ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಮೈಲೇಜ್, ಇಲ್ಲಿದೆ ಟಾಪ್ 10 ಕಾರು! ಪ್ರತಿದಿನ ಹೆಚ್ಚುತ್ತಿರುವ ಪೆಟ್ರೋಲ್ ಬೆಲೆಯಿಂದಾಗಿ ಕಾರು ಬಸುವುದೇ ಹೊರೆಯಾಗುತ್ತಿದೆ. ಇದಕ್ಕೆ ಪರ್ಯಾಯವಾಗಿ ಈಗಾಗಲೇ ಹಲವು ಕಾರುಗಳು ಮಾರ್ಕೆಟ್‌ನಲ್ಲಿ ಲಭ್ಯವಿದೆ. ಇವು ಬೆಸ್ಟ್ ಮೈಲೇಜ್ ನೀಡುವ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿವೆ. ಕೈಗೆಟುಕವ ದರದಲ್ಲಿ ಲಭ್ಯವಿರುವ ಟಾಪ್ 10 ಕಾರುಗಳ ವಿವರಗಳು ನಿಮಗಾಗಿ.. ಪ್ರತಿದಿನ ಹೆಚ್ಚುತ್ತಿರುವ ಪೆಟ್ರೋಲ್ ಬೆಲೆಯಿಂದಾಗಿ ಕಾರು ಬಸುವುದೇ ಹೊರೆಯಾಗುತ್ತಿದೆ. ಇದಕ್ಕೆ ಪರ್ಯಾಯವಾಗಿ ಈಗಾಗಲೇ ಹಲವು ಕಾರುಗಳು ಮಾರ್ಕೆಟ್‌ನಲ್ಲಿ ಲಭ್ಯವಿದೆ. ಇವು ಬೆಸ್ಟ್ ಮೈಲೇಜ್ ನೀಡುವ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿವೆ. ಕೈಗೆಟುಕವ ದರದಲ್ಲಿ ಲಭ್ಯವಿರುವ ಟಾಪ್ 10 ಕಾರುಗಳ ವಿವರಗಳು ನಿಮಗಾಗಿ.. ಟಾಟಾ ಪಂಚ್ iCNGಇದು ಟಾಟಾ ಕಂಪನಿಯ ಕಾರು. ಆ ಕಂಪನಿಯ ಎಲ್ಲಾ ಕಾರುಗಳಿಗಿಂತ ಹೆಚ್ಚು ಮಾರಾಟವಾಗುತ್ತಿರುವುದು ಟಾಟಾ ಪಂಚ್ . ಇದು ಬರೋಬ್ಬರಿ 26.99 ಕಿ.ಮೀ. ಮೈಲೇಜ್ ನೀಡುತ್ತದೆ. ಇದರ ಬೆಲೆ ರೂ. 7.23 ಲಕ್ಷದಿಂದ ರೂ. 9.85 ಲಕ್ಷ (ಎಕ್ಸ್-ಶೋ ರೂಂ) ವರೆಗೆ ಇದೆ. ಮಾರುತಿ ಸುಜುಕಿ ಸೆಲೆರಿಯೊಮಾರುತಿ ಸುಜುಕಿ ಸೆಲೆರಿಯೊ ಕೇವಲ ಒಂದು ಟ್ರಿಮ್‌ನಲ್ಲಿ ಮಾತ್ರ ಲಭ್ಯವಿದೆ. ಇದರ ಬೆಲೆ ರೂ.6.73 ಲಕ್ಷ (ಎಕ್ಸ್-ಶೋ ರೂಂ). ಇಂಧನ ಕ್ಷಮತೆಯಲ್ಲಿ ಮುಂಚೂಣಿಯಲ್ಲಿದೆ. 