ಮೂರು ಬ್ಯಾಟರಿ ಆಯ್ಕೆಯಲ್ಲಿ ಒಲಾ S1 ಸ್ಕೂಟರ್, ಬೆಲೆ ಕೇವಲ 69,999 ರೂಪಾಯಿ! ಭಾರತದಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಗ್ರಾಹಕರ ನೆಚ್ಚಿನ ಆಯ್ಕೆಯಾಗುತ್ತಿದೆ. ಭರ್ಜರಿ ಡಿಸ್ಕೌಂಟ್ ಆಫರ್ ಬಳಿಕ ಇದೀಗ ಓಲಾ ಕೈಗೆಟುಕುವದ ದರ ಎಲೆಕ್ಟ್ರಿಕ್ ಸ್ಕೂಟರ್ ವಿತರಣೆ ಆರಂಭಗೊಂಡಿದೆ.. ಮೂರು ಬ್ಯಾಟರಿ ಆಯ್ಕೆಗಳಲ್ಲಿ ಸ್ಕೂಟರ್ ಲಭ್ಯವಿದ್ದು, 69,999 ರೂಪಾಯಿಗೆ ಲಭ್ಯವಿದೆ. ಭಾರತದಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಗ್ರಾಹಕರ ನೆಚ್ಚಿನ ಆಯ್ಕೆಯಾಗುತ್ತಿದೆ. ಭರ್ಜರಿ ಡಿಸ್ಕೌಂಟ್ ಆಫರ್ ಬಳಿಕ ಇದೀಗ ಓಲಾ ಕೈಗೆಟುಕುವದ ದರ ಎಲೆಕ್ಟ್ರಿಕ್ ಸ್ಕೂಟರ್ ವಿತರಣೆ ಆರಂಭಗೊಂಡಿದೆ.. ಮೂರು ಬ್ಯಾಟರಿ ಆಯ್ಕೆಗಳಲ್ಲಿ ಸ್ಕೂಟರ್ ಲಭ್ಯವಿದ್ದು, 69,999 ರೂಪಾಯಿಗೆ ಲಭ್ಯವಿದೆ. ಓಲಾ ಎಲೆಕ್ಟ್ರಿಕ್ ಸ್ಕೂಟರ್ ಭಾರತದಲ್ಲಿ ಇವಿ ಮಾರುಕಟ್ಟೆ ಆಕ್ರಮಿಸಿಕೊಳ್ಳುತ್ತಿದೆ. ಇದೀಗ ಓಲಾ ಸ್ಕೂಟರ್ ಕೈಗೆಟುಕುವ ದರದ ಒಲಾ S1 ಸ್ಕೂಟರ್ ಬಿಡುಗಡೆಯಾಗಿ ಇದೀಗ ಡೆಲಿವರಿ ಆರಂಭಗೊಂಡಿದೆ. ಇದು ಓಲಾದ ಕೈಗೆಟುಕುವ ದರದ ಸ್ಕೂಟರ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಒಲಾ S1 ಸ್ಕೂಟರ್ ಮೂರು ಬ್ಯಾಟರಿ ವೇರಿಯೆಂಟ್‌ನಲ್ಲಿ ಬಿಡುಗಡೆಯಾಗಿದೆ. ಇದು ಒಲಾದ ಕೈಗೆಟುಕುವ ಬೆಲೆಯ ಸ್ಕೂಟರ್. ಕಾರಣ ಒಲಾ S1 ಎಲೆಕ್ಟ್ರಿಕ್ ಸ್ಕೂಟರ್ ಆರಂಭಿಕ ಬೆಲೆ 69,999 ರೂಪಾಯಿ(ಎಕ್ಸ್ ಶೋರೂಂ) ಒಲಾ S1 ಸ್ಕೂಟರ್ 2kw, 3kw ಹಾಗೂ 4kw ಮೂರು ಬ್ಯಾಟರಿ ವೇರಿಯೆಂಟ್‌ನಲ್ಲಿ ಲಭ್ಯವಿದೆ. 