:ಆರ್ಯನ್ ಖಾನ್ ಪ್ರಕರಣ ಬೆನ್ನಲ್ಲೇ ಐಷಾರಾಮಿ ಕಾರು ಮಾರಾಟಕ್ಕೆ ಮುಂದಾದ ಶಾರುಖ್ ಖಾನ್! ಮುಂಬೈ(ಡಿ.11):ಬಾಲಿವುಡ್ ಡ್ರಗ್ಸ್ ಪ್ರಕರಣ( ) ತಣ್ಣಗಾಗಿದ್ದರೂ ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್( ) ಕುಟುಂಬದ ಸಂಕಷ್ಟ ಮುಗಿದಿಲ್ಲ. ಇದೀಗ ಬಾಂಬೆ ಹೈಕೋರ್ಟ್ ಜಾಮೀನಿನಲ್ಲಿ ವಿಧಿಸಿದ ಷರತ್ತು ಸಡಿಲಗೊಳಿಸುವಂತೆ ಆರ್ಯನ್ ಖಾನ್( ) ಪರ ವಕೀಲರು ಕೋರ್ಟ್ ಮೆಟ್ಟಿಲೇರಿದ್ದಾರೆ. ಇತ್ತ ಆರ್ಯನ್ ಖಾನ್ ಜಾಮೀನಿನ ಮೇಲೆ ಬಿಡಿಸಿಕೊಳ್ಳಲು ಶಾರುಖ್ ಖಾನ್ ಪಟ್ಟ ಶ್ರಮ ಅಷ್ಟಿಷ್ಟಲ್ಲ. ಆರ್ಯನ್ ಖಾನ್ ಪ್ರಕರಣದಿಂದ ನೊಂದಿರುವ ಶಾರುಖ್ ಖಾನ್ ಇದೀಗ ತಮ್ಮ ಐಷಾರಾಮಿ ಕಾರು( ) ಮಾರಾಟ ಮಾಡುತ್ತಿದ್ದಾರೆ. ಶಾರುಖ್ ಖಾನ್ ಬಳಿ ಹಲವು ಐಷಾರಾಮಿ ಕಾರುಗಳಿವೆ. ಇದರಲ್ಲಿ 7 ಸೀರಿಸ್ ಕಾರನ್ನು ಶಾರುಖ್ ಖಾನ್ ಮಾರಾಟಕ್ಕಿಟ್ಟಿದ್ದಾರೆ. ಇದು ಶಾರುಖ್ ಖಾನ್ ಅತೀ ಹೆಚ್ಚು ಬಾರಿ ಬಳಸಿದ ಔಷಾರಾಮಿ ಕಾರಿಗಿದೆ. ಅಷ್ಟೇ ಅತ್ಯುತ್ತಮ ಕಂಡೀಷನ್‌ ಕಾರು ಇದಾಗಿದೆ. 3 ಲೀಟರ್ ಇನ್‌ಲೈನ್ 6 ಸಿಲಿಂಡರ್ ಎಂಜಿನ್ ಹೊಂದಿದೆ. ಟರ್ಬೋಚಾರ್ಜಡ್ ಪೆಟ್ರೋಲ್ ಎಂಜಿನ್ ಹೊಂದಿರುವ ಈ ಕಾರು 326 ಪವರ್ ಹಾಗೂ 450 ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 5 ಸಾವಿರ ಕೋಟಿ ರೂ. ಒಡೆಯ ಶಾರುಖ್ ಖಾನ್ ಬಳಿ ಇವೆ ದುಬಾರಿ ಕಾರು! ಈ ಕಾರು ನಗರದಲ್ಲಿ ಒಂದು ಲೀಟರ್ ಪೆಟ್ರೋಲ್‌ಗೆ 6 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇನ್ನು ಹೆದ್ದಾರಿಗಳಲ್ಲಿ ಒಂದು ಲೀಟರ್ ಪೆಟ್ರೋಲ್‌ಗೆ 10 ಕಿಲೋಮೀಟರ್ ಮೈಲೇಜ್ ನೀಡಲಿದೆ ನಗರ ಹಾಗೂ ಹೈವೇಗಳಲ್ಲಿ ಡ್ರೈವ್ ಮಾಡಲು, ಪ್ರಯಾಣಿಸಲು ಈ ಕಾರು ಅತ್ಯುತ್ತಮವಾಗಿದೆ. ಶಾರುಖ್ ಖಾನ್ 7 ಸೀರಿಸ್ ಕಾರು 2012ರ ಮಾಡೆಲ್ ಕಾರಾಗಿದೆ. ಹೊಸ ಕಾರಿನ ಬೆಲೆ 1.2 ಕೋಟಿ ರೂಪಾಯಿ(ಎಕ್ಸ್ ಶೋ ರೂಂ). 