ಮಹೀಂದ್ರಾ ಥಾರ್‌ನಲ್ಲಿ ಪ್ರಧಾನಿ ಮೋದಿ ರೋಡ್ ಶೋ: ಧನ್ಯವಾದ ಅರ್ಪಿಸಿದ ಆನಂದ್ ಮಹೀಂದ್ರ ಗುಜರಾತ್ವಿಧಾನಸಭೆಚುನಾವಣಾ ಪ್ರಚಾರದಲ್ಲಿ ತೊಡಗಿರುವಮುನ್ನಪ್ರಧಾನಿನರೇಂದ್ರಮೋದಿತಮ್ಮ ರೋಡ್‌ಶೋಗಳಲ್ಲಿ ಮಹೀಂದ್ರ ಥಾರ್‌ ಓಪನ್ ಜೀಪ್‌ ಬಳಸಿರುವುದಕ್ಕೆ ಮಹೀಂದ್ರಾಗ್ರೂಪ್ಅಧ್ಯಕ್ಷಆನಂದ್ ಸಂತಸ :ಮುಂಬರುವ ಗುಜರಾತ್ ವಿಧಾನಸಭೆ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಮುನ್ನ ಪ್ರಧಾನಿ ನರೇಂದ್ರ ಮೋದಿ ತಮ್ಮ ರೋಡ್ಶೋಗಳಲ್ಲಿ ಮಹೀಂದ್ರ ಥಾರ್ ( ) ಓಪನ್ ಜೀಪ್ ಬಳಸಿರುವುದಕ್ಕೆ ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಸಂತಸ ವ್ಯಕ್ತಪಡಿಸಿದ್ದಾರೆ.ಪ್ರಧಾನಿ ಮೋದಿ ಅವರು ಅವರು ಇತ್ತೀಚೆಗೆ ತಮ್ಮ ತವರು ರಾಜ್ಯ ಗುಜರಾತ್ನಲ್ಲಿ ಮೂರು ರೋಡ್ಶೋಗಳನ್ನು ( ) ನಡೆಸಿದರು. ಇತ್ತೀಚೆಗೆ ಉತ್ತರಪ್ರದೇಶ, ಹರಿಯಾಣ, ಉತ್ತರಾಖಂಡ ಮತ್ತು ಗೋವಾದಲ್ಲಿ ಬಿಜೆಪಿಯ ಗೆಲುವಿನ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷ ವಿಜಯೋತ್ಸವ ಹಮ್ಮಿಕೊಂಡಿತ್ತು. ಈ ರೋಡ್ಶೋ ಸಮಯದಲ್ಲಿ, ಪಿಎಂ ಮೋದಿ ಹೊಸ-ಜೆನ್ ಮಹೀಂದ್ರ ಥಾರ್ನ ಓಪನ್-ಟಾಪ್ ಮಾದರಿಯಲ್ಲಿ ಪ್ರಯಾಣಿಸಿದ್ದರು. ಇದು ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರಿಗೆ ಸಂತಸ ತಂದಿದೆ. ತಮ್ಮ ವಿಜಯೋತ್ಸವದ ಮೆರವಣಿಗೆಗಾಗಿ ಮೇಡ್-ಇನ್-ಇಂಡಿಯಾ ವಾಹನವನ್ನು ಬಳಸಿದ್ದಕ್ಕಾಗಿ ಪ್ರಧಾನ ಮಂತ್ರಿಗೆ ಸಾಮಾಜಿಕ ಮಾಧ್ಯಮದ ಪೋಸ್ಟ್ ಮೂಲಕ ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ: ಕಟ್ಟು ನಿಟ್ಟಾಗಿ ಟ್ರಾಫಿಕ್ ರೂಲ್ಸ್ ಪಾಲಿಸ್ತಾರೆ ಮಿಜೋರಾಂ ಜನ, ದೇಶದ ಗಮಸೆಳೆಯಿತು ಮಹೀಂದ್ರ ಟ್ವೀಟ್! ತಮ್ಮ ಟ್ವೀಟ್ನಲ್ಲಿ ಅವರು, "ಧನ್ಯವಾದಗಳು @ ಜೀ ವಿಜಯೋತ್ಸವದ ಮೆರವಣಿಗೆಗಾಗಿ ಭಾರತದಲ್ಲಿ ತಯಾರಿಸಿದ ವಾಹನ ಬಳಸಿದ್ದಕ್ಕಾಗಿ. ಇದಕ್ಕಿಂತ ಉತ್ತಮವಾದದ್ದೇನೂ ಇಲ್ಲ!" ಎಂದಿದ್ದಾರೆ.ಮಹೀಂದ್ರ ಥಾರ್ ಸ್ಥಿರ ಹಾರ್ಡ್-ಟಾಪ್ ಆವೃತ್ತಿ ಮತ್ತು ಕನ್ವರ್ಟಿಬಲ್ ಸಾಫ್ಟ್-ಟಾಪ್ ಆವೃತ್ತಿಯಲ್ಲಿ ದೊರೆಯುತ್ತದೆ. ಪ್ರಧಾಣಿ ಮೋದಿ ಅವರ ರೋಡ್ಶೋಗೆ ಬಳಸಲಾದ ಮಾದರಿಯು ಕನ್ವರ್ಟಿಬಲ್ ಸಾಫ್ಟ್-ಟಾಪ್ ಆವೃತ್ತಿ ಎಂದು ತಿಳಿದುಬಂದಿದೆ. ಆದರೆ, ಈ ಮಾದರಿ ಸಾಹಸ-ಆಧಾರಿತ ಎಎಕ್ಸ್ ಟ್ರಿಮ್ ಅಥವಾ ಜೀವನಶೈಲಿ-ಆಧಾರಿತ ಎಕ್ಸ್ ವೇರಿಯಂಟ್ ಎಂಬುದು ಸ್ಪಷ್ಟವಾಗಿಲ್ಲ. ಪ್ರಧಾನಿ ಮೋಧಿ ಮಹೀಂದ್ರ ಥಾರ್ನಲ್ಲಿ ಕಾಣಿಸಿಕೊಂಡಿರುವುದು ಇದೇ ಮೊದಲು. ಇದು ವಿಶೇಷ ಸಂರಕ್ಷಣಾ ಗುಂಪಿನ ( ಯ) ಫ್ಲೀಟ್ನ ಕಾರಿನಂತೆ ತೋರುತ್ತಿಲ್ಲ, ಏಕೆಂದರೆ ಇದು ಎಂದಿನಂತೆ ಶಸ್ತ್ರಸಜ್ಜಿತವಾಗಿಲ್ಲ ಮತ್ತು ತೆರೆದ ಕಾರಿನಲ್ಲಿ ಪ್ರಧಾನಿ ಪ್ರಯಾಣಿಸುತ್ತಿದ್ದಾರೆ. ಸಾಮಾನ್ಯವಾಗಿ ಪ್ರಧಾನಿ ತಮ್ಮ ಎಲ್ಲಾ ರ್ಯಾಲಿಗಳಿಗೆ ಅವರಿಗೆ ಮೀಸಲಿರುವ ವಾಹನಗಳಲ್ಲಿಯೇ ಕಾಣಿಸಿಕೊಳ್ಳುತ್ತಿದ್ದರು. ಈ ಕಾರು ಬಹುಶಃ ಸಾಮಾನ್ಯ ನಾಗರಿಕ ಎಸ್ಯುವಿಯಾಗಿದ್ದು, ಇದನ್ನು ರೋಡ್ಶೋಗಾಗಿಯೇ ವಿಶೇಷವಾಗಿಯೇ ಮಾರ್ಪಡಿಸಿ, ಅಲಂಕರಿಸಲಾಗಿದೆ. ಪ್ರಧಾನ ಮಂತ್ರಿಗಳು ಸಾಮಾನ್ಯವಾಗಿ ತಮ್ಮ ವಿವಿಐಪಿ ಸ್ಥಾನಮಾನಕ್ಕೆ ಅನುಗುಣವಾಗಿ, ಬಿಎಂಡಬ್ಲ್ಯು 7 ( 7)-ಸರಣಿಯ ಶಸ್ತ್ರಸಜ್ಜಿತ ಆವೃತ್ತಿಗಳು, ಲ್ಯಾಂಡ್ ರೋವರ್ ರೇಂಜ್ ರೋವರ್ ವೋಗ್ ( ) , ಟೊಯೋಟಾ ಲ್ಯಾಂಡ್ ಕ್ರೂಸರ್ ( ) ಸೇರಿದಂತೆ ಶಸ್ತ್ರಸಜ್ಜಿತ ವಾಹನಗಳಲ್ಲಿ ಪ್ರಯಾಣಿಸುತ್ತಾರೆ. ಇತ್ತೀಚೆಗೆ, ಅವರು - S650 ಗಾರ್ಡ್ ಅನ್ನು ತಮ್ಮ ಫ್ಲೀಟ್ಗೆ ಸೇರಿಸಿದ್ದಾರೆ.ಇದು VR10 ಮಟ್ಟದ ಬ್ಯಾಲಿಸ್ಟಿಕ್ ಪ್ರೊಟೆಕ್ಷನ್ ರೇಟಿಂಗ್ ಅನ್ನು ನೀಡುತ್ತದೆ, ಇದು ಸಾಮಾನ್ಯ ಉತ್ಪಾದನಾ ಕಾರಿನಲ್ಲಿ ಲಭ್ಯವಿರುವ ಉನ್ನತ ಮಟ್ಟದ ರಕ್ಷಣೆಯಾಗಿದೆ. ಇದನ್ನೂ ಓದಿ:ತವರಿನಲ್ಲಿ ಮೋದಿ : ಗಾಂಧಿನಗರದಲ್ಲಿ ಭರ್ಜರಿ ರೋಡ್‌ ಶೋ ನೀವು ಪಡೆಯುವ ವೇರಿಯಂಟ್ಗಳನ್ನು ಅವಲಂಬಿಸಿ, ಮಹೀಂದ್ರ ಥಾರ್ ಎಲ್ಇಡಿ ಡಿಆರ್ಎಲ್ಗಳು ( ಗಳು), ಮಿಶ್ರಲೋಹದ ಚಕ್ರಗಳು, ಸ್ವಯಂಚಾಲಿತ ಹವಾಮಾನ ನಿಯಂತ್ರಣ, ಮೌಂಟ್, ಆ್ಯಪಲ್ ಕಾರ್ ಪ್ಲೇ ( ) ಮತ್ತು ಆ್ಯಂಡ್ರಾಯ್ಡ್ ಆಟೋ ( ) ಜೊತೆಗೆ ಟಚ್ಸ್ಕ್ರೀನ್ ಸೌಲಭ್ಯವನ್ನು ಒದಗಿಸುತ್ತದೆ. ಥಾರ್ ಅನ್ನು 2.0-ಲೀಟರ್ ಪೆಟ್ರೋಲ್ ಮತ್ತು 2.2-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಬರುತ್ತದೆ. ಎರಡನ್ನೂ 6-ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ನೊಂದಿಗೆ ಜೋಡಿಸಲಾಗಿದೆ, ಆದರೆ 4x4 ಎಲ್ಲಾ ಮಾದರಿಗಳಲ್ಲಿ ಪ್ರಮಾಣಿತವಾಗಿದೆ. ಯ ಬೆಲೆಗಳು 12.79 ಲಕ್ಷ ರೂ.ಗಳಿಂದ 15.09 ಲಕ್ಷ ರೂ.ಗಳವರೆಗೆ ಇರುತ್ತದೆ