ನಟಿ ರಾಧಿಕಾ ಆಪ್ಟೆಯ ಲಕ್ಷುರಿಯಸ್‌ ಕಾರು ಕಲೆಕ್ಷನ್‌ ! 7 ಸೆಪ್ಟೆಂಬರ್ 1985 ರಂದು ಪುಣೆಯಲ್ಲಿ ಜನಿಸಿದ ರಾಧಿಕಾ ಆಪಟ್ಟೆ 36ನೇ ವರ್ಷಕ್ಕೆ ಕಾಲಿಟಿದ್ದಾರೆ. ರಾಧಿಕಾ ಆಪ್ಟೆ ನಿಸ್ಸಂದೇಹವಾಗಿ ಬಿ-ಟೌನ್‌ನ ಪ್ರಮುಖ ನಟಿಯರಲ್ಲಿ ಒಬ್ಬರು. ಈ ನಟಿ ಗ್ಲಾಮ್ ಲುಕ್ ಹೊರತಾಗಿ ಯಾವುದೇ ಸಾಮಾನ್ಯ ಪಾತ್ರದಲ್ಲಿ ಸುಲಭವಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ರಾಧಿಕಾ ಕಾರಿನ ಬಗ್ಗೆ ವಿಶೇಷ ಒಲವು. ಇವರು ತಮ್ಮ ಕಲೆಕ್ಷನ್‌ನಲ್ಲಿ ಹಲವು ಕಾರುಗಳನ್ನು ಹೊಂದಿದ್ದಾರೆ. 7 ಸೆಪ್ಟೆಂಬರ್ 1985 ರಂದು ಪುಣೆಯಲ್ಲಿ ಜನಿಸಿದ ರಾಧಿಕಾ ಆಪಟ್ಟೆ 36ನೇ ವರ್ಷಕ್ಕೆ ಕಾಲಿಟಿದ್ದಾರೆ. ರಾಧಿಕಾ ಆಪ್ಟೆ ನಿಸ್ಸಂದೇಹವಾಗಿ ಬಿ-ಟೌನ್‌ನ ಪ್ರಮುಖ ನಟಿಯರಲ್ಲಿ ಒಬ್ಬರು. ಈ ನಟಿ ಗ್ಲಾಮ್ ಲುಕ್ ಹೊರತಾಗಿ ಯಾವುದೇ ಸಾಮಾನ್ಯ ಪಾತ್ರದಲ್ಲಿ ಸುಲಭವಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ರಾಧಿಕಾ ಕಾರಿನ ಬಗ್ಗೆ ವಿಶೇಷ ಒಲವು. ಇವರು ತಮ್ಮ ಕಲೆಕ್ಷನ್‌ನಲ್ಲಿ ಹಲವು ಕಾರುಗಳನ್ನು ಹೊಂದಿದ್ದಾರೆ. 2005ರಲ್ಲಿ ನಟಿ ರಾಧಿಕಾ ಆಪ್ಟೆ ವಾಹ್ ಲೈಫ್ ಹೋ ತೋ ಐಸಿ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಹಿಂದಿ ಜೊತೆಗೆ, ದಕ್ಷಿಣದಲ್ಲೂ ಕೆಲವು ಚಿತ್ರಗಳನ್ನು ಮಾಡುವ ಮೂಲಕ ನಟಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಸಿನಿಮಾಗಳನ್ನು ಮಾಡುವಾಗ ರಾಧಿಕಾ ತನ್ನನ್ನು ಒಂದು ರೀತಿಯ ಪಾತ್ರಗಳಿಗೆ ಸೀಮಿತಗೊಳಿಸುವುದಿಲ್ಲ. ಅವರು ಅನೇಕ ಅಸಾಂಪ್ರದಾಯಿಕ ಫಿಲ್ಮ್‌ಗಳಲ್ಲಿಯೂ ನಟಿಸಿದ್ದಾರೆ. ಪ್ಯಾಡ್ ಮ್ಯಾನ್, ಲಸ್ಟ್ ಸ್ಟೋರೀಸ್, ರಾತ್ ಅಕೆಲಿ ಹೈ ಮುಂತಾದ ಸಿನಿಮಾಗಳಲ್ಲಿ ಆಪ್ಟೆ ವೈವಿಧ್ಯಮಯ ಪಾತ್ರಗಳಿಗೆ ಜೀವ ತುಂಬಿದ್ದಾರೆ. राधिका आप्टे ರಾಧಿಕಾ ಆಪ್ಟೆ ಸಿನಿಮಾಗಳ ಜೊತೆಗೆ ಕಾರಿನ ಬಗ್ಗೆ ವಿಶೇಷ ಒಲವು ಹೊಂದಿದ್ದಾರೆ. ಇವರು