ಒಂದು ತಿಂಗಳಲ್ಲಿ 3,000 ಟಾಟಾ ಕಾರು ಮಾರಾಟ, ಹೊಸ ದಾಖಲೆ! ಮುಂಬೈ(ಫೆ.06)ಟಾಟಾ ಮೋಟಾರ್ಸ್( ) ಕಾರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ ಮೂಡಿಸಿದೆ. ಎಲೆಕ್ಟ್ರಿಕ್ ಕಾರಿನಲ್ಲಿ( ) ಹೊಸ ಅಧ್ಯಾಯ ಬರೆದಿರುವ ಟಾಟಾ ಮೋಟಾರ್ಸ್ ಇದೀಗ ಕಾರು ಬಿಡುಗಡೆ ಮಾಡಿ ದಾಖಲೆ ಬರೆದಿದೆ. ಪೆಟ್ರೋಲ್, ಡೀಸೆಲ್ ಬೆಲೆ ದುಬಾರಿಯಾಗಿರುವ ಬೆನ್ನಲ್ಲೇ ಟಾಟಾ ಕೈಗೆಟುಕುವ ದರದಲ್ಲಿ ಕಾರು ಬಿಡುಗಡೆ ಮಾಡಿ ಕಾರು ಪ್ರಿಯರ ಮನಗೆದ್ದಿದೆ. ಇದೀಗ ಒಂದು ತಿಂಗಳು ಪೂರೈಸುವ ಮೊದಲೇ 3,000 ಟಾಟಾ ಕಾರುಗಳು ಮಾರಾಟ ಮಾಡಿ ಹೊಸ ದಾಖಲೆ ಬರೆದಿದೆ. ಟಾಟಾ ಮೋಟಾರ್ಸ್ ಜನವರಿ 19ಕ್ಕೆ ಟಾಟಾ ಟಿಯಾಗೋ ಹಾಗೂ ಟಿಗೋರ್ ಕಾರು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದೀಗ ಒಂದು ತಿಂಗಳ ಪೂರೈಸುವ ಮೊದಲೇ ಟಿಯಾಗೋ ಹಾಗೂ ಟಿಗೋರ್( ) ಒಟ್ಟು 3,000 ಮಾರಾಟ ಕಂಡಿದೆ. ಈ ಮೂಲಕ ಅತೀ ಕಡಿಮೆ ಅವಧಿಯಲ್ಲಿ ಗರಿಷ್ಠ ಮಾರಾಟವಾದ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.ಭಾರತದಲ್ಲಿ ಮಾರುತಿ ಸುಜುಕಿ ಹಾಗೂ ಹ್ಯುಂಡೈ ಕಾರುಗಳನ್ನು ಬಿಡುಗಡೆ ಮಾಡಿತ್ತು. ಇದೇ ಮೊದಲ ಬಾರಿಗೆ ಟಾಟಾ ಮೋಟಾರ್ಸ್ ಟಿಯಾಗೋ ಹಾಗೂ ಟಿಗೋರ್ ಮೂಲಕ ಕಾರುಗಳನ್ನು ಬಿಡುಗಡೆ ಮಾಡಿ ಇದೀಗ ಮಾರುಕಟ್ಟೆಯಲ್ಲಿ ಅಗ್ರಸ್ಥಾನಕ್ಕೆ ದಾಪುಗಾಲಿಡುತ್ತಿದೆ. ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿಗೆ ಭಾರಿ ಬೇಡಿಕೆ, ಕಳೆದ 10 ತಿಂಗಳಲ್ಲಿ 9 ಸಾವಿರ ಮಾರಾಟ! ಟಾಟಾ ಕಾರಿನ ಬೆಲೆಟಾಟಾ ಟಿಯಾಗೋ ಕಾರು ನಾಲ್ಕು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಟಿಗೋರ್ , , + ವೇರಿಯೆಂಟ್ ಬಿಡುಗಡೆ ಮಾಡಲಾಗಿದೆ ಇನ್ನು ಟಿಗೋರ್ ಕಾರು ಹಾಗೂ + ಎಂಬ ಎರಡು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಟಾಟಾ ಟಿಯಾಗೋ ಕಾರಿನ ಬೆಲೆ 6.09 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತಿದೆ. ಇನ್ನು