ಮಾರುತಿಯ ಆಫ್‌ರೋಡ್ ಎಸ್‌ಯುವಿ ಬಿಡುಗಡೆಗೆ ಸಜ್ಜಾಗಿದೆಯಾ? ಮಾರುತಿ ( ) ಕಂಪನಿಯ ಬಹು ನಿರೀಕ್ಷೆಯ ಆಫ್‌ರೋಡ್ ಎಸ್‌ಯುವಿ ಜಿಮ್ನಿ() ಮತ್ತೆ ಸುದ್ದಿಯಲ್ಲಿದೆ. ಕಂಪನಿಯು ಜಿಮ್ನಿಗೆ ಸಂಬಂಧಿಸಿದ ಟೀಸರ್‌ವೊಂದನ್ನು ಸೋಷಿಯಲ್ ಮೀಡಿಯಾಗಳಲ್ಲಿ ಷೇರ್ ಮಾಡಿದ್ದು, ಗ್ರಾಹಕರಲ್ಲಿ ಕುತೂಹಲ ಮೂಡಿಸಿದೆ. ಈ ಜಿಮ್ನಿ ಮುಂಬರುವ ವರ್ಷದಲ್ಲಿ ಮಾರುಕಟ್ಟೆಗೆ ಲಾಂಚ್ ಆಗಬಹುದು ಎನ್ನಲಾಗುತ್ತಿದೆ. ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಆಫ್‌ರೋಡ್ ಎಸ್‌ಯುವಿ (- ) ಗಳ ಪೈಕಿ ಮಹೀಂದ್ರಾ ಕಂಪನಿಯ ಥಾರ್ () ಹಾಗೂ ಫೋರ್ಸ್ ಕಂಪನಿಯ ಗೂರ್ಖಾ () ಎಸ್‌ಯುವಿ ಸದ್ಯ ಗಮನ ಸೆಳೆಯುತ್ತಿವೆ. ಆದರೆ, ಈ ಎರಡೂ ಎಸ್‌ಯುವಿಗಳಿಗೆ ಠಕ್ಕರ್ ನೀಡಲು ಮಾರುತಿ ಸುಜುಕಿ ( ) ಸಿದ್ಧವಾಗಿದೆ. ತನ್ನ ಐಕಾನಿಕ್ ಜಿಮ್ನಿ () ಆಫ್‌ರೋಡ್ ಎಸ್‌ಯುವಿ ಬಿಡುಗಡೆಗೆ ಸಿದ್ಧತೆ ಮಾಡಿಕೊಂಡಂತಿದೆ. ಮಾರುತಿ ಸುಜುಕಿಯ ( ) ಆಫ್‌ರೋಡ್ ಎಸ್‌ಯುವಿ ಜಿಮ್ನಿ ಲಾಂಚ್ ಬಗ್ಗೆ ಬಹಳ ದಿನಗಳಿಂದಲೂ ಸುದ್ದಿ ಇದೆ. ಹಾಗೆಯೇ ಗ್ರಾಹಕರಲ್ಲೂ ಈ ಬಗ್ಗೆ ಕುತೂಹಲವಿದೆ. ವಿಶೇಷ ಎಂದರೆ, ಹಬ್ಬದ ಸಂದರ್ಭದಲ್ಲಿ ಸೋಷಿಯಲ್ ಮೀಡಿಯಾ ( ) ಗಳಲ್ಲಿ ಕಂಪನಿಯು ಜಿಮ್ನಿ ಬಗ್ಗೆ ಮತ್ತೊಂದು ಟೀಸರ್ () ಹಾಕುವ ಮೂಲಕ ಜನರ ಕುತೂಹಲವನ್ನು ಇಮ್ಮಡಿಗೊಳಿಸಿದೆ. ಹಾಗೆಯೇ, ಸದ್ಯದಲ್ಲೇ ಕಂಪನಿಯು ಈ ಆಫ್‌ರೋಡ್ ಎಸ್‌ಯುವಿಯನ್ನು ಲಾಂಚ್ ಮಾಡಬಹುದು ಎಂಬ ಲೆಕ್ಕಾಚಾರಗಳು ಶುರುವಾಗಿವೆ. ಮುಂಬರುವ ಜಿಮ್ನಿ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಬಿಡುಗಡೆ ಮಾಡಲಾಗಿರುವ ಟೀಸರ್‌ನಲ್ಲಿ, "ದಿಸ್ ಇಸ್ ಜಸ್ಟ್ ಇನ್! ಕಾಡು ಸಾಹಸಮಯವಾಗಿರುವ ಈ ಸವಾರಿ ವಿಭಿನ್ನ ಭೂಪ್ರದೇಶಗಳ ಮೂಲಕ ಸಾಗುತ್ತಿದೆ! ಒಂದು ಪ್ರಶ್ನೆ ಏನೆಂದರೆ, ಇದು ಯಾವ ಕಾರು?" ಎಂದು ಬರೆಯಲಾಗಿದೆ. ಆ ಮೂಲಕ ಕಂಪನಿಯು ಬಹುನ ನಿರೀಕ್ಷೆಯ ಆಫ್‌ರೋಡ್ ಎಸ್‌ಯುವಿ ಜಿಮ್ನಿ ಲಾಂಚ್ ಬಗ್ಗೆ ಸುಳಿವು ಬಿಟ್ಟುಕೊಟ್ಟಿದೆ. ಟಾಟಾ ಪಂಚ್ ಕಾರಿಗೆ ಗರಿಷ್ಠ ಸುರಕ್ಷತೆ ಕಿರೀಟ, ಗ್ಲೋಬಲ್ NCAPನಿಂದ 5 ಸ್ಟಾರ್ ರೇಟಿಂಗ್! ಈ ಟೀಸರ್‌ನಲ್ಲಿ ಆಫ್‌ರೋಡ್-ಡೆಸರ್ಟ್ (-/)ನಲ್ಲಿ ಟೈರ್ ಮಾರ್ಕ್‌ಗಳಿರುವುದನ್ನು ತೋರಿಸಲಾಗಿದೆ. ಈ ಟೀಸರ್‌ನಲ್ಲಿ ಬಿಟ್ಟುಕೊಡಲಾಗಿರುವ ಸುಳಿವುಗಳ ಪ್ರಕಾರ, ಮಾರುತಿ ಕಂಪನಿಯ ಮುಂಬರುವ ಬಹುನಿರೀಕ್ಷೆಯ ಆಫ್‌ರೋಡ್ ಎಸ್‌ಯುವಿ ಜಿಮ್ನಿಗೆ ಸಂಬಂಧಿಸಿದ್ದಾಗಿದೆ ಎಂಬುದು. ಮಾರುತಿ ಸುಜುಕಿ ಕಂಪನಿಯು ಹರಿಯಾಣದ ತನ್ನ ಮಣೆಸರ್ ಪ್ಲಾಂಟ್‌ನಲ್ಲಿ 3 ಡೋರ್ (3 ) ವರ್ಷನ್ ಎಸ್‌ಯುವಿಯನ್ನು ಉತ್ಪಾದಿಸುತ್ತಿದೆ ಮತ್ತು ಅವುಗಳನ್ನು ಜಗತ್ತಿನ ಇತರ ಮಾರುಕಟ್ಟೆಗಳಿಗೆ ರಫ್ತು ಮಾಡುತ್ತಿದೆ. ಅದೇ ರೀತಿ, ಸದ್ಯ ಅಭಿವೃದ್ಧಿ ಹಂತದಲ್ಲಿರುವ 5 ಡೋರ್ ( ) ಜಿಮ್ನಿಯನ್ನು ಇದೇ ಘಟಕದಲ್ಲಿ ನಿರ್ಮಾಣ ಮಾಡುವ ಸಾಧ್ಯತೆಯೂ ಇದೆ. ಭಾರತೀಯ ಆಫ್‌ರೋಡ್‌ ಸೆಗ್ಮೆಂಟ್‌ನಲ್ಲಿ ಮಹಿಂದ್ರಾ ಕಂಪನಿಯ ಥಾರ್ () ಹಾಗೂ ಫೋರ್ಸ್ ಗೂರ್ಖಾ ( ) ಎಸ್‌ಯುವಿಗಳು ಬಿಡುಗಡೆಯಾಗಿ, ಗ್ರಾಹಕರನ್ನು ಸೆಳೆಯಲು ಯಶಸ್ವಿಯಾಗುತ್ತಿವೆ. ಥಾರ್ ಕಳೆದ ವರ್ಷ ಬಿಡುಗಡೆಯಾದರೆ, ಫೋರ್ಸ್ ಗೂರ್ಖಾ ಈ ಹಬ್ಬಕ್ಕೆ ಬಿಡುಗಡೆ ಕಂಡು ಸದ್ದು ಮಾಡುತ್ತಿದೆ. ಮೋಟಾರ್ ಆಸ್ಟರ್ ಕಾರು ಬಿಡುಗಡೆ,ಬೆಲೆ ಕೇವಲ ರೂ 9.78 ಲಕ್ಷ ರೂ! ಮಾರುತಿ ಕಂಪನಿಯು ಮುಂಬರುವ ಈ ಜಿಮ್ನಿ ಖಂಡಿತವಾಗಿಯೂ ಹೊಸ ಮಾದರಿಯ ಥಾರ್ ಹಾಗೂ ಫೋರ್ಸ್ ಗೂರ್ಖಾ ಎಸ್‌ಯುವಿಗಳಿಗೆ ಸಖತ್ ಪೈಪೋಟಿ ನೀಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಮಾರುತಿ ಸುಜುಕಿ ಜಿಮ್ನಿಯ ಹೊಸ ಇಂಡಿಯಾ-ಸ್ಪೆಕ್ 5-ಡೋರ್ ಎಲ್‌ಡಬ್ಲ್ಯೂಬಿ () ಆವೃತ್ತಿಯು 2022ರಲ್ಲಿ ದೇಶದಲ್ಲಿ ಮಾರಾಟವಾಗುವ ನಿರೀಕ್ಷೆಯಿದೆ. ಅಂತಾರಾಷ್ಟ್ರೀಯ ಮಟ್ಟದ ವಿಶೇಷತೆಗಳನ್ನು ಒಳಗೊಳ್ಳಲಿರುವ ಜಿಮ್ನಿ 1.4 ಲೀಟರ್ ಮೈಲ್ಡ್ ಹೈಬ್ರಿಡ್ ಟರ್ಬೊಚಾರ್ಜ್ಡ್ (- ) ಪೆಟ್ರೋಲ್ ಎಂಜಿನ್ ಹೊಂದಿರಲಿದೆ. ಹಾಗೆಯೇ, ಭಾರತದಲ್ಲಿ ಬಿಡುಗಡೆಯಾಗಲಿರುವ ಈ ಎಸ್‌ಯುವಿನಲ್ಲಿ 1.5- K15B ಪೆಟ್ರೋಲ್ ಎಂಜಿನ್ ಬಳಕೆಯಾಗಬಹುದು. ನೀವು ಇದೇ ಎಂಜಿನ್‌ ಅನ್ನು ವಿಟಾರಾ ಬ್ರೆಜಾ ( ), ಸಿಯಾಜ್ (), ಎರ್ಟಿಗಾ () ಮತ್ತು ಎಕ್ಸ್‍ಎಲ್ 6 (XL6) ಕಾರುಗಳಲ್ಲಿ ಕಾಣಬಹುದಾಗಿದೆ. ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿರುವ ಮಾರುತಿ ಸುಜುಕಿ ಕಂಪನಿಯ ಈ ಜಿಮ್ನಿ ಎಸ್‌ಯುವಿನಲ್ಲಿ ಬಳಕೆಯಾಗಲಿರುವ ಎಂಜಿನ್ 6000 rpmನಲ್ಲಿ ಗರಿಷ್ಠ 103 ಪವರ್ ಉತ್ಪಾದಿಸಲಿದೆ. ಹಾಗೆಯೇ, 4400 rpmನಲ್ಲಿ ಗರಿಷ್ಠ 138 ಟಾರ್ಕ್ ಉತ್ಪಾದಿಸಬಹುದು ಎಂದು ಹೇಳಲಾಗುತ್ತಿದೆ. 5 ಸ್ಪೀಡ್ ಗಿಯರ್ ಬಾಕ್ಸ್ ಹಾಗೂ 4 ಸ್ಪೀಡ್ ಆಟೋಮೆಟಿಕ್ ಎಂಜಿನ್‌ಗಳೊಂದಿಗೆ ಈ ಹೊಸ ಎಸ್‌ಯುವಿಯನ್ನು ಗ್ರಾಹಕರು ನಿರೀಕ್ಷಿಸಬಹುದಾಗಿದೆ. ಅಂಪಿಯರ್ ಮ್ಯಾಗ್ನಸ್ ಇಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್, ಬೆಲೆ ಎಷ್ಟು?