ಸರ್ಕಾರಕ್ಕೆ ತಲೆನೋವಾದ ಲಖೀಂಪುರ, ದಿಗ್ಗಜರಿಗೆ ಭಯ ಹುಟ್ಟಿಸಿದ ಪಂಡೋರ; ಅ.4ರ ಟಾಪ್ 10 ಸುದ್ದಿ! ಲಖೀಂಪುರ ಹಿಂಸಾಚಾರ ಭಾರಿ ಸದ್ದು ಮಾಡುತ್ತಿರುವ ಬೆನ್ನಲ್ಲೇ ಕೇಂದ್ರ ಸಚಿವರ ಮಗ ಸೇರಿ 14 ಮಂದಿ ವಿರುದ್ಧ ಕೇಸ್ ದಾಖಲಾಗಿದೆ. ಆರ್ಯನ್ ಖಾನ್ ಡ್ರಗ್ಸ್ ವಿಚಾರಣೆ ತೀವ್ರಗೊಂಡಿದ್ದು, ಶಾರುಖ್ ಕುಟುಂಬದ ಆತಂಕ ಹೆಚ್ಚಿಸಿದೆ. ಪಂಡೋರಾ ಪೇಪರ್ಸ್ ದಿಗ್ಗಜರ ಅಕ್ರಮ ಬಯಲು ಮಾಡಿದೆ. ರಚಿತಾ ರಾಮ್‌ಗೆ ರಮ್ಯಾಳಿಂದ ಅಚ್ಚರಿ ಉಡುಗೊರೆ, ಬೈ ಎಲೆಕ್ಷನ್‌ಗೂ ಮೊದಲೇ ಪಕ್ಷಾಂತರ ಚುರುಕು ಸೇರಿದಂತೆ ಅಕ್ಟೋಬರ್ 4ರ ಟಾಪ್ 10 ಸುದ್ದಿ ವಿವರ ಇಲ್ಲಿವೆ. ಲಖೀಂಪುರ ಹಿಂಸಾಚಾರ: ಕೇಂದ್ರ ಸಚಿವರ ಮಗ ಸೇರಿ 14 ಮಂದಿ ವಿರುದ್ಧ ಕೇಸ್! ಉತ್ತರಪ್ರದೇಶದ( ) ಉಪ ಮುಖ್ಯಮಂತ್ರಿ ಕೇಶವ್‌ ಪ್ರಸಾದ್‌ ಮೌರ್ಯ( ) ಅವರ ಭೇಟಿ ವಿರೋಧಿಸಿ ರೈತರು ನಡೆಸುತ್ತಿದ್ದ ಪ್ರತಿಭಟನೆ ಹಿಂಸಾರೂಪ ಪಡೆದು 8 ಜನರು ಸಾವಿಗೆ ಕಾರಣವಾದ ಘಟನೆಗೆ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದೆ. ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವರ ಪುತ್ರ ಸೇರಿ ಒಟ್ಟು 14 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಆರ್ಯನ್‌ ಡ್ರಗ್ಸ್‌ ಹವ್ಯಾಸ ಬಯಲಾಗಿದ್ದು ಹೀಗೆ! ಆರ್ಯನ್‌ ಖಾನ್‌( ) ನಿಯಮಿತವಾಗಿ ಮಾದಕವಸ್ತು ಆರ್ಡರ್‌ ಮಾಡುತ್ತಿದ್ದ ಮತ್ತು ಸೇವಿಸುತ್ತಿದ್ದ ಎನ್ನುವ ವಿಷಯ ಆತನ ಮೊಬೈಲ್‌ನಲ್ಲಿನ ವಾಟ್ಸಾಪ್‌() ಚಾಟ್‌ನಿಂದಾಗಿ ಬಹಿರಂಗಗೊಂಡಿದೆ. : ಸಚಿನ್ ತೆಂಡೂಲ್ಕರ್ ಸೇರಿದಂತೆ ವಿಶ್ವದ ದಿಗ್ಗಜರ ಅಕ್ರಮ ಬಯಲು! ಪನಾಮ ಪೇಪರ್ಸ್‌( ) ಬಳಿಕ ಇದೀಗ ಪಂಡೋರ ಪೇಪರ್ಸ್‌( ) ಹೆಸರಿನಲ್ಲಿ ಸೋರಿಕೆಯಾದ ಲಕ್ಷಾಂತರ ದಾಖಲೆಗಳು ಭಾರತ() ಸೇರಿದಂತೆ 91 ದೇಶಗಳ ಹಾಲಿ ಮತ್ತು ಮಾಜಿ ನಾಯಕರು, ಅಧಿಕಾರಿಗಳು ಮತ್ತು ಸೆಲೆಬ್ರಿಟಿಗಳ ಹಣಕಾಸಿನ ರಹಸ್ಯ ಬಹಿರಂಗಪಡಿಸುವುದಾಗಿ ಹೇಳಿದೆ. T20 ಟೂರ್ನಿ ಆರಂಭಕ್ಕೂ ಮುನ್ನ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟ ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಅಕ್ಟೋಬರ್ 17ರಿಂದ ಯುಎಇ ಮತ್ತು ಓಮನ್‌ನಲ್ಲಿ ಜರುಗಲಿದೆ. 