2012ರ 7 ಸೀರಿಸ್ ಕಾರು ನಿರ್ಮಾಣ ಸ್ಥಗಿತಗೊಳಿಸಿ, ಹೊಸ ಮಾಡೆಲ್ 7 ಸೀರಿಸ್ ಕಾರು ಮಾರುಕಟ್ಟೆಯಲ್ಲಿದೆ. ನೂತನ 7 ಸೀರಿಸ್ ಕಾರಿನ ಬೆಲೆ 1.39 ಲಕ್ಷ ರೂಪಾಯಿಯಿಂದ 2.46 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಆದರೆ ಶಾರುಖ್ ಖಾನ್ ಮಾರಾಟಕ್ಕಿಟ್ಟಿರವ 7 ಸೀರಿಸ್ ಕಾರಿನ ಬೆಲೆ ಬಹಿರಂಗ ಪಡಿಸಿಲ್ಲ. 7 ಸೀರಿಸ್ ಕಾರನ್ನು ಶಾರುಖ್ ಖಾನ್ ಹೆಚ್ಚುಬಾರಿ ಬಳಸಿರುವ ಕಾರಣ ಖರೀದಿದಾರರು ಟೈರ್ ಬದಲಾಯಿಸುವ ಅನಿವಾರ್ಯತೆ ಎದುರಾಗಲಿದೆ. ಜಾಗ್ವಾರ್ ; ಕಿಚ್ಚ ಸುದೀಪ್ ಬಳಿ ಇರುವ ದುಬಾರಿ ಕಾರುಗಳ ಪಟ್ಟಿ! ಶಾರುಖ್ ಖಾನ್ ಅವರ 7 ಸೀರಿಸ್ ಕಾರಿನ ತೂಕ 740Li. ಅಂದರೆ ಸರಿಸುಮಾರು 2 ಟನ್ ತೂಕಕ್ಕಿಂತಲೂ ಹೆಚ್ಚು. ಹೀಗಾಗಿ ಐಷಾರಾಮಿಗಳು ಕಾರುಗಳು ಹೆಚ್ಚಿನ ಮೈಲೇಜ್ ನೀಡುವುದಿಲ್ಲ. ಐಷಾರಾಮಿ ಕಾರಾಗಿರುವ ಕಾರಣ 7 ಸೀರಿಸ್ ಕಾರಿನ ನಿರ್ವಹಣೆ ಕೊಂಚ ದುಬಾರಿ. ಇದರ ಜನರಲ್ ಸರ್ವೀಸ್ 16,500 ರೂಪಾಯಿ. ಪ್ರತಿ 10,000 ಕಿಲೋಮೀಟರ್‌ಗೆ ಒಂದು ಜನರಲ್ ಸರ್ವೀಸ್ ಅಗತ್ಯ. ಇನ್ನು ಮುಂಭಾಗದ ಹಾಗೂ ಹಿಂಭಾಗದ ಒಟ್ಟು 4 ಬ್ರೇಕ್ ಪ್ಯಾಡ್ ಬೆಲೆ 80,000 ರೂಪಾಯಿ. ಇನ್ನು ಒಂದು ಟೈಯರ್ ಬೆಲೆ 30,000 ರೂಪಾಯಿ. ಈ ಕಾರಿನಲ್ಲಿರುವ 100 ಬ್ಯಾಟರಿ ಬೆಲೆ 15,000 ರೂಪಾಯಿ. ಶಾರುಖ್ ಖಾನ್ ಕಾರು ಕಲೆಕ್ಷನ್:ಬಾಲಿವುಡ್ ಕಿಂಗ್ ಎಂದೇ ಗುರುತಿಸಿಕೊಂಡಿರುವ ಶಾರುಖ್ ಖಾನ್ ಬಳಿ ವಿಶ್ವದ ದುಬಾರಿ ಕಾರುಗಳಲ್ಲೊಂದಾದ ಬುಗಾಟಿ ವೈಯ್ರಾನ್ ಕಾರಿದೆ. ಇದರ ಬೆಲೆ 12 ಕೋಟಿ ರೂಪಾಯಿ(ಎಕ್ಸ್ ಶೋ ರೂಂ). ಇನ್ನು 7 ಕೋಟಿ ರೂಪಾಯಿ ರೋಲ್ಸ್ ರಾಯ್ಸ್ ಫ್ಯಾಂಟಮ್ ಕೂಪ್ ಕಾರು ಹೊಂದಿದ್ದಾರೆ. 3.91 ಕೋಟಿ ರೂಪಾಯಿ ಬೆಲೆ(ಎಕ್ಸ್ ಶೋ ರೂಂ)ಯ ಬೆಂಟ್ಲಿ ಜಿಟಿ ಕಾರು, 2 ಕೋಟಿ ರೂಪಾಯಿ ಬೆಲೆ i8 ಕಾರು ಹಾಗೂ 1.30 ಕೋಟಿ ರೂಪಾಯಿ ಎಕ್ಸ್ ಶೋ ರೂಂ ಬೆಲೆ 730li ಕಾರಿದೆ. ಸೀರಿಸ್ ಕನ್ವರ್ಟೇಬಲ್, ಹ್ಯುಂಡೈ ಕ್ರೆಟಾ, ಆಡಿ A8 , ರೇಂಜ್ ರೋವರ್ ಸ್ಪೋರ್ಟ್, ಟೊಯೋಟಾ ಲ್ಯಾಂಡ್ ಕ್ರ್ಯೂಸರ್, ಮಿಸ್ಟಿಬಿಶ್ ಪಜೆರೋ ಕಾರು ಹೊಂದಿದ್ದಾರೆ.