1-ಲೀಟರ್ -ಸರಣಿಯ ಎಂಜಿನ್‌ನಿಂದ ಇದು 34.43 ಮೈಲೇಜ್ ಪಡೆಯುತ್ತದೆ. ಹ್ಯುಂಡೈ ಔರಾ CNGಈ ಕಾರು ಎರಡು ಟ್ರಿಮ್‌ಗಳಲ್ಲಿ ಲಭ್ಯವಿದೆ. ಇದರ ಬೆಲೆ ರೂ. 8.31 ಲಕ್ಷದಿಂದ ರೂ. 9.05 ಲಕ್ಷ (ಎಕ್ಸ್-ಶೋ ರೂಂ) ವರೆಗೆ ಇದೆ. ಇದು ಆರಾ ಗ್ರ್ಯಾಂಡ್ i10 ನಿವ್ಸ್ ಫೀಚರ್ಸ್ ಹೊಂದಿದೆ. ಟಾಟಾ ಟಿಗೊರ್, ಮಾರುತಿ ಸುಜುಕಿ ಡಿಜೈರ್ ಕಾರಿಗೆ ಪ್ರತಿಸ್ಪರ್ಧಿಯಾಗಿದೆ. ಹ್ಯುಂಡೈ ಗ್ರ್ಯಾಂಡ್ i10 ನಿವ್ಸ್ CNGಹ್ಯುಂಡೈ ಗ್ರ್ಯಾಂಡ್ i10 ನಿವ್ಸ್ 1.2 ಲೀಟರ್ ಸಾಮರ್ಥ್ಯದ ಎಂಜಿನ್ ಹೊಂದಿದೆ. ಇದರ ಬೆಲೆ ರೂ. 7.68 ಲಕ್ಷದಿಂದ ರೂ. 8.30 ಲಕ್ಷ (ಎಕ್ಸ್-ಶೋ ರೂಂ) ವರೆಗೆ ಇದೆ. ಇದು ಗರಿಷ್ಠ 27 ಕಿ.ಮೀ. ಮೈಲೇಜ್ ನೀಡುತ್ತದೆ. ಈ ಕಾರು ಗ್ರ್ಯಾಂಡ್ i10 ನಿವ್ಸ್, ಮಾರುತಿ ಸುಜುಕಿ ಸೆಲೆರಿಯೊ, ಟಾಟಾ ಟಿಯಾಗೊಗಳಿಗೆ ಪೈಪೋಟಿ ನೀಡುತ್ತಿದೆ. ಮಾರುತಿ ಸುಜುಕಿ ಫ್ರಾಂಕ್ಸ್, ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್ಈ ಎರಡೂ ಕಾರುಗಳನ್ನು ಮಾರುತಿ ಸುಜುಕಿ ಮತ್ತು ಟೊಯೋಟಾ ಕಂಪನಿಗಳು ಉತ್ಪಾದಿಸುತ್ತಿವೆ. ಫ್ರಾಂಕ್ಸ್ ಬೆಲೆ ರೂ. 8.46 ಲಕ್ಷದಿಂದ ರೂ. 9.32 ಲಕ್ಷ (ಎಕ್ಸ್-ಶೋ ರೂಂ) ವರೆಗೆ ಇದೆ. ಅರ್ಬನ್ ಕ್ರೂಸರ್ ಹೈರೈಡರ್ ಬೆಲೆ ಮಾತ್ರ ರೂ.26,000 ಹೆಚ್ಚಾಗಿದೆ. ಇದು ರೂ. 8.72 ಲಕ್ಷ (ಎಕ್ಸ್-ಶೋ ರೂಂ) ಬೆಲೆಯಲ್ಲಿ ಲಭ್ಯವಿದೆ. ಇವು 28.51 ಕಿ.ಮೀ. ಮೈಲೇಜ್ ನೀಡುತ್ತವೆ. ಮಾರುತಿ ಸುಜುಕಿ ವ್ಯಾಗನ್ಆರ್ಮಾರುತಿ ಸುಜುಕಿ ವ್ಯಾಗನ್ಆರ್ 34.05 ಮೈಲೇಜ್ ನೀಡುತ್ತದೆ. ಇದರ ಬೆಲೆ ರೂ. 