ಮಹೀಂದ್ರ ಆಯ್ದ ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್ ಆಫರ್! ನವದೆಹಲಿ(ಫೆ.14):ಭಾರತದಲ್ಲಿ ಮಹೀಂದ್ರ ಕಾರುಗಳಿಗೆ( ) ಬೇಡಿಕೆ ಹೆಚ್ಚಾಗುತ್ತಿದೆ. ಇತ್ತ ಶೀಘ್ರದಲ್ಲೇ ಎಲೆಕ್ಟ್ರಿಕ್ ಕಾರುಗಳನ್ನು( ) ಬಿಡುಗಡೆ ಮಾಡುತ್ತಿದೆ. ಇದರ ನಡುವೆ ಇಂಧನ ಕಾರುಗಳ ಮಾರಾಟವನ್ನು ಮತ್ತಷ್ಟು ಉತ್ತೇಜಿಸಲು ಮಹೀಂದ್ರ ಫೆಬ್ರವರಿ ತಿಂಗಳ ಆಫರ್( ) ಘೋಷಿಸಿದೆ. ಆಯ್ಕೆ ಕಾರುಗಳ ಮೇಲೆ ಗರಿಷ್ಠ 81,500 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಮಹೀಂದ್ರ ಕಾರುಗಳನ್ನು ಖರೀದಿಸುವ ಆಲೋಚನ ಇದ್ದರೆ ಫೆಬ್ರವರಿ ತಿಂಗಳ ಆಫರ್ ಮೂಲಕ ಕಾರು ಖರೀದಿಸಬಹುದು. ಆದರೆ ಮಹೀಂದ್ರ ಡಿಸ್ಕೌಂಟ್ ಆಫರ್( ) ಮಹೀಂದ್ರ XUV700 ಹಾಗೂ ಮಹೀಂದ್ರ ಥಾರ್ ವಾಹನಕ್ಕೆ ಅನ್ವಯವಾಗುವುದಿಲ್ಲ. ಈ ಎರಡು ವಾಹನ ಹೊರತುಪಡಿಸಿ ಇತರ ಮಹೀಂದ್ರ ಕಾರುಗಳಿಗೆ ಡಿಸ್ಕೌಂಟ್ ಆಫರ್ ಸಿಗಲಿದೆ. 400 ಕಿ.ಮೀ ಮೈಲೇಜ್, 15 ಲಕ್ಷ ರೂ, ಮಹೀಂದ್ರ XUV300 ಎಲೆಕ್ಟ್ರಿಕ್ ಕಾರು ಬಿಡುಗಡೆ ದಿನಾಂಕ ಬಹಿರಂಗ! ಮಹೀಂದ್ರ ಆಫರ್‌ನಲ್ಲಿ ಮಹೀಂಂದ್ರ ಅಲ್ಟುರಾಸ್ G4 ಕಾರಿಗೆ ಗರಿಷ್ಠ ಡಿಸ್ಕೌಂಟ್ ನೀಡಲಾಗಿದೆ. ಅಲ್ಟುರಾಸ್ G4 ಕಾರಿಗೆ 81,500 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಇದು ಎಕ್ಸ್‌ಚೇಂಜ್ ಬೋನಸ್ 50,000 ರೂಪಾಯಿ ಹಾಗೂ ಕಾರ್ಪೋರೇಟ್ ಬೋನಸ್ 31,500 ರೂಪಾಯಿ ಒಳಗೊಂಡಿದೆ. ಮಹೀಂದರ ಅಲ್ಟುರಾಸ್ G4 ಕಾರು ಟೋಯೋಟಾ ಫಾರ್ಚುನರ್ ಹಾಗೂ ಎಂಜಿ ಗ್ಲೋಸ್ಟರ್ ಕಾರಿಗೆ ಪ್ರತಿಸ್ಪರ್ಧಿಯಾಗಿದೆ. ಎರಡು ಟ್ರಿಮ್ ವೇರಿಯೆಂಟ್‌ನಲ್ಲಿ ಕಾರು ಲಭ್ಯವಿದೆ. 2.2 ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ಅಲ್ಟುರಾಸ್ 2WD ಹಾಗೂ 4WD ವೇರಿಯೆಂಟ್‌ನಲ್ಲಿ ಲಭ್ಯವಿದೆ. ಅಲ್ಟುರಾಸ್ ಕಾರಿನ ಬೆಲೆ 28.85 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)ನಿಂದ ಆರಂಭಗೊಳ್ಳುತ್ತಿದ್ದು, ಟಾಪ್ ವೇರಿಯೆಂಟ್ ಬೆಲೆ 31.85 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) 90 