ರೆನಾಲ್ಟ್ ಡಸ್ಟರ್ ಟರ್ಬೋ ಪೆಟ್ರೋಲ್ ಕಾರು ಶೀಘ್ರದಲ್ಲಿ ಬಿಡುಗಡೆ! 2020ರ ಆಟೋ ಎಕ್ಸ್ಪದಲ್ಲಿ ಪ್ರದರ್ಶನಕ್ಕಿಟ್ಟಿದ್ದ ರೆನಾಲ್ಟ್ ಡಸ್ಟರ್ 1.3 ಲೀಟರ್ ಟರ್ಬೋ ಪೆಟ್ರೋಲ್ ಕಾರು ಇದೀಗ ಬಿಡುಗಡೆಗೆ ಸಜ್ಜಾಗಿದೆ. ಕೆಲ ಬದಲಾವಣೆ, ಹೆಚ್ಚುವರಿ ಫೀಚರ್ಸ್‌ನೊಂದಿಗೆ ನೂತನ ಕಾರು ಬಿಡುಗಡೆಯಾಗುತ್ತಿದೆ. ಈ ಕಾರಿನ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ. ನವದೆಹಲಿ(ಜು.20): ಕೊರೋನಾ ವೈರಸ್ ಕಾರಣ ಹಲವು ಆಟೋಮೊಬೈಲ್ ಕಂಪನಿಗಳ ವಾಹನಗಳು ಕೊಂಚ ತಡವಾಗಿ ಬಿಡುಗಡೆಯಾಗುತ್ತಿದೆ. 2 ತಿಂಗಳ ಲಾಕ್‌ಡೌನ್ ಬಳಿಕ ಜೂನ್ ತಿಂಗಳಿನಿಂದ ವಾಹನಗಳು ಮಾರುಕಟ್ಟೆ ಪ್ರವೇಶಿಸುತ್ತಿದೆ. ಇದೀಗ ರೆನಾಲ್ಟ್ ಡಸ್ಟರ್ 1.3 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಕಾರು ಆಗಸ್ಟ್ ತಿಂಗಳ ಆರಂಭದಲ್ಲಿ ಭಾರತದಲ್ಲಿ ಬಿಡುಗಡೆಯಾಗುತ್ತಿದೆ. ನೂತನ ರೆನಾಲ್ಟ್ ಡಸ್ಟರ್ 1.3-ಲೀಟರ್ ಟರ್ಬೋ ಎಂಜಿನ್ ,4 ಸಿಲಿಂಡರ್, ಪೆಟ್ರೋಲ್ ಎಂಜಿನ್ ಹೊಂದಿದೆ. 153 ಪವರ್ ಹಾಗೂ 250 ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 6-ಸ್ಪೀಡ್ ಮಾನ್ಯುಯೆಲ್ ಗೇರ್‌ಬಾಕ್ಸ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹೊಂದಿದೆ. ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇಷ್ಟೇ ಅಲ್ಲ ಬಹುತೇಕ ಫೀಚರ್ಸ್‌ಗಳಲ್ಲಿ ಬದಲಾವಣೆ ಇಲ್ಲ. ಕ್ಯಾಬಿನ್, ಇಂಟೀರಿಯರ್ ಕಲರ್ ಕೋಡಿಂಗ್ ಮತ್ತಷ್ಟು ಆಕರ್ಷಕಗೊಳಿಸಲಾಗಿದೆ. 7 ಇಂಚಿನ್ ಟಚ್‌ ಸ್ಕ್ರೀನ್ ಇನ್ಫೋಟೈನ್ಮೆಂಟ್ ಡಿಸ್‌ಪ್ಲೇ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಹೊಂದಿದೆ. ಸುರಕ್ಷತಾ ಫೀಚರ್ಸ್‌ಗಳಾದ ಹಾಗೂ , ಡ್ರೈವರ್ ಹಾಗೂ ಪ್ಯಾಸೆಂಜರ್ ಏರ್‌ಬ್ಯಾಗ್, ರೇರ್ ಪಾರ್ಕಿಂಗ್ ಸೆನ್ಸಾರ್, ಸೀಟ್ ಬೆಲ್ಟ್ ಅಲರಾಂ, ಸ್ಪೀಡ್ ಅಲರ್ಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೊಗ್ರಾಂ ಹಾಗೂ ಹಿಲ್ ಅಸಿಸ್ಟ್ ಫೀಚರ್ಸ್ ಹೊಂದಿದೆ.