ಭಾರತದ ಅತ್ಯಂತ ಹಳೆಯ ವಿಂಟೇಜ್‌ ಕಾರುಗಳ ಪ್ರದರ್ಶನ... ನವದೆಹಲಿ(ಮಾ.8): 100 ವರ್ಷಕ್ಕಿಂತಲೂ ಹಳೆಯ ವಿಂಟೇಜ್‌ ಕಾರುಗಳ ಪ್ರದರ್ಶನಕ್ಕೆ ರಾಷ್ಟ್ರ ರಾಜಧಾನಿ ದೆಹಲಿ ಸಾಕ್ಷಿಯಾಯ್ತು. ಭಾನುವಾರ ಉದ್ಘಾಟನೆಗೊಂಡ ಈ ಅತ್ಯಂತ ಹಳೆಯ ವಿಂಟೇಜ್‌ ಕಾರುಗಳ ಪ್ರದರ್ಶನವನ್ನು ವಾಯುಸೇನಾ ಮುಖ್ಯಸ್ಥ ಏರ್‌ ಚೀಫ್‌ ಮಾರ್ಷಲ್‌ ವಿ.ಆರ್‌ ಚೌಧರಿ ಉದ್ಘಾಟಿಸಿದರು. ಸ್ಟೇಟ್ಸ್‌ಮನ್ ವಿಂಟೇಜ್‌ ಕಾರುಗಳ ಈ ಪ್ರದರ್ಶನದಲ್ಲಿ ಜಾನ್‌ ಮೋರಿಸ್ ಫೈರ್ ಎಂಜಿನ್‌ ಈ ಪ್ರದರ್ಶನದ ಕೇಂದ್ರಬಿಂದುವಾಗಿ ಎಲ್ಲರನ್ನು ಸೆಳೆಯಿತು. ವಿಂಟೇಜ್ ಕಾರು ಪ್ರೇಮಿಗಳಿಗಾಗಿ ಒಟ್ಟು 52 ಕಾರುಗಳನ್ನು ಪ್ರದರ್ಶಿಸಲಾಯಿತು. ಇದರಲ್ಲಿ 25 ವಿಂಟೇಜ್‌ಗಳು, 27 ಇತರ ಕ್ಯಾಸಿಕ್‌ಗಳು ಸೇರಿ ಐವತ್ತಕ್ಕೂ ಹೆಚ್ಚು ವಿಭಾಗಗಳು ಈ ಪ್ರದರ್ಶನದಲ್ಲಿದ್ದವು. ವಿಂಟೇಜ್‌ ಕಾರು ಪ್ರದರ್ಶನದ ಮುಖ್ಯ ತೀರ್ಪುಗಾರ ಜಿತೇಂದ್ರ ಪಂಡಿತ್ ಸಿಂಗ್‌ ಮಾತನಾಡಿ. ಈ ವಿಂಟೇಜ್‌ ಕಾರು ಪ್ರದರ್ಶನ ಕೇವಲ ಎರಡು ಬಾರಿ ನಡೆದಿದೆ. ಆದರೆ ಈ ಕಳೆದ 50 ವರ್ಷಗಳಿಂದ ನಡೆಯುತ್ತಿದೆ. ಆದರೆ -19 ಸಾಂಕ್ರಾಮಿಕ ರೋಗದ ಕಾರಣಕ್ಕೆ ನಮಗೆ ಎಲ್ಲಾ ಅನುಮತಿಗಳನ್ನು ನೀಡಿಲ್ಲ. ಕೇವಲ ಪ್ರದರ್ಶನಕ್ಕೆ ಮಾತ್ರ ಅನುಮತಿಯನ್ನು ನೀಡಲಾಯಿತು ಎಂದು ಜೀತೆಂದ್ರ ಪಂಡಿತ್‌( ) ಹೇಳಿದರು. ವಿಂಟೇಜ್ ಕಾರಿನ ರಿಜಿಸ್ಟ್ರೇಶನ್‌ಗೆ ಹೊಸ ನೀತಿ: ಕೇಂದ್ರದಿಂದ ಮಹತ್ವದ ಹೆಜ್ಜೆ! ಕಳೆದ 75 ವರ್ಷಗಳಿಂದ ನನ್ನ ನೆರೆಹೊರೆಯವರು ವಿಂಟೇಜ್ ಕಾರನ್ನು ಹೊಂದಿರುವುದರಿಂದ ನಾನು ಕಳೆದ 5-6 ವರ್ಷಗಳಿಂದ ಈ ಕಾರ್ ಶೋ ಮತ್ತು ಪ್ರದರ್ಶನಗಳಿಗೆ ಭೇಟಿ ನೀಡುತ್ತಿದ್ದೇನೆ. ಅವರಿಂದಾಗಿಯೇ ನಾನು ಈ ಪ್ರದರ್ಶನಗಳಿಗೆ ಬರಲು ಪ್ರಾರಂಭಿಸಿದೆ. ಇಲ್ಲಿಗೆ ನಾನು ನನ್ನ ಇಬ್ಬರು ಸೋದರ ಸಂಬಂಧಿ ಹಾಗೂ ಚಿಕ್ಕಪ್ಪನೊಂದಿಗೆ ಬಂದಿದ್ದೇನೆ ಅವರು ಎರಡು ಕಾರುಗಳನ್ನು ಇಲ್ಲಿಗೆ ತಂದಿದ್ದಾರೆ. ಎಂದು ಭಾರತದಲ್ಲಿ ಸ್ವಿಜ್ ವಾಚ್‌ಗಳನ್ನು ( ) ನೋಡಿಕೊಳ್ಳುವ ವಿತರಣಾ ಕಂಪನಿಯಲ್ಲಿ ಕೆಲಸ ಮಾಡುವ ಮಾಶಾ () ಹೇಳಿದರು. ಟಾಟಾ ಕಾರು ಖರೀದಿಸುವ ಗ್ರಾಹಕರಿಗೆ ಬಂಪರ್ ಆಫರ್, ಮಾರ್ಚ್ ತಿಂಗಳ ಡಿಸ್ಕೌಂಟ್ ಘೋಷಣೆ! ನನ್ನ ಬಳಿ 317 ವಿಂಟೇಜ್ ಕಾರು ( )ಗಳಿವೆ, ಇದರ ದುರಸ್ತಿ ಮತ್ತು ನಿರ್ವಹಣೆಗಾಗಿಯೇ ಸುಮಾರು 50 ಜನರ ತಂಡ ಇದೆ. ಏಕೆಂದರೆ ಈ ಕಾರುಗಳ ನಿರ್ವಹಣೆ ನಿಜವಾಗಿಯೂ ಸವಾಲಾಗಿದೆ. ಕಾರುಗಳ ಹೊರತಾಗಿ, ನನ್ನ ಬಳಿ ವಿಂಟೇಜ್ ಬೈಕ್‌ಗಳು ಮತ್ತು ಜೀಪ್‌ಗಳೂ ಇವೆ, ಇವುಗಳ ಸಂಖ್ಯೆಯು 450 ರಷ್ಟಿದೆ ಎಂದು ವಿಂಟೇಜ್ ಕಾರುಗಳ ಮಾಲೀಕ ಮದನ್ ಮೋಹನ್ ( ) ಹೇಳಿದರು. ವಿಂಟೇಜ್ ವಾಹನಗಳು ದೇಶದ ಪರಂಪರೆ ಎಂದು ನಂಬಿರುವ ಅವರು, ಅದನ್ನು ಸಂರಕ್ಷಿಸಬೇಕಾಗಿದೆ ಎಂದು ಹೇಳಿದರು. ಇತ್ತೀಚೆಗೆ ಮರ್ಸಿಡೀಸ್-ಬೆನ್ಸ್ (-) ಇಂಡಿಯಾ ಹೊಸ ತಲೆಮಾರಿನ ಮರ್ಸಿಡೀಸ್ ಮೇ ಬ್ಯಾಕ್ ಎಸ್ ಕ್ಲಾಸ್ ಲಿಮೋಸಿನ್ ( - -ಕ್ಲಾಸ್ ) ಅನ್ನು ದೇಶದಲ್ಲಿ ಬಿಡುಗಡೆಗೊಳಿಸಿದೆ. ಎಸ್-ಕ್ಲಾಸ್ ಮೇಬ್ಯಾಕ್ ದರ 2.5 ಕೋಟಿ ರೂ.ಗಳಿಂದ ಪ್ರಾರಂಭವಾಗುತ್ತವೆ. ಎಸ್80 4 ಮ್ಯಾಟಿಕ್ ಗೆ 3.2 ಕೋಟಿ ರೂ.( ಎಕ್ಸ್-ಶೋರೂಮ್) ವರೆಗೆ ಇರುತ್ತದೆ. ಇದರಲ್ಲಿ ಮೊದಲನೆಯದು ಸಂಪೂರ್ಣವಾಗಿ ಸ್ಥಳೀಯವಾಗಿ ಜೋಡಿಸಲ್ಪಟ್ಟ ವಾಹನವಾಗಿದೆ., ಎರಡನೆಯದು ಸಂಪೂರ್ಣ ನಿರ್ಮಿಸಲಾದ ಘಟಕವಾಗಿ () ಭಾರತಕ್ಕೆ ಆಗಮಿಸುತ್ತದೆ. ಹೊಸ ಎಸ್-ಕ್ಲಾಸ್ ಮೇಬ್ಯಾಕ್ 2020ರ ನವೆಂಬರ್ನಲ್ಲಿ ಜಾಗತಿಕವಾಗಿ ಪರಿಚಯಿಸಲ್ಪಟ್ಟಿತ್ತು.