ) ಇಂದು ತನ್ನ ಬಹುನಿರೀಕ್ಷಿತ ಎಸ್‌ಯುವಿ () ಯ ಬ್ರ್ಯಾಂಡ್ ಹೆಸರನ್ನು ಘೋಷಿಸಿದೆ. ಝೆಡ್‌101 (Z101) ಮಾದರಿಗೆ ಕಂಪನಿ ‘ಸ್ಕಾರ್ಪಿಯೋ-ಎನ್‌’ ('-') ಎಂದು ಹೊಂದಿದೆ. ಈ ಎಸ್‌ಯುವಿ ಅನ್ನು ಜೂನ್ 27 ರಂದು ಬಿಡುಗಡೆಯಾಗಲಿದೆ. ಅದನ್ನು ಪುಣೆಯ ಚಕನ್‌ನಲ್ಲಿರುವ ಕಂಪನಿಯ ಸೌಲಭ್ಯದಲ್ಲಿ ತಯಾರಿಸಲಾಗುತ್ತಿದೆ. ಇದು ಕಳೆದೆರಡು ದಶಕಗಳಲ್ಲಿ ಜನಪ್ರಿಯಗೊಂಡಿರುವ ಸ್ಕಾರ್ಪಿಯೋ ಕ್ಲಾಸಿಕ್ ಆಗಿ ಮುಂದುವರಿಯಲಿದೆ ಎಂದು ಮಹೀಂದ್ರಾ ಹೇಳಿದೆ. "ಹೊಸ ಸ್ಕಾರ್ಪಿಯೋ-ಎನ್ ಡಿ-ಸೆಗ್ಮೆಂಟ್ ಎಸ್‌ಯುವಿ ( --- ) ವರ್ಗಕ್ಕೆ ಹೊಸ ಸೇರ್ಪಡೆಯಾಗಲಿದೆ ಮತ್ತು ಪೂರ್ಣ-ಗಾತ್ರದ ಅಧಿಕೃತ ಎಸ್‌ಯುವಿಯನ್ನು ಯುವ ಹಾಗೂ ಟೆಕ್‌ ಪ್ರಿಯ ಯುವಕರಿಗಾಘಿ ವಿನ್ಯಾಸಗೊಳಿಸಲಾಗಿದೆ" ಎಂದು ಮುಂಬೈ ಮೂಲದ ವಾಹನ ತಯಾರಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ‘ಬಿಗ್‌ ಡ್ಯಾಡಿ ಆಫ್‌ ಎಸ್‌ಯುವಿ’ ('') ಎಂದು ಮಾರುಕಟ್ಟೆಗೆ ಬಂದಿರುವ ಮಹೀಂದ್ರಾ ಸ್ಕಾರ್ಪಿಯೊ-ಎನ್ ಎಸ್‌ಯುವಿ ಪ್ರೀಮಿಯಂ ಇಂಟೀರಿಯರ್‌ ಹಾಗೂ ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿದೆ. 2022 ಸ್ಕಾರ್ಪಿಯೊ-ಎನ್ ಗ್ಯಾಸೋಲಿನ್ ಮತ್ತು ಡೀಸೆಲ್ ಎಂಜಿನ್‌ಗಳಿಂದ ಚಾಲಿತವಾಗಿದ್ದು, ಮ್ಯಾನುಯಲ್ ಮತ್ತು ಸ್ವಯಂಚಾಲಿತ ಟ್ರಾನ್ಸ್‌ಮಿಷನ್‌ ಆಯ್ಕೆಯೊಂದಿಗೆ. ಇದನ್ನು 4x4 ಆಯ್ಕೆಯೊಂದಿಗೆ ಬರಲಿದೆ. ಇದನ್ನೂ ಓದಿ:ತಾಯಂದಿರ ದಿನದಂದು ತಮಿಳುನಾಡಿನ ಇಡ್ಲಿ ಅಮ್ಮನಿಗೆ ಹೊಸ ಮನೆ ಉಡುಗೊರೆ ನೀಡಿದ ಆನಂದ್ ಮಹೀಂದ್ರಾ ಮಹೀಂದ್ರ ಮತ್ತು ಮಹೀಂದ್ರ ಲಿಮಿಟೆಡ್‌ (& .)