6.44 ಲಕ್ಷದಿಂದ ರೂ. 6.89 ಲಕ್ಷ (ಎಕ್ಸ್-ಶೋ ರೂಂ). ಇದರಲ್ಲಿ 1-ಲೀಟರ್ -ಸರಣಿಯ ಪೆಟ್ರೋಲ್ ಎಂಜಿನ್ ಇದೆ. ಟೊಯೋಟಾ ಗ್ಲಾನ್ಜಾ ಮಾರುತಿ ಸುಜುಕಿ ಬಲೆನೊ, ಟೊಯೋಟಾ ಗ್ಲಾನ್ಜಾಈ ಎರಡೂ ಕಾರುಗಳನ್ನು ಮಾರುತಿ ಸುಜುಕಿ ಮತ್ತು ಟೊಯೋಟಾ ಕಂಪನಿಗಳು ತಯಾರಿಸುತ್ತಿವೆ. ಇವು 1.2-ಲೀಟರ್, -ಸರಣಿಯ ಎಂಜಿನ್ ಹೊಂದಿವೆ. ಇದು 30.61 ಕಿ.ಮೀ. ಮೈಲೇಜ್ ನೀಡುತ್ತವೆ. ಬಲೆನೊ ಬೆಲೆ ರೂ. 8.40 ಲಕ್ಷದಿಂದ ರೂ. 9.33 ಲಕ್ಷ (ಎಕ್ಸ್-ಶೋ ರೂಂ) ಆಗಿದ್ದರೆ, ಗ್ಲಾನ್ಜಾ ಬಲೆನೊಗಿಂತ ರೂ.25,000 ಹೆಚ್ಚು. ಮಾರುತಿ ಸುಜುಕಿ ಎಸ್-ಪ್ರೆಸ್ಸೊಮಾರುತಿ ಸುಜುಕಿ ಎಸ್-ಪ್ರೆಸ್ಸೊ 32.73 ಮೈಲೇಜ್ ನೀಡುತ್ತದೆ. ಇದು 1-ಲೀಟರ್ -ಸರಣಿಯ ಪೆಟ್ರೋಲ್ ಎಂಜಿನ್‌ನಿಂದ ಕಾರ್ಯನಿರ್ವಹಿಸುತ್ತದೆ. ಎರಡು ಟ್ರಿಮ್‌ಗಳಲ್ಲಿ ಲಭ್ಯವಿದೆ. ಇದರ ಬೆಲೆ ರೂ. 5.91 ಲಕ್ಷದಿಂದ ರೂ. 6.11 ಲಕ್ಷ (ಎಕ್ಸ್-ಶೋ ರೂಂ) ವರೆಗೆ ಇದೆ. ಮಾರುತಿ ಸುಜುಕಿ ಆಲ್ಟೊ K10ಮಾರುತಿ ಸುಜುಕಿಯಿಂದ ಬಂದ ಅಗ್ಗದ ಕಾರು ಮಾದರಿಗಳಲ್ಲಿ ಆಲ್ಟೊ K10 ಒಂದು. ಇದು 1-ಲೀಟರ್, -ಸರಣಿಯ ಎಂಜಿನ್ ಹೊಂದಿದೆ. ಇದರ ಬೆಲೆ ರೂ. 5.73 ಲಕ್ಷದಿಂದ ರೂ. 5.96 ಲಕ್ಷ (ಎಕ್ಸ್-ಶೋ ರೂಂ) ವರೆಗೆ ಇದೆ. ಇದು 33.85 ಮೈಲೇಜ್ ನೀಡುತ್ತದೆ. ಮಾರುತಿ ಸುಜುಕಿ ಡಿಜೈರ್ಇದರ ಬೆಲೆ ರೂ. 8.44 ಲಕ್ಷದಿಂದ ರೂ. 9.12 ಲಕ್ಷ (ಎಕ್ಸ್-ಶೋ ರೂಂ). 1.2 ಲೀಟರ್ -ಸರಣಿಯ ಪೆಟ್ರೋಲ್ ಎಂಜಿನ್ ಇದೆ. ಡಿಜೈರ್ ಮಾದರಿ 31.12 ಮೈಲೇಜ್ ನೀಡುತ್ತಿದೆ.