390 ಬೈಕ್ ಖರೀದಿ ಸುಲಭ, ಭರ್ಜರಿ ಆಫರ್ ಘೋಷಣೆ! ಡ್ಯೂಕ್ ಬೈಕ್ ಖರೀದಿ ಬಹುತೇಕರ ಕನಸು. ಆದರೆ ದುಬಾರಿ ಬೆಲೆ ಕಾರಣ ಸಾಧ್ಯವಾಗುವುದಿಲ್ಲ. ಡೌನ್‌ಪೇಮೆಂಟ್ ಕಟ್ಟೋ ಹಣದಿಂದ ಇತರ ಯಾವುದಾದರ ಬೈಕ್ ಖರೀದಿಸಬಹುದು ಅನ್ನೋದು ಹಲವರ ಅಭಿಪ್ರಾಯ. ಇದೀಗ ತನ್ನ 390 ಅಡ್ವೆಂಚರ್ ಬೈಕ್ ಖರೀದಿಸುವ ಗ್ರಾಹಕರಿಗೆ ಭರ್ಜರಿ ಆಫರ್ ಘೋಷಿಸಿದೆ. ನವದೆಹಲಿ(ಜು.31):ಲಾಂಗ್ ರೈಡ್, ಲೇಹ್, ಲಡಾಖ್ ಬೈಕ್ ರೈಡಿಂಗ್ ಮಾಡಬೇಕು ಅನ್ನೋದು ಹಲವರ ಕನಸು. ಇದಕ್ಕಾಗಿ ಉತ್ತಮ ಅಡ್ವೆಂಚರ್ ಬೈಕ್ ಅವಶ್ಯಕತೆ ಇದೆ. ಆದರೆ ದುಬಾರಿ ಬೆಲೆ, ಡೌನ್‌ಪೇಮೆಂಟ್ ಸೇರಿದಂತೆ ಹಲವು ಕಾರಣಗಳಿಂದ ಅಡ್ವೆಂಚರ್ ಬೈಕ್ ಖರೀದಿ ಸುಲಭದ ಮಾತಾಗಿರಲಿಲ್ಲ. ಇದೀಗ ತನ್ನ 390 ಅಡ್ವೆಂಚರ್ ಬೈಕ್ ಖರೀದಿಸುವು ಗ್ರಾಹಕರಿಗೆ ಕಡಿಮೆ ಬಡ್ಡಿ, ಶೇಕಡಾ 95 ರಷ್ಟು ಆನ್ ರೋಡ್ ಫಂಡ್ ಸೇರಿದಂತೆ ಹಲವು ಆಫರ್ ಘೋಷಿಸಿದೆ. ಬಿಡುಗಡೆಯಾಗಲಿದೆ ಬಜಾಜ್- ಎಲೆಕ್ಟ್ರಿಕ್ ಮೊಪೆಡ್! ನೂತನ ಆಫರ್‌ನಡಿ 390 ಅಡ್ವೆಂಟರ್ ಬೈಕ್ ಪ್ರತಿ ತಿಂಗಳ ಕಂತು()6,999 ರೂಪಾಯಿ ಮಾತ್ರ. ಕಡಿಮೆ ದಾಖಲೆ ಪತ್ರಗಳ ಮೂಲಕ ಸುಲಭವಾಗಿ ಸಾಲ ಸೌಲಭ್ಯವೂ ಸಿಗಲಿದೆ. ಇದರ ಜೊತೆಗೆ ಎಕ್ಸ್‌ಚೇಂಜ್ ಆಫರ್ ಕೂಡ ನೀಡಲಾಗಿದೆ. BS6 ಕೆಟಿಎಂ 250 ಡ್ಯೂಕ್ ಬೈಕ್ ಬಿಡುಗಡೆ; ಪ್ರಮುಖ 5 ಬದಲಾವಣೆ! 390 ಅಡ್ವೆಂಚರ್ ಬೈಕ್ ಬೆಲೆ 2.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). 373cc ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 44PS ಪವರ್ ಹಾಗೂ 37Nm ಪೀಕ್ ಟಾರ್ಕ್ ಉತ್ಪಾದಿಸ ಬಲ್ಲ ಸಾಮರ್ಥ್ಯ ಹೊಂದಿದೆ. 6 ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ. ಬ್ರೇಕ್ ತಂತ್ರಜ್ಞಾನ ಹೊಂದಿದೆ. 390 ಅಡ್ವೆಂಚರ್ ಬೈಕ್ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಹಾಗೂ ಹೀರೋ ಎಕ್ಸ್ ಪಲ್ಸ್ ಬೈಕ್‌ಗೆ ಪ್ರತಿಸ್ಪರ್ಧಿಯಾಗಿದೆ.