ತಮ್ಮ ಕಲೆಕ್ಷನ್‌ನಲ್ಲಿ ಹಲವು ಕಾರುಗಳನ್ನು ಹೊಂದಿದ್ದಾರೆ. ಇಲ್ಲಿದೆ ಅವರ ಕಾರು ಸಂಗ್ರಹದ ವಿವರ. A4:ರಾಧಿಕಾ ಆಪ್ಟೆ ಆಡಿ ಎ 4ನ ಹೆಮ್ಮೆಯ ಮಾಲೀಕರು. ನಟಿ ಹೊಂದಿರುವ ಈ ಕಾರಿನ ಬೆಲೆ 43.19 ಲಕ್ಷ ರೂ. ವೆಬ್‌ಸೈಟ್‌ನ ಪ್ರಕಾರ, ಆಡಿ ಎ4 ಪೆಟ್ರೋಲ್ ಆವೃತ್ತಿಯ ಬೆಲೆ ಶ್ರೇಣಿ ರೂ 43.19 ಲಕ್ಷದಿಂದ ಆರಂಭಗೊಂಡು, ರೂ 47.61 ಲಕ್ಷಕ್ಕೆ ಏರುತ್ತದೆ. X5:ಆಡಿ A4 ಜೊತೆ ನಟಿ ತನ್ನ ಕಾರು ಸಂಗ್ರಹದಲ್ಲಿ X5 ಅನ್ನು ಹೊಂದಿದ್ದಾರೆ. X5 ನ ಬೆಲೆ ಆಡಿ A4 ಗಿಂತ ಹೆಚ್ಚಾಗಿದೆ. ಸೂಪರ್ ಐಷಾರಾಮಿ ಕಾರಿನ ಸರಾಸರಿ ಎಕ್ಸ್ ಶೋ ರೂಂ ಬೆಲೆ 76.47 ಲಕ್ಷ ರೂ ಆಗಿದೆ. :ರಾಧಿಕಾರ ಸಂಗ್ರಹದ ಮೂರನೇ ಐಷಾರಾಮಿ ಕಾರು ವೋಕ್ಸ್‌ವ್ಯಾಗನ್ ಟಿಗುವಾನ್. ಕಾರಿನ ಬೆಲೆ 27.49 ಲಕ್ಷದಿಂದ 30.87 ಲಕ್ಷ ರೂ. , ರಾಧಿಕಾ ಕೊನೆಯದಾಗಿ ಓಕೆ ಕಂಪ್ಯೂಟರ್‌ನಲ್ಲಿ ಜಾಕಿ ಶ್ರಾಫ್ ಮತ್ತು ವಿಜಯ್ ವರ್ಮಾ ಜೊತೆ ಕಾಣಿಸಿಕೊಂಡರು. ಈ ಸರಣಿಯಲ್ಲಿ ಲಕ್ಷ್ಮಿ ಸೂರಿ ಪಾತ್ರವನ್ನು ನಟಿ ನಿರೂಪಿಸಿದ್ದಾರೆ, ಇದನ್ನು ಒಟಿಟಿ ವೇದಿಕೆಯಲ್ಲಿ ಬಿಡುಗಡೆ ಮಾಡಲಾಯಿತು. ಪ್ರಸ್ತುತ ಅವರು ಮೋನಿಕಾ, ಓ ಮೈ ಡಾರ್ಲಿಂಗ್!, ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಿರುವುದು ವರದಿಯಾಗಿದೆ. ಇದು ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಸಾರವಾಗುತ್ತದೆ. ವೈಯಕ್ತಿಕ ಜೀವನದಲ್ಲಿ, ನಟಿ ಬ್ರಿಟಿಷ್ ಸಂಗೀತಗಾರ ಬೆನೆಡಿಕ್ಟ್ ಟೇಲರ್ ಅವರನ್ನು ವಿವಾಹವಾದರು. ರಾಧಿಕಾ ಮತ್ತು ಬೆನೆಡಿಕ್ಟ್ ಅವರ ಫೋಟೋಗಳು ಇಂಟರ್‌ನೆಟ್‌ ಹಲವು ಬಾರಿ ವೈರಲ್‌ ಆಗಿವೆ. ಆದಾಗ್ಯೂ, ರಾಧಿಕಾ ತನ್ನ ವೈವಾಹಿಕ ಜೀವನದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಹೆಚ್ಚು ಬಹಿರಂಗಪಡಿಸುವುದ್ದಿಲ್ಲ. ತನ್ನ ವೈಯಕ್ತಿಕ ಜೀವನವನ್ನು ಖಾಸಗಿಯಾಗಿ ಇಟ್ಟುಕೊಳ್ಳುವ ಕಲ್ಪನೆಯನ್ನು ನಟಿ ನಂಬಿದ್ದಾರೆ.