ಓಲಾ ಕಂಪನಿಯ ಬಹು ನಿರೀಕ್ಷಿತ ಎಲೆಕ್ಟ್ರಿಕ್‌ ಸ್ಕೂಟರ್‌ ಬಿಡುಗಡೆ ನವದೆಹಲಿ (ಸೆ.08):ಬೆಂಗಳೂರು ಮೂಲದ ಓಲಾ ಕಂಪನಿಯ ಬಹು ನಿರೀಕ್ಷಿತ ಎಲೆಕ್ಟ್ರಿಕ್‌ ಸ್ಕೂಟರ್‌ ಇಂದು ಮಾರುಕಟ್ಟೆಗೆ ಬಿಡುಗಡೆ ಆಗಲಿದೆ. ಎಸ್‌-1 ಮತ್ತು ಎಸ್‌ 1 ಪ್ರೋ ಶ್ರೇಣಿಯ ಸ್ಕೂಟರ್‌ ಅನ್ನು ಓಲಾ ಮಾರುಕಟ್ಟೆಗೆ ಪರಿಚಯಿಸಿದೆ. 499 ರು. ಮುಂಗಡ ಹಣ ಪಾವತಿಸಿ ಸ್ಕೂಟರ್‌ ಅನ್ನು ಬುಕ್‌ ಮಾಡಬಹುದಾಗಿದ್ದು, ಅಕ್ಟೋಬರ್‌ ವೇಳೆಗೆ ಸ್ಕೂಟರ್‌ಗಳು ಗ್ರಾಹಕರ ಕೈಸೇರಲಿವೆ. ಇವು ಯಾವುದೇ ಶೋರೂಂಗಳಲ್ಲಿ ಮಾರಾಟಕ್ಕೆ ಲಭ್ಯವಿಲ್ಲ. ಸ್ಕೂಟರ್‌ಗೂ ಬಂತು ರಿವರ್ಸ್‌ ಗೇರ್‌: ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಟೀಕೆ! ಕೇವಲ ಆನ್‌ಲೈನ್‌ ಮೂಲಕವೇ ಬುಕ್‌ ಮಾಡಬೇಕು. ಬಳಿಕ ಮನೆಗೆ ಬೈಕ್‌ ಪೂರೈಸಲಾಗುವುದು. ಕಂಪನಿ ವಾರ್ಷಿಕ 10 ಲಕ್ಷ ಬೈಕ್‌ ಉತ್ಪಾದಿಸುವ ಗುರಿ ಹಾಕಿಕೊಂಡಿದೆ. ಮಾಡೆಲ್‌ ಎಸ್‌-1 ಎಸ್‌.1ಪ್ರೊ ದರ 99999 1,29,999 1 ರಿಚಾಜ್‌ರ್‍ 121 ಕಿ.ಮೀ 181 ಕಿ.ಮೀ ರೀಚಾಜ್‌ರ್‍ ಟೈಮ್‌ 40 ನಿಮಿಷ 40 ನಿಮಿಷ ವೇಗ 90 ಕಿ.ಮೀ 115 ಕಿ.ಮೀ ಇಎಂಐ 2999ರು. 3199 ರು.