ನ ಆಟೋಮೋಟಿವ್ ವಿಭಾಗದ ಅಧ್ಯಕ್ಷ ವೀಜಯ್ ನಕ್ರಾ, "ಮಹೀಂದ್ರಾ ಉತ್ಪನ್ನಗಳಿಗೆ ಸ್ಕಾರ್ಪಿಯೋ ಒಂದು ಹೆಗ್ಗುರುತಾಗಿದ್ದು, ಭಾರತೀಯ ಆಟೋಮೊಬೈಲ್ ಉದ್ಯಮದಲ್ಲಿ ಐಕಾನಿಕ್ ಬ್ರ್ಯಾಂಡ್ ಆಗಿದೆ. ಆಲ್-ನ್ಯೂ ಸ್ಕಾರ್ಪಿಯೊ-ಎನ್ ಭಾರತದಲ್ಲಿ ವಿಭಾಗದಲ್ಲಿ ಬೆಂಚ್‌ಮಾರ್ಕ್‌ಗಳನ್ನು ಮರುಸೃಷ್ಟಿಸುವ ನಿರೀಕ್ಷೆಯಿದೆ ಎಂದರು. ಹೊಸ ಮಹೀಂದ್ರ ಸ್ಕಾರ್ಪಿಯೊ-ಎನ್ ಅನ್ನು ಚೆನ್ನೈ ಬಳಿಯ ಮಹೀಂದ್ರಾ ರಿಸರ್ಚ್ ವ್ಯಾಲಿ ( - ), ಅಮೆರಿಕ () ಮಹೀಂದ್ರಾ ನಾರ್ತ್ ಅಮೇರಿಕನ್ ಟೆಕ್ನಿಕಲ್ ಸೆಂಟರ್ (ಎಂಎನ್‌ಎಟಿಸಿ) ಮತ್ತು ಮುಂಬೈನ ಮಹೀಂದ್ರಾ ಡಿಸೈನ್ ಸ್ಟುಡಿಯೋ ತಂಡಗಳಿಂದ ವಿನ್ಯಾಸಗೊಳಿಸಲಾಗಿದೆ. ಕ್ರೋಮ್ ವರ್ಟಿಕಲ್ ಸ್ಲ್ಯಾಟ್‌ ಇರುವ ಹೊಸ ಗ್ರಿಲ್ ಮತ್ತು ಇಂಡಿಕೇಟ್‌ಗಳೊಂದಿಗೆ ಡ್ಯುಯಲ್-ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳನ್ನು ಅಳವಡಿಸಲಾಗಿದೆ. ಮರುವಿನ್ಯಾಸಗೊಳಿಸಲಾದ ಬಂಪರ್ ಮೆಶ್ ಮತ್ತು ಹೊಸ ಸಿ-ಆಕಾರದ ಎಲ್‌ಇಡಿ ಡಿಆರ್‌ಎಲ್‌ ( ) ಗಳು ಇದರ ವಿಶೇಷವಾಗಿರಲಿದೆ. ಎಸ್‌ಯುವಿಯ ಬದಿಭಾಗಗಳಲ್ಲಿ ಎಕ್ಸ್‌ಯುವಿ700 (XUV700) ನಿಂದ ಸ್ಫೂರ್ತಿ ಪಡೆದ ಬೀಫ್-ಅಪ್ ಬೆಲ್ಟ್‌ಲೈನ್ ಅಳವಡಿಸಲಾಗಿದೆ. ವಾಹನವು ಡ್ಯುಯಲ್-ಟೋನ್ ಟ್ವಿನ್-ಸ್ಪೋಕ್ ಅಲಾಯ್ ವೀಲ್‌ಗಳ ಸೆಟ್‌ ಇದೆ. ಡೋರ್ ಹ್ಯಾಂಡಲ್‌ನಲ್ಲಿ ಕ್ರೋಮ್ ಫಿನಿಷಿಂಗ್‌ ಹಿಂಭಾಗದಲ್ಲಿ ವೋಲ್ವೋ ರೀತಿಯ ಸಿಗ್ನೇಚರ್ ಎಲ್‌ಇಡಿ () ಟೈಲ್‌ಲೈಟ್‌ಗಳಿವೆ. ಇದನ್ನೂ ಓದಿ:ಎಲೆಕ್ಟ್ರಿಕ್ ವಾಹನಗಳ ಉಪಕರಣ ಉತ್ಪಾದನೆ ಚುರುಕು, ಮಹೀಂದ್ರ ವೋಕ್ಸ್‌ವ್ಯಾಗನ್ ಒಪ್ಪಂದ! ಸ್ಕಾರ್ಪಿಯೋ 2022ರ ಇಂಟೀರಿಯರ್‌ ಮಾಹಿತಿಯನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ, ಆದಾಗ್ಯೂ, ಈಗಾಗಲೇ ತಿಳಿದಿರುವ ಮಾಹಿತಿ ಪ್ರಕಾರ, ಸ್ಕಾರ್ಪಿಯೋ-ಎನ್ ಸನ್‌ರೂಫ್, ಮಲ್ಟಿ-ಫಂಕ್ಷನ್ ಸ್ಟೀರಿಂಗ್ ವೀಲ್, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್ ಮತ್ತು ಲೆದರ್ ಅಪ್ಹೋಲ್ಸ್ಟರಿಯನ್ನು ಪಡೆಯುವ ನಿರೀಕ್ಷೆಯಿದೆ. ಹೊಸ ಪೀಳಿಗೆಯ ಸ್ಕಾರ್ಪಿಯೋ 6 ಸ್ಪೀಡ್‌ ಮ್ಯಾನ್ವಯುಲ್‌ ( ) ಟ್ರಾನ್ಸ್‌ಮಿಷನ್‌ ಅನ್ನು ಹೊಂದಿದೆ. ಈ ಬ್ರ್ಯಾಂಡ್‌ 6 ಸ್ಪೀಡ್‌ ಟಾರ್ಕ್‌ ಕನ್ವರ್ಟರ್‌ ಆಟೊಮೆಟಿಕ್‌ ಗೇರ್‌ಬಾಕ್ಸ್‌ ಯೂನಿಟ್‌ ಅನ್ನು ಅಳವಡಿಸಲಿದೆ. ಎಸ್‌ಯುವಿಯ ಫೀಚರ್‌ಗಳ ಬಗ್ಗೆ ಕಂಪನಿ ಇನ್ನೂ ಅಧಿಕೃತ ಮಾಹಿತ ಹೊರಡಿಸಲಬೇಕಿದೆ. ಮಹೀಂದ್ರಾ ಕಂಪನಿ 2021ರಲ್ಲಿ ಎಕ್ಸ್‌ಯುವಿ 700 ( 700) ಬಿಡುಗಡೆಗೊಳಿಸಿದ್ದು, ಭಾರಿ ಬೇಡಿಕೆ ಪಡೆದುಕೊಂಡಿದೆ. ಅಡಾಸ್‌ ತಂತ್ರಜ್ಞಾನ ಹೊಂದಿರುವ ಈ ಎಸ್‌ಯುವಿ, ನಿರೀಕ್ಷೆಗೂ ಮೀರಿ ಬುಕಿಂಗ್‌ ಪಡೆದುಕೊಂಡಿದ್ದು, 22 ಲಕ್ಷ ರೂ.ಗಳಿಂದ 29 ಲಕ್ಷ ರೂ.ಗಳವರೆಗೆ ದರ ನಿಗದಿಯಾಗಿದೆ.