6 6 ಏರ್‌ಬ್ಯಾಗ್ ಕಡ್ಡಾಯ ನಿರ್ಧಾರ ಶ್ರೀಮಂತರ ಪರ, ಬಡವರ ವಿರೋಧಿ, ಗಡ್ಕರಿಗೆ ಪತ್ರ! ನವದೆಹಲಿ(ಫೆ.03):ಭಾರತದಲ್ಲಿ ಕಾರು ಪ್ರಯಾಣಿಕರ ಸುರಕ್ಷತೆಗೆ( ) ಹೆಚ್ಚಿನ ಆದ್ಯತೆ ನೀಡಲಾಗಿದೆ. ಇತ್ತೀಚೆಗೆ ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ( ) ಭಾರತದಲ್ಲಿ ಎಲ್ಲಾ ಕಾರುಗಳಿಗೆ 6 ಏರ್‌ಬ್ಯಾಗ್ ಕಡ್ಡಾಯ( ) ಎಂದು ಘೋಷಿಸಿದ್ದರು. ಗಡ್ಕರಿ ನಿರ್ಧಾರವನ್ನು ಬಹುತೇಕರು ಸ್ವಾಗತಿಸಿದ್ದಾರೆ. ಆದರೆ ಅಂತಾರಾಷ್ಟ್ರೀಯ ರಸ್ತೆ ಒಕ್ಕೂಟ() ಈ ನಿರ್ಧಾರವನ್ನು ವಿರೋಧಿಸಿದೆ. ಇಷ್ಟೇ ಅಲ್ಲ ಇದು ಬಡವರ ವಿರೋಧಿ ಹಾಗೂ ಶ್ರೀಮಂತರ ಪರವಾಗಿರುವ ನಿರ್ಧಾರ ಎಂದಿದಿದೆ. ಭಾರತದಲ್ಲಿ ಎಲ್ಲಾ ಕಾರುಗಳಿಗೆ 6 ಏರ್‌ಬ್ಯಾಗ್ ಕಡ್ಡಾಯ ಮಾಡಲು ಗಡ್ಕರಿ ಸೂಚನೆ ನೀಡಿದ್ದಾರೆ. ಸದ್ಯ ಎರಡು ಏರ್‌ಬ್ಯಾಗ್ ಕಡ್ಡಾಯ ಮಾಡಲಾಗಿದೆ. ರಸ್ತೆ ಅಪಘಾತಗಳಲ್ಲಿ ಏರ್‌ಬ್ಯಾಗ್ ಇಲ್ಲದ ಕಾರಣ ಹಲವು ಜೀವಗಳು ಬಲಿಯಾಗಿದೆ. ಹೀಗಾಗಿ 6 ಏರ್‌ಬ್ಯಾಗ್ ಮೂಲಕ ಗರಿಷ್ಠ ಸುರಕ್ಷತೆ ಒದಗಿಸಲು ನಿತಿನ್ ಗಡ್ಕರಿ ಮುಂದಾಗಿದ್ದಾರೆ. ಆದರೆ ಈ ನಿರ್ಧಾರಕ್ಕೆ ಅಂತಾರಾಷ್ಟ್ರೀಯ ರಸ್ತೆ ಒಕ್ಕೂಟ( ) ಹಲವು ಕಾರಣಗಳನ್ನು ನೀಡಿ ವಿರೋಧಿಸಿದೆ. : ಸಣ್ಣ ಕಾರುಗಳಲ್ಲಿ ಕೂಡ 6 ಏರ್‌ಬ್ಯಾಗ್ ಕಡ್ಡಾಯ: ನಿತಿನ್ ಗಡ್ಕರಿ 6 ಏರ್‌ಬ್ಯಾಗ್ ಕಡ್ಡಾಯ ಮಾಡುವುದರಿಂದ ಚೀನಾದಿಂದChina) ಆಮದು ಪ್ರಮಾಣ ಹೆಚ್ಚಾಗಲಿದೆ. ಇಷ್ಟೇ ಅಲ್ಲ, ಈ ನಿರ್ಧಾರ ಶ್ರೀಮಂತರಿಗೆ() ನೆರವಾಗಲಿದೆ. ಕಾರಣ ಶ್ರೀಮಂತರು ಹೆಚ್ಚಾಗಿ ಟಾಪ್ ವೇರಿಯೆಂಟ್ ಕಾರು ಖರೀದಿಸುತ್ತಾರೆ. ಹೀಗಾಗಿ ಅವರಿಗೆ ಈ ನಿರ್ಧಾರದಿಂದ ಅನಕೂಲಗಳಾಗಲಿವೆ. ಆದರೆ ಬಡವರು() ಬೇಸ್ ಮಾಡೆಲ್ ಕಾರು ಖರೀದಿಸುತ್ತಾರೆ. 6 ಏರ್ ಬ್ಯಾಗ್ ಕಡ್ಡಾಯದಿಂದ ಕಾರಿನ ಬೆಲೆ ಹೆಚ್ಚಾಗಲಿದೆ. ದ್ವಿಚಕ್ರ ವಾಹನದಿಂದ ಕಾರು ಖರೀದಿಸಲು ಇಚ್ಚಿಸುವ ಗ್ರಾಹಕರು ಕಾರು ಕನಸಿನಿಂದ ದೂರ ಉಳಿಯಬೇಕಾಗುತ್ತದೆ. ಕಾರಿನ ಬೆಲೆ ಮತ್ತಷ್ಟು ದುಬಾರಿಯಾಗುವುದರಿಂದ ಖರೀದಿ ಸಾಧ್ಯವಾಗುವುದಿಲ್ಲ. ಭಾರತದಲ್ಲಿ ಅತೀ ಹೆಚ್ಚು ದ್ವಿಚಕ್ರ ವಾಹನಗಳನ್ನು ಬಳಸಲಾಗುತ್ತಿದೆ. ಇದ ಅವರ ಆಸಕ್ತಿಯ ಆಯ್ಕೆಯಲ್ಲ. ಇದರಲ್ಲಿ ಬಹುತೇಕರಿಗೆ ಕಾರು ಖರೀದಿ ಸಾಧ್ಯವಾಗದೆ ಕಾರಣ ಬೈಕ್, ಸ್ಕೂಟರ್ ಮೊರೆ ಹೋಗಿದ್ದಾರೆ. ಇನ್ನು ದ್ವಿಚಕ್ರ ವಾಹನದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚು. ಹೀಗಾಗಿ ಸುರಕ್ಷಿತವಾಗಿ ಪ್ರಯಾಣಿಸಲು ಹಲವರು ಬೇಸ್ ಮಾಡೆಲ್ ಕಾರು ಖರೀದಿ ಮಾಡುತ್ತಿದ್ದಾರೆ. ಆಧರೆ 6 ಏರ್‌ಬ್ಯಾಗ್ ನೀತಿಯಿಂದ ಕಾರು ಖರೀದಿ ದುಬಾರಿಯಾಗಲಿದೆ. ಇದರಿಂದ ಬಡವರು ಕಾರು ಕನಸು ನನಸು ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಅಂತಾರಾಷ್ಟ್ರೀಯ ರಸ್ತೆ ಒಕ್ಕೂಟ ಗಡ್ಕರಿಗೆ ಪತ್ರ ಬರೆದಿದೆ. ವಾಹನ ಸುರಕ್ಷತೆಯಲ್ಲಿ ರಾಜಿ ಇಲ್ಲ; ಎಪ್ರಿಲ್ 1 ರಿಂದ ಹೊಸ ನಿಯಮ ಜಾರಿ! ಬಡವರು, ಮಧ್ಯ ವರ್ಗದ ಕಾರು ಖರೀದಿ ಕನಸು ನನಸು ಮಾಡಲು ದುಬಾರಿ ಬೆಲೆ ಅಡ್ಡಿಯಾಗಲಿದೆ. ಈಗಾಗಲೇ ಕಾರಿನ ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಇದರಿಂದ ಕಾರು ಖರೀದಿ ದೂರದ ಮಾತಾಗಿದೆ. ಇದರ ನಡುವೆ ಏರ್‌ಬ್ಯಾಗ್‌ ಕೂಡ ಕಾರಿನ ವೆಚ್ಚ ಹೆಚ್ಚಿಸಲಿದೆ ಎಂದು ಒಕ್ಕೂಟ ಹೇಳಿದೆ. 