ಸಫಾರಿ ಡಾರ್ಕ್, ಟಿಯಾಗೋ , ಮುಂದಿನ ವಾರ ಎರಡು ಟಾಟಾ ಕಾರು ಬಿಡುಗಡೆ! ನವದೆಹಲಿ(ಜ.16): ಟಾಟಾ ಮೋಟಾರ್ಸ್( ) ಹೊಸ ವರ್ಷದಲ್ಲಿ ಹೊಸ ಹೊಸ ಕಾರು() ಬಿಡುಗಡೆ ಮಾಡುತ್ತಿದೆ. ಇದೀಗ ಜನವರಿ 3ನೇ ವಾರದಲ್ಲಿ ಟಾಟಾ ಎರಡು ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಈ ಎರಡು ಕಾರು ಹಲವು ವಿಶೇಷತೆಗಳನ್ನೊಳಗೊಂಡಿದೆ. ಕಾರಣ ಐಕಾನಿಕ್ ಸಫಾರಿ ಕಾರನ್ನು ಡಾರ್ಕ್ ಎಡಿಶನ್ ಮೂಲಕ ಟಾಟಾ ಬಿಡುಗಡೆ ಮಾಡುತ್ತಿದೆ. ಇದರ ಜೊತೆಗೆ ಟಾಟಾ ಮೋಟಾರ್ಸ್ ಇದೇ ಮೊದಲ ಬಾರಿಗೆ ಕಾರು ಬಿಡುಗಡೆ ಮಾಡುತ್ತಿದೆ. ಮುಂದಿನ ವಾರದಲ್ಲಿ ಟಾಟಾ ಮೋಟಾರ್ಸ್ ಸಫಾರಿ ಡಾರ್ಕ್ ಎಡಿಶನ್( ಜೊತೆಗೆ ಟಾಟಾ ಟಿಯಾಗೋ ಕಾರು( ) ಮಾರುಕಟ್ಟೆ ಪ್ರವೇಶಿಸುತ್ತಿದೆ. ನೂತನ ಕಾರಿನ ವಿಶೇಷತೆ ಹಾಗೂ ಇತರ ಮಾಹಿತಿ ಇಲ್ಲಿದೆ. ಟಾಟಾ ಟಿಯಾಗೋ CNGಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ದುಬಾರಿಯಾಗುತ್ತಿದ್ದಂತೆ ಜನರು ಎಲೆಕ್ಟ್ರಿಕ್ ಹಾಗೂ ಕಾರಿನತ್ತ ವಾಲುತ್ತಿದ್ದಾರೆ. ಸದ್ಯ ಎಲೆಕ್ಟ್ರಿಕ್ ಕಾರುಗಳು ಕೊಂಚ ದುಬಾರಿಯಾಗಿರುವ ಕಾರಣ ಮುಂದಿರುವ ಏಕೈಕ ಆಯ್ಕೆ ಕಾರು. ಸದ್ಯ ಮಾರುತಿ, ಹ್ಯುಂಡೈ ಕಂಪನಿಗಳು ಭಾರತದಲ್ಲಿ ಕಾರುಗಳನ್ನು ಬಿಡುಗಡೆ ಮಾಡಿದೆ. ಇದೀಗ ಟಾಟಾ ಇದೇ ಮೊದಲ ಬಾರಿಗೆ ಕಾರು ಬಿಡುಗಡೆ ಮಾಡುತ್ತಿದೆ. ಟಾಟಾ ಟಿಯೋಗೋ ಕಾರು ಕೈಗೆಟುಕುವ ದರದ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಜನವರಿ 19 ರಂದು ಟಾಟಾ ಟಿಯಾಗೋ ಕಾರು ಬಿಡುಗಡೆಯಾಗಲಿದೆ. ಟಾಟಾ ಟಿಯಾಗೋ ಕಾರಿನ ಬೆಲೆ 6 ರಿಂದ 6.5 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಟಿಯಾಗೋ ಕಾರು 12 ಕೆಜಿ ಸಿಲಿಂಡರ್ ಹೊಂದಿದೆ. ಈ ಸಿಲಿಂಡರ್ 8 ರಿಂದ 9 ಕೆಜಿ ಸಾಮರ್ಥ್ಯ ಹೊಂದಿದೆ. 1.2 ಲೀಟರ್ ನ್ಯಾಚ್ಯುರಲ್ ಆಸ್ಪೈರ್ ಪೆಟ್ರೋಲ್ ಎಂಜಿನ್ ಹೊಂದಿರುವ ಟಿಯಾಗೋ ಕಾರು, 85bhp ಪವರ್ ಹಾಗೂ 113Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಟಿಯಾಗೋ ಕಾರಿನ ಬೆನ್ನಲ್ಲೇ ಟಿಗೋರ್ ಕಾರು ಬಿಡುಗಡೆಯಾಗಲಿದೆ. ಸಫಾರಿ ಡಾರ್ಕ್ ಎಡಿಶನ್:ಟಾಟಾ ಸಫಾರಿ ಕಾರು ಕಳೆದ ವರ್ಷ ದೇಶದಲ್ಲಿ ಭಾರಿ ಸಂಚಲನ ಮೂಡಿಸಿದೆ. 7 ಸೀಟರ್ ಕಾರು ಇದಾಗಿದ್ದು, 5 ಸ್ಟಾರ್ ಸುರಕ್ಷತೆಯನ್ನು ಪಡೆದಿದೆ. ಇದೀಗ ಟಾಟಾ ಸಫಾರಿ ಡಾರ್ಕ್ ಎಡಿಶನ್ ಬಿಡುಗಡೆ ಮಾಡುತ್ತಿದೆ. ನೂತನ ಕಾರಿನಲ್ಲಿ ಕೆಲ ಹೆಚ್ಚುವರಿ ಫೀಚರ್ಸ್ ಸೇರಿಸಲಾಗಿದೆ. ಜನವರಿ 17 ರಂದು ಟಾಟಾ ಸಫಾರಿ ಡಾರ್ಕ್ ಎಡಿಶನ್ ಕಾರು ಬಿಡುಗಡೆಯಾಗುತ್ತಿದೆ. ಟಾಟಾ ಹ್ಯಾರಿಯರ್ ಬಿಡುಗಡೆಯಾದ ಬಳಿಕ ಟಾಟಾ ಇದೇ ರೀತಿ ಡಾರ್ಕ್ ಎಡಿಶನ್ ಕಾರು ಬಿಡುಗಡೆ ಮಾಡುತ್ತಿದೆ. ಇದೀಗ ಸಫಾರಿ ಸರದಿ. ಕಾರಿನ ಹೊರ ಹಾಗೂ ಒಳಭಾಗದಲ್ಲಿ ಕೆಲ ಬದಾಲಾವಣೆಗಳನ್ನು ಕಾಣಲಿದೆ. ಸಫಾರಿ ಡಾರ್ಕ್ ಎಡಿಶನ್ ಕಾರು 2.0 ಲೀಟರ್ ಡೀಸೆಲೆ್ ಎಂಜಿನ್ ಹೊಂದಿದೆ. 168bhp ಪವರ್ ಹಾಗೂ 350Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 6 ಸ್ಪೀಡ್ ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಹಾಗೂ 6 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಆಯ್ಕೆ ಹೊಂದಿದೆ.