2016ರ ಬಳಿಕ ನಡೆಯುತ್ತಿರುವ ಮೊದಲ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಇದಾಗಿದ್ದು, ಈ ಹೈವೋಲ್ಟೇಜ್‌ ಪಂದ್ಯಗಳನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ರಚಿತಾಗೆ ಸರ್ಪ್ರೈಸ್ ಗಿಫ್ಟ್ ಕೊಟ್ಟ ರಮ್ಯಾ..ಎಲ್ಲ ಕಡೆಯಿಂದ ಶುಭಾಶಯ ಗುಳಿಕೆನ್ನೆ ಚೆಲುವೆ ರಚಿತಾ ರಾಮ್( ) ಅವರಿಗೆ ಜನ್ಮದಿನದ ಸಂಭ್ರಮ. ದಕ್ಷಿಣ ಭಾರತದ ಚಿತ್ರರಂಗದ() ಗಣ್ಯರಿಂದ ಶುಭಾಶಯಗಳು ಹರಿದು ಬಂದಿವೆ. ರಮ್ಯಾ ದಿವ್ಯ ಸ್ಪಂದನಾ ವಿಶೇಷ ಗಿಫ್ಟ್ ಕಳಿಸಿದ್ದಾರೆ. 21 ಸಾವಿರ ರೂ.ಗೆ ಬುಕ್ ಮಾಡಿ ಹೊಚ್ಚ ಹೊಸ ಟಾಟಾ ಪಂಚ್, ಇದು ಅತ್ಯಾಕರ್ಷ ಕಾರು! ಭಾರತದಲ್ಲಿ() ಕಾರು ಉತ್ಪಾದನೆಯಲ್ಲಿ ಟಾಟಾ ಮೋಟಾರ್ಸ್( ) ಹೊಸ ಇತಿಹಾಸ ರಚಿಸಿದೆ. ಕಳೆದ ಕೆಲ ವರ್ಷಗಳಲ್ಲಿ ಟಾಟಾ ಮೋಟಾರ್ಸ್ ಗ್ರಾಹಕರ ನೆಚ್ಚಿನ ಕಾರಾಗಿ ಬದಲಾಗಿದೆ. ಅತ್ಯಾಕರ್ಷಕ ಲುಕ್, ಅದ್ಭುತ ಪರ್ಫಾಮೆನ್ಸ್, ಗರಿಷ್ಠ ಸುರಕ್ಷತೆ ಹಾಗೂ ಕೈಗೆಟುಕುವ ಬೆಲೆಯಿಂದ ಟಾಟಾ ಬಹುಬೇಡಿಕೆಯ ಕಾರಾಗಿದೆ. ಇದೀಗ ಟಾಟಾ ಹೊಚ್ಚ ಹೊಸ ಮೈಕ್ರೋ ಟಾಟಾ ಪಂಚ್( ) ಅನಾವರಣ ಮಾಡಿದೆ. ಲೆಕ್ಕಕ್ಕಿಲ್ಲದಂತಾದ ಬೈಎಲೆಕ್ಷನ್ ಸ್ಪೆಷಲಿಸ್ಟ್, ಅಭಿಮಾನಿಗಳಿಗೊಂದು ವಿಜಯೇಂದ್ರ ಮನವಿ ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆ ( ) ಉಸ್ತುವಾರಿಗಳ ಪಟ್ಟಿಯಲ್ಲಿ ಬಿವೈ ವಿಜಯೇಂದ್ರ ಹೆಸರಿಲ್ಲ ಎಂಬ ಕಾರಣಕ್ಕೆ ಅವರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಾಂಗ್ರೆಸ್ ಸೇರ್ಪಡೆ ಲಿಸ್ಟ್‌ಗೆ ಮತ್ತೋರ್ವ ಮುಖಂಡ : ಖಚಿತ ಪಡಿಸಿದ ನಾಯಕ ತಾವು ಕಾಂಗ್ರೆಸ್ () ಸೇರ್ಪಡೆ ಆಗುವುದಂತೂ ಖಚಿತ. ಆದರೆ ಎಂದು ಸೇರ್ಪಡೆ ಆಗುವುದು ಎಂಬುದು ಮಾತ್ರ ನಿರ್ಧರಿಸಬೇಕು ಎಂದು ಜೆಡಿಎಸ್‌ನ () ವಿಧಾನ ಪರಿಷತ್ ಸದಸ್ಯ ಬೆಮಲ್ ಕಾಂತರಾಜು () ಹೇಳಿದರು.