ಭರ್ಜರಿ ಡಿಸ್ಕೌಂಟ್ ಆಫರ್ ಘೋಷಿಸಿದ ಓಲಾ ಎಲೆಕ್ಟ್ರಿಕ್ ಸ್ಕೂಟರ್, ಕೇವಲ 69,999ರೂಗೆ ಇವಿ! ಓಲಾ ಎಲೆಕ್ಟ್ರಿಕ್ ಸ್ಕೂಟರ್‌ ಇದೀಗ ಮತ್ತೊಂದು ಸುತ್ತಿನ ಡಿಸ್ಕೌಂಟ್ ಆಫರ್ ನೀಡಿದೆ. ಈ ಬಾರಿ ಕೈಗೆಟುಕುವ ದರದಲ್ಲಿ ಸ್ಕೂಟರ್ ಸಿಗುವಂತೆ ಮಾಡಿದೆ. ಡಿಸ್ಕೌಂಟ್ ಬಳಿಕ ಓಲಾ ಸ್ಕೂಟರ್ ಕೇವಲ 69,999 ರೂಪಾಯಿಗೆ ಲಭ್ಯವಿದೆ. ಓಲಾ ಎಲೆಕ್ಟ್ರಿಕ್ ಸ್ಕೂಟರ್‌ ಇದೀಗ ಮತ್ತೊಂದು ಸುತ್ತಿನ ಡಿಸ್ಕೌಂಟ್ ಆಫರ್ ನೀಡಿದೆ. ಈ ಬಾರಿ ಕೈಗೆಟುಕುವ ದರದಲ್ಲಿ ಸ್ಕೂಟರ್ ಸಿಗುವಂತೆ ಮಾಡಿದೆ. ಡಿಸ್ಕೌಂಟ್ ಬಳಿಕ ಓಲಾ ಸ್ಕೂಟರ್ ಕೇವಲ 69,999 ರೂಪಾಯಿಗೆ ಲಭ್ಯವಿದೆ. ಓಲಾ ಎಲೆಕ್ಟ್ರಿಕ್ ಸ್ಕೂಟರ್ ಇದೀಗ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸಿದೆ. ದೇಶದ ಉತ್ತಮ ಇವಿ ಸ್ಕೂಟರ್‌ಗಳಲ್ಲಿ ಓಲಾ ಕೂಡ ಒಂದಾಗಿದೆ. ಇದೀಗ ಓಲಾ ಭರ್ಜರಿ ಡಿಸ್ಕೌಂಟ್ ಆಫರ್ ಘೋಷಿಸಿದೆ. ಓಲಾ S1 ಸ್ಕೂಟರ್ ಬೆಲೆ ಘೋಷಿಸಲಾಗಿದೆ. S1 ವೇರಿಯೆಂಟ್‌ನಲ್ಲಿ ಮೂರು ಬ್ಯಾಟರಿ ಪ್ಯಾಕ್ ವೇರಿಯೆಂಟ್‌ಗಳಾದ 2 , 3 ,ಹಾಗೂ 4 ಲಭ್ಯವಿದೆ. 4 ಬ್ಯಾಟರಿ ಪ್ಯಾಕ್ ಸ್ಕೂಟರ್ ಬೆಲೆ 2 ಬ್ಯಾಟರಿ ಪ್ಯಾಕ್ ಸ್ಕೂಟರ್ ಬಬೆಲೆ 69,999 ರೂಪಾಯಿ(ಎಕ್ಸ್ ಶೋ ರೂಂ ಬೆಲೆ) ಇನ್ನು 3 ಬ್ಯಾಟರಿ ಹೊಂದಿರುವ ಸ್ಕೂಟರ್ ಬೆಲೆ 84,999 ರೂಪಾಯಿ ಹಾಗೂ 99,999 ರೂಪಾಯಿ(ಎಕ್ಸ್ ಶೋ ರೂಂ) ಇದರ ಜೊತೆಗೆ ಓಲಾ S1 ಸ್ಕೂಟರ್ ವೇರಿಯೆಂಟ್ ಬೆಲೆ ಕೂಡ ಘೋಷಿಸಿದೆ. ಓಲಾ S1 ಸ್ಕೂಟರ್ 1,29,999 ರೂಪಾಯಿ(ಎಕ್ಸ್ ಶೋ ರೂಂ) ಬೆಲೆಯಲ್ಲಿ ಲಭ್ಯವಿದೆ. ಓಲಾ S1 ಏರ್ ಎಲೆಕ್ಟ್ರಿಕ್ ಸ್ಕೂಟರ್ 1,04,999 ರೂಪಾಯಿಗೆ ಲಭ್ಯವಿದೆ, ಇನ್ನು S1 + ಸ್ಕೂಟರ್ 84,999 ರೂಪಾಯಿ(ಎಕ್ಸ್ ಶೋ ರೂಂ) ಬೆಲೆಯಲ್ಲಿ ಲಭ್ಯವಿದೆ. ಓಲಾ S1, ಓಲಾ S1 ಸ್ಕೂಟರ್ ಹಾಗೂ S1 + ಸ್ಕೂಟರ್ ಆಕರ್ಷಕ ಬೆಲೆ ಜೊತೆಗೆ 8 ವರ್ಷ ಅಥವಾ 80,000 ಕಿ.ಮಿ ಬ್ಯಾಟರಿ ವಾರೆಂಟಿ ಉಚಿತವಾಗಿ ನೀಡಲಾಗುತ್ತಿದೆ. S1 ಸ್ಕೂಟರ್ (4 )ಒಂದು ಬಾರಿ ಚಾರ್ಜ್ ಮಾಡಿದರೆ 190 ಕಿ.ಮೀ ಮೈಲೇಜ್ ರೇಂಜ್ ನೀಡಲಿದೆ. ಇನ್ನು 3 ಹಾಗೂ 2 ಬ್ಯಾಟರಿ ವೇರಿಯೆಂಟ್ 143 ಕಿ.ಮಿ ಹಾಗೂ 95 ಕಿ.ಮಿ ಮೈಲೇಜ್ ನೀಡಲಿದೆ. ಓಲಾ ಸ್ಕೂಟರ್ ಇಕೋ, ನಾರ್ಮಲ್ ಹಾಗೂ ಸೋರ್ಟ್ ಮೂರು ಮೊಡ್‌ಗಳಲ್ಲಿ ರೈಡಿಂಗ್ ಅವಕಾಶವಿದೆ. 0-40 ಕಿ.ಮಿ ವೇಗವನ್ನು ಕೇವಲ 3.3 ಸೆಕೆಂಡ್‌ನಲ್ಲಿ ಪಡೆಯಲಿದೆ.