: 2025ಕ್ಕೆ ಸ್ಟೀರಿಂಗ್ ಇಲ್ಲದ, ಸ್ವಯಂಚಾಲಿತ ಕಾರ್?! ಸ್ಮಾರ್ಟ್‌ಫೋನ್ ಉತ್ಪಾದನೆ ಸೇರಿದಂತೆ ಎಲೆಕ್ಟ್ರಾನಿಕ್ಸ್ ಸಾಧನಗಳ ಉತ್ಪಾದನೆಯಲ್ಲಿ ಅಗ್ರಗಣ್ಯವಾಗಿರುವ ಆಪಲ್ ಕಂಪನಿಯು, ತನ್ನ ಎಲೆಕ್ಟ್ರಿಕ್ ಕಾರನ್ನು 2025ರಲ್ಲಿ ಅನಾವರಣ ಮಾಡುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಅತ್ಯಾಧುನಿಕ ತಂತ್ರಜ್ಞಾನ ಆಧರಿತವಾಗಿರಲಿದೆ ಈ ಕಾರ್ ಎನ್ನಲಾಗಿದೆ. ಮತ್ತೊಂದೆಡೆ ಶಿಯೋಮಿ ಕೂಡ ಎಲೆಕ್ಟ್ರಿಕ್ ಕಾರ್ ಬಿಡುಗಡೆ ಮಾಡಲಿದೆ. , ಐಪ್ಯಾಡ್ (), ಐಪಾಡ್ (), ಸ್ಮಾರ್ಟ್‌ವಾಚ್‌ () ಗಳಂಥ ಉತ್ಕೃಷ್ಟ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಸಾಧನಗಳ ಮೂಲಕ ಜಗದ್ವಿಖ್ಯಾತವಾಗಿರುವ ಆಪಲ್ ಕಂಪನಿ ( ) ಮತ್ತೊಂದು ಸಾಹಸಕ್ಕೆ ಮುಂದಾಗಿರುವುದು ಗೊತ್ತಿರುವ ಸಂಗತಿಯಾಗಿದೆ. ಕಳೆದ ವರ್ಷವೇ ಆಪಲ್, ಎಲೆಕ್ಟ್ರಿಕ್ ಕಾರ್ ( ) ತಯಾರಿಸುವುದಾಗಿ ಹೇಳಿಕೊಂಡಿತ್ತು. ಆ ಮೂಲಕ, ಹೊಸ ಉದ್ಯಮಕ್ಕೆ ಕಾಲಿಡುವ ಸೂಚನೆ ನೀಡಿತ್ತು. ಇದೀಗ ಕಂಪನಿಯು 2025ರ ಹೊತ್ತಿಗೆ ಆಪಲ್ ತನ್ನ ಎಲೆಕ್ಟ್ರಿಕ್ ಕಾರನ್ನು ಮಾರುಕಟ್ಟೆಗೆ ಪರಿಚಯಿಸುವ ಸಾಧ್ಯತೆ ಇದೆ. ಆಪಲ್ .ತಯಾರಿಸಲಿರುವ ಈ ಎಲೆಕ್ಟ್ರಿಕ್ ಕಾರ್ ಸೆಲ್ಫ್ ಡ್ರೈವಿಂಗ್ ಆಗಿರುವ ಸಾಧ್ಯತೆ ಇದೆ. ಈ ಬಗ್ಗೆ ಬೂಮ್‌ಬರ್ಗ್ ನ್ಯೂಸ್ ವರದಿ ಮಾಡಿದೆ. ವರದಿಯ ಪ್ರಕಾರ, ಆಪಲ್‌ನ ಈ ಕಾರ್‌ನಲ್ಲಿ ಸ್ಟೀರಿಂಗ್ ಆಗಲೀ, ಪೆಡಲ್‌ಗಳಾಗಿ ಇರುವುದಿಲ್ಲ! ಸಂಪೂರ್ಣ ಹೊಸ ತಂತ್ರಜ್ಞಾನ ಆಧರಿತವಾಗಿ ರೂಪುಗೊಳ್ಳಲಿರುವ ಈ ಕಾರ್ ಬಗ್ಗೆ ಈಗಾಗಲೇ ಸಾಕಷ್ಟು ಕುತೂಹಲ ಜಗತ್ತಿನಾದ್ಯಂತ ಮೂಡಿದೆ. ತನ್ನ ವಿಶಿಷ್ಟ ತಂತ್ರಜ್ಞಾನ ಬಳಕೆಗೆ ಹೆಸರಾಗಿರುವ ಆಪಲ್‌, ಕಾರಿನಲ್ಲಿ ಅಂಥದ್ದೇನ್ನೇ ನಿರೀಕ್ಷಿಸಬಹುದಾಗಿದೆ. ಆಪಲ್ ಕಂಪನಿಯ ಈ ಎಲೆಕ್ಟ್ರಿಕ್ ಕಾರ್ ತಯಾರಿಕಾ ಪ್ರಾಜೆಕ್ಟ್‌ ಟೈಟನ್ () ಎಂದು ಗುರುತಿಸಲಾಗಿದೆ. 