6 ಏರ್‌ಬ್ಯಾಗ್ ಅಳವಡಿಕೆಯಿಂದ ಬೇಸ್ ಮಾಡೆಲ್ ಸಣ್ಣ ಕಾರಿನ ಬೆಲೆ 30,000 ರೂಪಾಯಿಂದ 40,000 ರೂಪಾಯಿ ಬೆಲೆ ಹೆಚ್ಚಾಗಲಿದೆ. ಅಥವಾ ಕಾರಿನ ಒಟ್ಟು ಮೊತ್ತದ ಶೇಕಡಾ 10 ರಷ್ಟು ಹೆಚ್ಚಾಗಲಿದೆ. ಹೀಗಾಗಿ ಎಲ್ಲಾ ಕಾರುಗಳಿಗೆ 6 ಏರ್‌ಬ್ಯಾಗ್ ಕಡ್ಡಾಯ ನಿಯಮ ಸೂಕ್ತವಲ್ಲ. ಎಂಟ್ರಿ ಲೆವೆಲ್, ಬೇಸ್ ಮಾಡೆಲ್ ಕಾರುಗಳನ್ನು ಮತ್ತಷ್ಟು ಕೈಗೆಟುಕುವ ದರದಲ್ಲಿ ಸಿಗುವಂತೆ ಮಾಡಬೇಕು. ಇದರಿಂದ ಮಧ್ಯಮ ವರ್ಗದ ಜನರು, ಬಡವರು ಕಾರು ಖರೀದಿಸಲು ಸಾಧ್ಯವಾಗಲಿದೆ. ಹೀಗಾಗಿ ಈ ಕಾರುಗಳಿಗೆ 6 ಏರ್‌ಬ್ಯಾಗ್ ಕಡ್ಡಾಯ ನಿಯಮ ಸೂಕ್ತವಲ್ಲ ಎಂದು ಅಂತಾರಾಷ್ಟ್ರೀಯ ಒಕ್ಕೂಟ ಗಡ್ಕರಿಗೆ ಮನವಿ ಮಾಡಿದೆ. 200 ಅಡಿ ಆಳಕ್ಕೆ ಉರುಳಿ ಬಿದ್ದ ಟಾಟಾ ನೆಕ್ಸಾನ್ ಕಾರು, ಯಾವುದೇ ಗಾಯಗಳಿಲ್ಲದೇ ಪ್ರಯಾಣಿಕರು ಸೇಫ್! ಭಾರತದಲ್ಲಿ ಸೀಟ್‌ಬೆಲ್ಟ್ ಎಲ್ಲರು ಹಾಕುವುದಿಲ್ಲ. ನಿಯಮ ಉಲ್ಲಂಘನೆ, ದಂಡದ ಕಾರಣ ಡ್ರೈವರ್ ಮಾತ್ರ ಸೀಟ್‌ಬೆಲ್ಟ್ ಹಾಕುತ್ತಿದ್ದಾರೆ. ಇನ್ನು ಕೋ ಡ್ರೈವರ್ ಸೀಟ್ ಪ್ರಯಾಣಿಕರು, ಹಿಂಬದಿ ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸುವುದಿಲ್ಲ. ಹೀಗಾಗಿ 6 ಏರ್‌ಬ್ಯಾಗ್ ಅಳವಡಿಸಿದರೂ ಸೀಟ್ ಬೆಲ್ಟ್ ಹಾಕದಿದ್ದರೆ ಯಾವುದೇ ಕಾರ್ಯನಿರ್ವಹಿಸುವುದಿಲ್ಲ ಎಂದು ಒಕ್ಕೂಟ ತನ್ನ ಪತ್ರದಲ್ಲಿ ಹೇಳಿದೆ.