ಭಾರತದಲ್ಲಿ ಹೊಸ ದಾಖಲೆ ಬರೆದ ಹೋಂಡಾ ಶೈನ್, 1 ಕೋಟಿ ಗ್ರಾಹಕರ ಮೈಲಿಗಲ್ಲು! ನವದೆಹಲಿ(ಜ.21) :ಹೋಂಡಾ ಬೈಕ್( ) ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿದೆ. ಕೈಗೆಟುಕುವ ದರ, ಕಡಿಮೆ ನಿರ್ವಹಣಾ ವೆಚ್ಚ, ಗರಿಷ್ಠ ಮೈಲೇಜ್() ಸೇರಿದಂತೆ ಹಲವು ವಿಶೇಷತೆಗಳು ಈ ದ್ವಿಚಕ್ರ ವಾಹನದಲ್ಲಿದೆ. ಇದೀಗ ಇದೇ ಹೋಂಡಾ ಭಾರತದಲ್ಲಿ ಹೊಸ ದಾಖಲೆ ಬರೆದಿದೆ. ಹೋಂಡಾ ಶೈನ್ ಭಾರತದಲ್ಲಿ 1 ಕೋಟಿ ಗ್ರಾಹಕರ ಮೈಲಿಗಲ್ಲು ನಿರ್ಮಿಸಿದೆ. 125ಸಿಸಿ ವಿಭಾಗದಲ್ಲಿ ಜನಪ್ರಿಯ ಬೈಕ್ ಆಗಿರುವ ಬೈಕ್ ಶೈನ್( ) ಶೇ.50ಕ್ಕಿಂತ ಹೆಚ್ಚು ಪಾಲು ಹೊಂದಿದೆ. ವರ್ಷದಿಂದ ವರ್ಷಕ್ಕೆ ಶೇ 29 ರಷ್ಟು ಬೆಳವಣಿಗೆಯೊಂದಿಗೆ 125ಸಿಸಿ ವಿಭಾಗದಲ್ಲಿ ಗ್ರಾಹಕರ ನಂಬರ್ 1 ಆಯ್ಕೆಯಾಗಿದೆ. ಸದೃಢ ಸ್ವರೂಪದ ಬ್ರ್ಯಾಂಡ್ ಶೈನ್ ಈಗ 1 ಕೋಟಿ ಗ್ರಾಹಕರ ಮೈಲುಗಲ್ಲು ತಲುಪಿದ ಮೊದಲ 125ಸಿಸಿ ಮೋಟರ್‌ಸೈಕಲ್ ಹೋಂಡಾ ಶೈನ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತದಲ್ಲಿ 2022 CB300R ಬೈಕ್ ಬಿಡುಗಡೆ, ಬುಕಿಂಗ್ ಆರಂಭ! ಲಕ್ಷಾಂತರ ಶೈನ್ ಬಳಕೆದಾರರಿಂದ ಪಡೆದ ಪ್ರೀತಿ ಮತ್ತು ವಿಶ್ವಾಸಕ್ಕೆ ನಾವು ಕೃತಜ್ಞರಾಗಿದ್ದೇವೆ. ಒಂದೂವರೆ ದಶಕದ ಶೈನ್ ಅನೇಕ ತಲೆಮಾರುಗಳ ಸವಾರರಿಗೆ ನಿಜವಾದ ಒಡನಾಡಿಯಾಗಿದೆ. ಇದು ಭಾರತದ ಎಲ್ಲಾ ಪ್ರದೇಶಗಳಲ್ಲಿನ ಮನೆ ಮನೆಗಳಲ್ಲಿ ಅತ್ಯಂತ ಜನಪ್ರಿಯ ಮೋಟರ್ ಸೈಕಲ್ ಆಗಿದೆ. ಇದು 125 ಸಿಸಿ ವಿಭಾಗದಲ್ಲಿ ವಿಶ್ವಾಸಾರ್ಹತೆ ಮತ್ತು ಗಮನಾರ್ಹ ಗುಣಮಟ್ಟದ ಮಾನದಂಡಗಳನ್ನು ಹೆಮ್ಮೆಯಿಂದ ಎತ್ತಿಹಿಡಿದಿದೆ. ಗ್ರಾಹಕರ ನಿಷ್ಠೆಯು ಅದ್ಭುತ ಉತ್ಪನ್ನ ಮತ್ತು ಮಾರಾಟದ ನಂತರದ ಸೇವೆಯ ಫಲಿತಾಂಶವಾಗಿದೆ ಎಂದು ನಾವು ದೃಢವಾಗಿ ನಂಬುತ್ತೇವೆ. ಇದನ್ನು ಗಮನದಲ್ಲಿಟ್ಟುಕೊಂಡು, ನಾವು ನಮ್ಮ ಗ್ರಾಹಕರಿಗೆ ಅತ್ಯುತ್ತಮ ಸೇವೆಯನ್ನು ನೀಡುವುದನ್ನು ಮುಂದುವರಿಸುತ್ತೇವೆ ಎಂದು ಹೋಂಡಾ ಮೋಟರ್‌ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ ಮಾರುಕಟ್ಟೆ ವಿಭಾಗದ ನಿರ್ದೇಶಕ ಯದ್ವಿಂದರ್ ಸಿಂಗ್ ಗುಲೇರಿಯಾ ಹೇಳಿದರು. ಅಮೆರಿಕ ಮಾರುಕಟ್ಟೆಗೆ ಭಾರತದಿಂದ ವಿತರಣೆ, ಜಾಗತಿಕ ರಫ್ಚು ವಹಿವಾಟು ವಿಸ್ತರಿಸಿದ ಹೋಂಡಾ! ಹಲವು ವರ್ಷಗಳಿಂದ ಗ್ರಾಹಕರಿಂದ ಶೈನ್ ಪಡೆದಿರುವ ಅದ್ಭುತ ಪ್ರತಿಕ್ರಿಯೆಯಿಂದ ನಾವು ವಿನಮ್ರರಾಗಿದ್ದೇವೆ. ಭಾರತದ ಸವಾರರು 2022ರಲ್ಲಿ ಅದ್ಭುತ ಶೈನ್‌ನೊಂದಿಗೆ ಸವಾರಿ ಮಾಡುತ್ತಿರುವಾಗ, ನಾವು ಹೊಸ ಸವಾಲುಗಳನ್ನು ತೆಗೆದುಕೊಳ್ಳಲು ಮತ್ತು ಅತ್ಯುತ್ತಮ ಉತ್ಪನ್ನಗಳೊಂದಿಗೆ ನಮ್ಮ ನಿಷ್ಠಾವಂತ ಗ್ರಾಹಕರನ್ನು ಸಂತೋಷಪಡಿಸಲು ಬದ್ಧರಾಗಿದ್ದೇವೆ. ಎಚ್‌ಎಂಎಸ್‌ಐ ಕುಟುಂಬದ ಪರವಾಗಿ, ಶೈನ್‌ನಲ್ಲಿ ತಮ್ಮ ಅಮೂಲ್ಯವಾದ ನಂಬಿಕೆಯನ್ನು ಇರಿಸಿದ್ದಕ್ಕಾಗಿ ನಾನು ನಮ್ಮ ಗ್ರಾಹಕರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಈ ಸಾಧನೆಯ ಕುರಿತು ಮಾತನಾಡಿರುವ ಹೋಂಡಾ ಮೋಟರ್‌ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ, ಅಧ್ಯಕ್ಷ ಮತ್ತು ಸಿಇಒ ಅತ್ಸುಶಿ ಒಗಾಟಾ ಹೇಳಿದ್ದಾರೆ.