2014ರಿದಂಲೇ ಇಂಥದೊಂದು ಪ್ರಕ್ರಿಯೆಯನ್ನು ಕಂಪನಿಯು ಚಾಲ್ತಿಯಲ್ಲಿಟ್ಟಿದೆ. ದೇಶಗಳಲ್ಲಿ ಮತ್ತು ಗ್ರಾಹಕರು ಹೆಚ್ಚು ಪರಿಸರ ಪ್ರಜ್ಞೆಯನ್ನು ಹೊಂದಿರುವುದರಿಂದ ಎಲೆಕ್ಟ್ರಿಕ್ ವಾಹನಗಳ ಬೇಡಿಕೆಯು ಹೆಚ್ಚಿದೆ. ಟೆಸ್ಲಾ () ಮತ್ತು ರಿವಿಯನ್‌ ()ನಂತಹ ಕಂಪನಿಗಳ ಈ ಹೊಸ ಮಾರುಕಟ್ಟೆ ಮೌಲ್ಯವನ್ನು ಸಾಂಪ್ರದಾಯಿಕ ಕಾರು ತಯಾರಕರಿಗಿಂತ ಹೆಚ್ಚು ಮುಂದಕ್ಕೆ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡುತ್ತಿವೆ. ಹಾಗಾಗಿ, ಆಪಲ್ ಕೂಡ ಈ ವಲಯದಲ್ಲಿ ತನ್ನ ಅದೃಷ್ಟ ಪರೀಕ್ಷೆಗೆ ಮುಂದಾಗುತ್ತಿದೆ. ತಂತ್ರಜ್ಞಾನ ಬಳಕೆಯಿಂದ ಯಾವಾಗಲೂ ಒಂದು ಹೆಜ್ಜೆ ಮುಂದೆಯೇ ಇರುವ ಆಪಲ್, ಕಾರ್ ತಯಾರಿಕೆಯಲ್ಲೂ ಅದೇ ಪ್ಯಾಟರ್ನ್ ಅನ್ನು ನಿರೀಕ್ಷಿಸಬಹುದಾಗಿದೆ. ಕೆಲವು ವಿಶ್ಲೇಷಕರ ಪ್ರಕಾರ 2025ರ ಹೊತ್ತಿಗೆ ಆಪಲ್ ತನ್ನ ಕಾರನ್ನು ಲಾಂಚ್ ಮಾಡುವ ಸಂಭಾವ್ಯತೆ ಶೇ.60ರಿಂದ 65ರಷ್ಟಿದೆ. ಸೆಲ್ಫ್ ಡ್ರೈವಿಂಗ್ ಸಿಸ್ಟಮ್, ಪ್ರೊಸೆಸರ್ ಚಿಪ್ಸ್ ಮತ್ತು ಅಡ್ವಾನ್ಸ್ಡ್ ಸೆನ್ಸರ್‌ಗಳನ್ನು ಈ ಕಾರ್ ಹೊಂದಿರಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆದರೆ ಈ ಬಗ್ಗೆ ಆಪಲ್ ಕಂಪನಿಯು ಯಾವುದೇ ಹೇಳಿಕೆಯನ್ನು ನೀಡಿಲ್ಲ. ಶಿಯೋಮಿಯಿಂದಲೂ ಕಾರ್ಬಜೆಟ್ ಹಾಗೂ ಪ್ರೀಮಿಯಂ ಸ್ಮಾರ್ಟ್‌ಫೋನ್‌ ಸೇರಿದಂತೆ ಇತರ ಗ್ಯಾಜೆಟ್‌ಗಳು ಉತ್ಪಾದನೆ ಹಾಗೂ ಮಾರಾಟದ ಮೂಲಕ ಹೆಚ್ಚು ಜನಪ್ರಿಯವಾಗಿರುವ ಚೀನಾದ ಮೂಲದ ಶಿಯೋಮಿ ( ) ಕಂಪನಿ ಎಲೆಕ್ಟ್ರಿಕ್‌ ಕಾರ್ ( ) ಉತ್ಪಾದನೆಯನ್ನು 2024ರಲ್ಲಿ ಆರಂಭಿಸಲಿದೆ ಎಂದು ಅಕ್ಟೋಬರ್‌ನಲ್ಲಿ ಸುದ್ದಿಯಾಗಿತ್ತು. 