ಹಳೇ ವಾಹನ ಆತಂಕ ಬೇಡ, ಎಲೆಕ್ಟ್ರಿಕ್ ವಾಹನವಾಗಿ ಪರಿವರ್ತಿಸಲು ಇದೆ ಮಾನ್ಯತೆ ಪಡೆದ ಘಟಕ! ನವದೆಹಲಿ(ಡಿ.25):ವಾಹನ ಗುಜರಿ ನೀತಿಯಿಂದ( 2021) 15ವರ್ಷಕ್ಕಿಂತ ಹಳೇ ವಾಹನವನ್ನು ಗುಜುರಿಗೆ ಹಾಕಬೇಕು. ಉಳಿಸಿಕೊಳ್ಳಲು ಹಲವು ಕಠಿಣ ನಿಯಮ ಪಾಲಿಸಬೇಕು. ಫಿಟ್ನೆಸ್ ಪಾಸಾಗದಿದ್ದರೆ ಗುಜುರಿಗೆ ಹಾಕಲೇಬೇಕು. ದೆಹಲಿಯಲ್ಲಿ() ಈ ನಿಯಮ ಮತ್ತಷ್ಟು ಕಠಿಣವಾಗಿದೆ. ಇದೇ ಜನವರಿ 1, 2022ರಿಂದ 10 ವರ್ಷಕ್ಕಿಂತ ಹಳೇ ಡೀಸೆಲ್ ವಾಹನ ಬ್ಯಾನ್( ) ಮಾಡಲಾಗಿದೆ. ಹೀಗಾಗಿ ಮಾಲೀಕರು ಆತಂಕಕ್ಕೆ ಒಳಗಾಗಿದ್ದಾರೆ. ಆದರೆ ದೆಹಲಿ ಸಾರಿಗೆ ಇಲಾಖೆ( ) ಹಳೇ ವಾಹನ ಮಾಲೀಕರಿಗೆ ಒಂದು ಅವಕಾಶ ನೀಡಿದೆ. ಹಳೆ ಡೀಸೆಲ್ ವಾಹನವನ್ನು ಎಲೆಕ್ಟ್ರಿಕ್ ವಾಹವನ್ನಾಗಿ ಪರಿವರ್ತಿಸಲು ಅವಕಾಶ ನೀಡಿದೆ. ದೆಹಲಿಯಲ್ಲಿ ಹೊಸ ನಿಯಮ ಜಾರಿಯಾಗಲು ಇನ್ನು ಕೆಲ ದಿನಗಳು ಮಾತ್ರ ಬಾಕಿ ಇದೆ. ದೆಹಲಿಯಲ್ಲಿ 10 ವರ್ಷಕ್ಕಿಂತ ಹಳೇಯ ಡೀಸೆಲ್ ವಾಹನ ಹಾಗೂ 15 ವರ್ಷಕ್ಕಿಂತ ಪೆಟ್ರೋಲ್ ವಾಹನಕ್ಕೆ ನಿಷೇಧ ಹೇರಲಾಗಿದೆ. ಈ ವಾಹನಳ ರಿಜಿಸ್ಟ್ರೇಶನ್ ರದ್ದಾಗಲಿದೆ. ಇದೀಗ ಹಳೇ ವಾಹನ ಹೊಂದಿರುವ ಮಾಲೀಕರಿಗೆ ತಮ್ಮ ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳನ್ನಾಗಿ ಪರಿವರ್ತಿಸಲು( ) ಅವಕಾಶ ನೀಡಿದೆ. ಇದಕ್ಕಾಗಿ ಸರ್ಕಾರದಿಂದ ಮಾನ್ಯತೆ ಪಡೆದ ಕೆಲ ಘಟನಗಳು ದೆಹಲಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಹಳೇ ವಾಹನ ಮಾಲೀಕರು ಪ್ರತಿ ವರ್ಷ ಮಾಡಬೇಕು ,ಕಟ್ಟಬೇಕು ಗ್ರೀನ್ ಟ್ಯಾಕ್ಸ್, ಇದ್ಕಿಂತ ಹೊಸ ವಾಹನವೇ ಲೇಸು ದೆಹಲಿ ಸಾರಿಗೆ ಇಲಾಖೆ ಹಳೇ ವಾಹನಗಳನ್ನು ಸಂಪೂರ್ಣ ಎಲೆಕ್ಟ್ರಿಕ್ ವಾಹನವನ್ನಾಗಿ ಪರಿವರ್ತಿಸಲು ಅವಕಾಶ ನೀಡಿದೆ. ಇದಕ್ಕಾಗಿ ದೆಹಲಿ ಸರ್ಕಾರ 6 ವಾಹನ ಎಲೆಕ್ಟ್ರಿಕ್ ಕಿಟ್ ಉತ್ಪಾದಕರಿಗೆ ಮಾನ್ಯತೆ ನೀಡಿದೆ. ಶೀಘ್ರದಲ್ಲೇ ಮತ್ತಷ್ಟು ಎಲೆಕ್ಟ್ರಿಕ್ ಕಿಟ್ ಕನ್ವರ್ಟರ್ ಉತ್ಪಾದಕರಿಗೆ ದೆಹಲಿ ಸರ್ಕಾರ ಮಾನ್ಯತೆ ನೀಡಲು ಮುಂದಾಗಿದೆ. ದೆಹಲಿ ಸರ್ಕಾರದಿಂದ ಮಾನ್ಯತೆ ಪಡೆದ ಎಲೆಕ್ಟ್ರಿಕ್ ಕಿಟ್ ಉತ್ಪಾದಕರು ಅಂತಾರಾಷ್ಟ್ರೀಯ ಅಟೋಮೇಟೀವ್ ಟೆಕ್ನಾಲಜಿ()ನಿಂದ ಮಾನ್ಯತೆ ಪಡೆದಿದೆ. ಈ ಉತ್ಪಾದಕರಲ್ಲಿ ವಿವಿಧ ರೀತಿಯ ಕಿಟ್ ಲಭ್ಯವಿದೆ. ಇಷ್ಟೇ ಅಲ್ಲ ಪೆಟ್ರೋಲ್, ಡೀಸೆಲ್ ವಾಹನಕ್ಕೆ ಸರಿ ಹೊಂದುವ ಕಿಟ್ ಸುಲಭವಾಗಿ ಹಳೇ ವಾಹನಕ್ಕೆ ಅಳವಡಿಸಲು ಸಾಧ್ಯವಿದೆ. ಸ್ಕೂಟರ್, ಬೈಕ್, ಆಟೋ ರಿಕ್ಷಾ, ಕಾರು ಸೇರಿದಂತೆ ಇಂಧನ ವಾಹವನ್ನು ಹೆಚ್ಚು ಖರ್ಚಿಲ್ಲದೆ ಎಲೆಕ್ಟ್ರಿಕ್ ವಾಹನವನ್ನಾಗಿ ಪರಿವರ್ತಿಸಲು ಸಾಧ್ಯವಿದೆ. 2 ಕೇಂದ್ರದ ಸಬ್ಸಿಡಿಯಿಂದ ಹೊಸ ದಾಖಲೆ ನಿರ್ಮಾಣ, ವಾರಕ್ಕೆ 5,000 ಟು ವ್ಹೀಲರ್ ಸೇಲ್! ಮಾನ್ಯತೆ ಪಡೆದ ಕಿಟ್ ಉತ್ಪಾದಕರಲ್ಲಿ ಇಟ್ರಿಯೋ ಆಟೋಮೊಬೈಲ್ ಎಲೆಕ್ಟ್ರಿಕ್ ಕಿಟ್ ಕೆಲ ವಿಶೇಷತೆಗಳನ್ನು ಹೊಂದಿದೆ. ಈ ಕಿಟ್ ಪೆಟ್ರೋಲ್ ಅಥವಾ ಡೀಸೆಲ್ ವಾಹನಕ್ಕೆ ಅಳವಡಿಸಲು ಸಾಧ್ಯವಿದೆ. 17.3 ಬ್ಯಾಟರಿ ಹೊಂದಿರುವ ಈ ಕಿಟ್ ಒಂದು ಬಾರಿ ಚಾರ್ಜ್ ಮಾಡಿದರೆ 106 ಕಿಲೋಮೀಟರ್ ಮೈಲೇಜ್ ನೀಡಲಿದೆ. ಬೂಮಾ ಇನೋವೇಟಿವ್, 3EV ಇಂಡಸ್ಟ್ರಿ, 21 ರಿನಿವೇಬಲ್ ಎನರ್ಜಿ, ಮೋಟಾರ್ಸ್ ಕಂಪನಿಗಳ ಎಲೆಕ್ಟ್ರಿಕ್ ಕಿಟ್ ಲಭ್ಯವಿದೆ. ದೆಹಲಿಯಲ್ಲಿ 10 ವರ್ಷಕ್ಕಿಂತ ಮೇಲ್ಪಟ್ಟ 1.5 ಲಕ್ಷ ಡೀಸೆಲ್ ವಾಹನಗಳು ಓಡಾಡುತ್ತಿದೆ. ಇನ್ನು 15 ವರ್ಷ ಮೇಲ್ಪಟ್ಟ 28 ಲಕ್ಷಕ್ಕೂ ಅಧಿಕ ವಾಹನಗಳು ದೆಹಲಿಯಲ್ಲಿದೆ. ವಾಯು ಮಾಲಿನ್ಯ ಹೆಚ್ಚಾಗಿರುವ ಕಾರಣ ಸುಪ್ರೀಂ ಕೋರ್ಟ್‌ನಿಂದ ಛಿಮಾರಿ ಹಾಕಿಸಿಕೊಂಡಿರುವ ದೆಹಲಿ ಸರ್ಕಾರ ಕೆಲ ನಿಯಮಗಳನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಲು ನಿರ್ಧರಿಸಿದೆ. ಕೇವಲ ದೆಹಲಿ ಮಾತ್ರವಲ್ಲ ಬೆಂಗಳೂರು ಸೇರಿದಂತೆ ದೇಶದ ಇತರ ನಗರಗಳಲ್ಲಿ ಇಂಧನ ವಾಹನಗಳನ್ನು ಎಲೆಕ್ಟ್ರಿಕ್ ವಾಹನವನ್ನಾಗಿ ಪರಿವರ್ತಿಸುವ ಎಲೆಕ್ಟ್ರಿಕ್ ಕಿಟ್ ಲಭ್ಯವಿದೆ. ಈ ಕಿಟ್ ಮೂಲಕ ಹಳೇ ವಾಹನವನ್ನು ಎಲೆಕ್ಟ್ರಿಕ್ ವಾಹನವನ್ನಾಗಿ ಪರಿವರ್ತಿಸಲು ಸಾಧ್ಯವಿದೆ. ಇದೀಗ ಹಳೇ ವಾಹನ ಮಾಲೀಕರು ತಮ್ಮ ವಾಹವನ್ನು ಇವಿಯಾಗಿ ಪರಿವರ್ತಿಸಲು ಮುಗಿ ಬಿದ್ದಿದ್ದಾರೆ.