2kw ಸ್ಕೂಟರ್ ಬೆಲೆ 69,900 ರೂಪಾಯಿ, 3kw ಬೆಲೆ 84,999 ರೂಪಾಯಿ ಹಾಗೂ 4kw ಬೆಲೆ 99,999 ರೂಪಾಯಿ ಬೆಲೆಯಲ್ಲಿ ಲಭ್ಯವಿದೆ. (ಎಲ್ಲಾ ಬೆಲೆಗಳು ಎಕ್ಸ್ ಶೋ ರೂಂ) S1 2kw ಬ್ಯಾಟರಿ ವೇರಿಯೆಂಟ್ ಸ್ಕೂಟರ್ ಒಂದು ಬಾರಿ ಚಾರ್ಜ್ ಮಾಡಿದರೆ 91 ಕಿ.ಮೀ ಮೈಲೇಜ್ ರೇಂಜ್ ನೀಡಲಿದೆ. ಸಂಪೂರ್ಣ ಚಾರ್ಜ್‌ಗೆ 7.5 ಗಂಟೆ ತೆಗೆದುಕೊಳ್ಳಲಿದೆ(ನಾರ್ಮಲ್ ಸಾಕೆಟ್ ಚಾರ್ಜಿಂಗ್) 3kw ಬ್ಯಾಟರಿ ವೇರಿಯೆಂಟ್ ಸ್ಕೂಟರ್ 151 ಕಿ.ಮೀ ಮೈಲೇಜ್ ನೀಡಲಿದೆ 0-40 ಕಿ.ಮೀ ವೇಗವನ್ನು ಕೇವಲ 3.3 ಸೆಕೆಂಡ್‌ನಲ್ಲಿ ತೆಗೆದುಕೊಳ್ಳಲಿದೆ. ಗರಿಷ್ಟ ವೇಗ 90 ಕಿ.ಮೀ ಪ್ರತಿಗಂಟಗೆ ಇನ್ನು 4kw ಬ್ಯಾಟರಿ ವೇರಿಯೆಂಟ್ ಸ್ಕೂಟರ್ ಒಂದು ಬಾರಿ ಚಾರ್ಜ್ ಮಾಡಿದರೆ 190 ಕಿ.ಮೀ ಮೈಲೇಜ್ ನೀಡಲಿದೆ. ಇದರ ವೇಗ ಸೇರಿದಂತೆ ಇತರ ಫೀಚರ್ಸ್ 3kw ಬ್ಯಾಟರಿ ವೇರಿಯೆಂಟ್ ಸ್ಕೂಟರ್‌ಗೂ ವ್ಯತ್ಯಾಸವಿಲ್ಲ. ಮೂರು ಬ್ಯಾಟರಿ ವೇರಿಯೆಂಟ್ ಸ್ಕೂಟರ್‌ನಲ್ಲಿ ಮೂರು ರೈಡಿಂಗ್‌ ಮೊಡ್‌ಗಳಾದ ಇಕೋ, ನಾರ್ಮಲ್ ಹಾಗೂ ಸ್ಪೋರ್ಟ್ಸ್ ಲಭ್ಯವಿದೆ. ಜೊತೆಗೆ ಅತ್ಯುತ್ತಮ ರೈಡಿಂಗ್ ಅನಭವ ನೀಡಲಿದೆ. ಈ ಮೂಲಕ ಓಲಾ ಇದೀಗ ಭಾರತದ ಎಲೆಕ್ಟ್ರಿಕ್ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಬೆಲೆಯಲ್ಲಿ ಸ್ಕೂಟರ್ ಬಿಡುಗಡೆ ಮಾಡಿದೆ. S1 ವೇರಿಯೆಂಟ್ ಭಾರಿ ಬೇಡಿಕೆ ಪಡೆದುಕೊಂಡಿದೆ