2024ರಲ್ಲಿ ಭಾರಿ ಪ್ರಮಾಣದಲ್ಲಿ ಕಾರ್ ಉತ್ಪಾದನೆ ಮಾಡುವ ಬಗ್ಗೆ ಸೋಷಿಯಲ್ ಮೀಡಿಯಾ ತಾಣದಲ್ಲಿ ಕಂಪನಿಯು ಅಧಿಕಾರಿಯೊಬ್ಬರು ಬರೆದುಕೊಂಡಿದ್ದರು. ಹಲವು ವೆಬ್‌ಸುದ್ದಿ ತಾಣಗಳು ವರದಿ ಮಾಡಿದ್ದವು. ಶಿಯೋಮಿ ()ಯು 2024ರ ಮೊದಲಾರ್ಧದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ( ) ಹಾಗೂ ಶಿಯೋಮಿ ಕಾರ್ ಉತ್ಪಾದನೆ ಮಾಡಿ, ರಸ್ತೆಗಿಳಿಸಲಿದೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ಜಗತ್ತಿನಾದ್ಯಂತ ಮೊಬಿಲಿಟಿಯಲ್ಲಿ ಸಂಪರ್ಕ ಕ್ರಾಂತಿಯೇ ಸಂಭವಿಸುತ್ತಿದೆ. ಬಹುತೇಕ ರಾಷ್ಟ್ರಗಳು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದೆ. ಇದರ ಪರಿಣಾಮ, ಹೊಸ ವಲಯದಲ್ಲಿನ ಅವಕಾಶವನ್ನು ಬಾಚಿಕೊಳ್ಳುವುದಕ್ಕಾಗಿ ಬಹುತೇಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ಉತ್ಪಾದನಗೆ ಮುಂದಾಗಿವೆ. ಹೊಸ ಎಪ್ರಿಲಿಯಾ ಎಸ್‌ಆರ್ 160, 125 ಸ್ಕೂಟರ್ ಲಾಂಚ್ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ಮುಂದಿನ 10 ವರ್ಷದಲ್ಲಿ 10 ಬಿಲಿಯನ್ ಡಾಲರ್ ಹೂಡಿಕೆ ಮಾಡುತ್ತಿರುವುದಾಗಿ ಈ ಹಿಂದೆಯೇ ಶಿಯೋಮಿ ಅಧಿಕೃತವಾಗಿ ಹೇಳಿಕೊಂಡಿತ್ತು. ಜಗತ್ತಿನ ಅತಿ ದೊಡ್ಡ ಆಟೋಮೊಬೈಲ್ ಹಾಗೂ ಎಲೆಕ್ಟ್ರಿಕ್ ವೆಹಿಕಲ್ ಮಾರುಕಟ್ಟೆಯಾಗಿರುವ ಚೀನಾ ಮಾರುಕಟ್ಟೆಯಲ್ಲಿ ಶಿಯೋಮಿ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯಲ್ಲಿ ತೊಡಗುವ ಮೂಲಕ ಮಹತ್ವದ ಪಾತ್ರ ನಿರ್ವಹಣೆಯ ಸಾಧ್ಯತೆ ಇದೆ. ಚೀನಾ () ಮಾತ್ರವಲ್ಲದೇ, ಭಾರತ ()ವೂ ಸೇರಿದಂತೆ ಇತರ ರಾಷ್ಟ್ರಗಳ ಮಾರುಕಟ್ಟೆಯಲ್ಲೂ ಶಿಯೋಮಿ ಧೂಳೆಬ್ಬಿಸಬಹುದು.: ಸುಜುಕಿ ಅವೆನಿಸ್ 125 ಸ್ಕೂಟರ್ ಲಾಂಚ್, ಬೆಲೆ ಎಷ್ಟು?