ದಿನದಲ್ಲಿ ಹೊಸ ದಾಖಲೆ ಬರೆದ ಮಹೀಂದ್ರ XUV700,14 ಸಾವಿರ ಕಾರು ಡೆಲಿವರಿ, 1 ಲಕ್ಷ ಬುಕಿಂಗ್! ಮಹೀಂದ್ರ XUV300ಮಹೀಂದ್ರ XUV300 ಕಾರಿಗೆ 69,000 ರೂಪಾಯಿ ಡಿಸ್ಕೌಂಟ್ ಆಫರ್ ಘೋಷಿಸಲಾಗಿದೆ. ಶೀಘ್ರದಲ್ಲೇ ಮಹೀಂದ್ರ XUV300 ಫೇಸ್‌ಲಿಫ್ಟ್ ವೇರಿಯೆಂಟ್ ಬಿಡುಗಡೆಯಾಗುತ್ತಿದೆ. ಹೀಗಾಗಿ ಸದ್ಯ ಉತ್ಪಾದನೆಯಾಗಿ ಡೀಲರ್‌ಬಳಿ ಇರುವ ಸ್ಟಾಕ್ ಮಹೀಂದ್ರ XUV300 ಕಾರಿನ ಮೇಲೆ ಡಿಸ್ಕೌಂಟ್ ನೀಡಲಾಗಿದೆ. ಮಹೀಂದ್ರ XUV300 ಕಾರಿನ ಡಿಸ್ಕೌಂಟ್ ಆಫರ್ 30,000 ರೂಪಾಯಿ ಕ್ಯಾಶ್ ಡಿಸ್ಕೌಂಟ್ , ಎಕ್ಸ್‌ಚೇಜ್ ಬೋನಸ್ 25,000 ರೂಪಾಯಿ, ಕಾರ್ಪೋರೇಟ್ ಬೋನಸ್ 4,000 ರೂಪಾಯಿ ಹಾಗೂ ಇತರ ಬೋನಸ್ 10,000 ರೂಪಾಯಿ ಒಳಗೊಂಡಿದೆ. ಮಹೀಂದ್ರ XUV300 ಕಾರಿನಲ್ಲಿ ಅತ್ಯಧಿಕ ಆಯ್ಕೆ ಲಭ್ಯವಿದೆ. ಒಟ್ಟು 16 ವೇರಿಯೆಂಟ್ ಲಭ್ಯವಿದೆ. ಮಹೀಂದ್ರ XUV300 ಕಾರಿನ ಬೆಲೆ 8.16 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) 13.67 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)ವರೆಗಿದೆ. 1.2 ಲೀಟರ್ ಪೆಟ್ರೋಲ್ ಹಾಗೂ 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಲಭ್ಯವಿದೆ. ಮಹೀಂದ್ರSUV KUV100 NXTಮಹೀಂದ್ರ ಕಾರುಗಳ ಪೈಕಿ ಎಂಟ್ರಿ ಲೆವೆಲ್ ಹಾಗೂ ಕೈಗೆಟುಕುವ ದರದ ಕಾರಾಗಿರುವ ಮಹೀಂದ್ರ KUV100 ಕಾರಿಗೆ 60,000 ರೂಪಾಯಿ ಆಫರ್ ನೀಡಲಾಗಿದೆ. ಇದರಲ್ಲಿ ಕ್ಯಾಶ್ ಡಿಸ್ಕೌಂಟ್ 38,000 ರೂಪಾಯಿ ಒಳಗೊಂಡಿದೆ. ಇದರ ಜೊತೆಗೆ ಮಹೀಂದ್ರ ಸ್ಕಾರ್ಪಿಯೋ ಕಾರಿಗೆ 34,000 ರೂಪಾಯಿ ಹಾಗೂ ಮಹೀಂದ್ರ ಬೊಲೆರೋ ಕಾರಿಗೆ 24,000 ರೂಪಾಯಿ ಆಫರ್ ನೀಡಲಾಗಿದೆ. ಮಹೀಂದ್ರ ಘೋಷಿಸಿರುವ ಫೆಬ್ರವರಿ ತಿಂಗಳ ಆಫರ್ 28ರ ವರೆಗೆ ಇರಲಿದೆ. ಅಥವಾ ಸ್ಟಾಕ್ ಮುಗಿಯುವ ವರಗೆ ಇರಲಿದೆ. ಆಫರ್ ರಾಜ್ಯ, ನಗರಳಲ್ಲಿ ಬದಲಾಗಲಿದೆ. ಹೀಗಾಗಿ ಹತ್ತಿರದ ಡೀಲರ್‌ಬಳಿ ಸಂಪರ್ಕಿಸಿ ಡಿಸ್ಕೌಂಟ್ ಖಚಿತಪಡಿಸಿಕೊಳ್ಳಿ. ಜನವರಿ ತಿಂಗಳ ಮಾರಾಟದಲ್ಲಿ ಮಹೀಂದ್ರ ಉತ್ತಮ ದಾಖಲೆ ಹೊಂದಿದೆ. ಮಹೀಂದ್ರ 5 ಸ್ಟಾರ್ ಸೇಫ್ಟಿ ಕಾರನ್ನು ಬಿಡುಗಡೆ ಮಾಡುತ್ತಿದೆ.