ಮೋಟಾರು ವಾಹನ ಕಾಯ್ದೆ: ಮೊಬೈಲ್ ಬಳಕೆಗೆ ಅವಕಾಶ ಆದರೆ ಷರತ್ತು ಅನ್ವಯ! ಮೋಟಾರು ವಾಹನ 1989 ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ನೂತನ ಕಾಯ್ದೆ ಅಕ್ಟೋಬರ್ 1, 2020ರಿಂದ ಜಾರಿಯಾಗಿದೆ. ತಿದ್ದುಪಡಿಯಲ್ಲಿಕೆಲ ಮಹತ್ವದ ಬದಲಾವಣೆ ಮಾಡಲಾಗಿದ್ದು, ನೂತನ ಕಾಯ್ದೆ ಕುರಿತು ವಾಹನ ಸವಾರರು ತಿಳಿಯುವುದು ಅಗತ್ಯವಾಗಿದೆ. ನವದೆಹಲಿ(ಅ.01):ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ಮಾಡಿದೆ. ತಿದ್ದುಪಡಿಯಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗಿದೆ. ಪ್ರಮುಖವಾಗಿ ಮೊಬೈಲ್ ಬಳಕೆ ವಿಚಾರ, ವಾಹನ ದಾಖಲೆ ಪತ್ರ ಸೇರಿದಂತೆ ಕೆಲ ಮಹತ್ವದ ಬದಲಾವಣೆಗಳನ್ನು ಮಾಡಿದೆ. ವಾಹನ ಸವಾರರಿಗೆ ಸಿಹಿ ಸುದ್ದಿ- ತೆರಿಗೆ ಇಳಿಸಿದ ರಾಜ್ಯ ಸರ್ಕಾರ!. ಮೋಟಾರು ವಾಹನ ಕಾಯ್ದೆ ತಿದ್ದುಪಡಿ 2020 ಎರಡು ಕಾರಣಗಳಿಗೆ ವಾಹನ ಚಾಲಕರು ಅಥವಾ ಮಾಲೀಕರು ಮೊಬೈಲ್ ಬಳಸಲು ಅವಕಾಶ ನೀಡಿದೆ. ಚಾಲನೆ ವೇಳೆ ನ್ಯಾವಿಗೇಶನ್ ಉದ್ದೇಶಕ್ಕಾಗಿ ಮಾತ್ರ ಮೊಬೈಲ್ ಬಳಸಬಹುದಾಗಿದೆ ಎಂದು ಸ್ಪಷ್ಟವಾಗಿ ಹೇಳಿದೆ.