ಟಿಗೋರ್ ಕಾರಿನ ಬೆಲೆ 7.69 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ನಿಂದ ಆರಂಭಗೊಳ್ಳುತ್ತಿದೆ. ಟಾಟಾ ಟಿಯಾಗೋ ಹಾಗೂ ಟಿಗೋರ್ ಕಾರಿನಲ್ಲಿ 1.2 ಲೀಟರ್ ರೆವೊಟ್ರಾನ್ ಪೆಟ್ರೋಲ್ ಎಂಜಿನ್ ಬಳಸಲಾಗಿದೆ. ಜೊತೆಗೆ ಫ್ಯಾಕ್ಟರಿ ಫಿಟ್ಟೆಡ್ ಕಿಟ್ ನೀಡಿದೆ. ಟಾಟಾ ಕಾರು 73PS ಪವರ್ ಹಾಗೂ 95Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 5 ಸ್ಪೀಡ್ ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಹೊಂದಿದೆ. ಟಾಟಾ ಸಿಎನ್‌ಜಿ ಕಾರು ಪ್ರತಿ ಕೆಜಿ ಸಿಎನ್‌ಜಿಗೆ 26.49 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇನ್ನು ಬೆಲೆಯೂ ಅಗ್ಗವಾಗಿದೆ. ಹೀಗಾಗಿ ಜನರು ಇದೀಗ ಟಾಟಾ ಕಾರಿನತ್ತ ವಾಲುತ್ತಿದ್ದಾರೆ. ಭಾರತದಲ್ಲಿ 5 ಸ್ಟಾರ್ ಸುರಕ್ಷತೆ ಕಾರು, ಹೊಸ ಮಾನದಂಡ ಸ್ಥಾಪಿಸಿದ ಟಾಟಾ ಮೋಟಾರ್ಸ್! 2022ರ ಜನವರಿ ತಿಂಗಳು ಟಾಟಾ ಮೋಟಾರ್ಸ್ ಪಾಲಿಗೆ ಸ್ಮರಣೀಯ ಹಾಗೂ ಹೆಚ್ಚು ಸಂತಸ ನೀಡಿದ ತಿಂಗಳಾಗಿದೆ. ಕಾರಣ ಟಾಟಾ ಮೋಟಾರ್ಸ್ 40,777 ಕಾರುಗಳನ್ನು ಮಾರಾಟ ಮಾಡುವ ಮೂಲಕ ಗರಿಷ್ಠ ದಾಖಲೆಯನ್ನು ಬರೆದಿದೆ. ಇದರಲ್ಲಿ 28,108 ಕಾರುಗಳು ಟಾಟಾ ಕಾರುಗಳಾಗಿದೆ. ಇನ್ನು 2,892 ಎಲೆಕ್ಟ್ರಿಕ್ ಕಾರುಗಳಾಗಿದೆ. ಟಾಟಾದ ಜನಪ್ರಿಯ ಎರಡು ಕಾರುಗಳಾದ ಟಾಟಾ ನೆಕ್ಸಾನ್ ಹಾಗೂ ಟಾಟಾ ಪಂಚ್ ಪ್ರತಿ ತಿಂಗಳು 10,000 ಮಾರಾಟ ದಾಖಲೆ ಬರೆಯುತ್ತಿದೆ. ಟಾಟಾ ಕಾರಿನ ಮಾರಾಟದಲ್ಲಿನ ಪ್ರಗತಿ ಓಟ್ಟು ಟಾಟಾ ಕಾರು ಮಾರಾಟದ ಶೇಕಡಾ 42 ರಷ್ಟು. ಭಾರತದಲ್ಲಿ ಟಾಟಾ ಮೋಟಾರ್ಸ್ ಕಾರುಗಳನ್ನು ಬಿಡುಗಡೆ ಮಾಡಿರುವುದು ಇದೀಗ ಮಾರುತಿ ಸುಜುಕಿ ಹಾಗೂ ಹ್ಯುಂಡೈಗೆ ತೀವ್ರ ಹೊಡೆತ ನೀಡಿದೆ. ಟಾಟಾ ಸುಲಭ ಹಾಗೂ ಕೈಗೆಟುಕುವ ದರದಲ್ಲಿ ಅತ್ಯುತ್ತಮ ಕಾರುಗಳನ್ನು ನೀಡುತ್ತಿದೆ. ಇತ್ತ ಎಲೆಕ್ಟ್ರಿಕ್ ವಾಹನದಲ್ಲೂ ಅತೀ ಕಡಿಮೆ ಬೆಲೆಗೆ ಭಾರತದಲ್ಲಿ ಕಾರು ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ.