: ವಿಶ್ವದ ಕೆಲ ದೇಶಗಳ ಜನಸಂಖ್ಯೆಗಿಂತ ಹೆಚ್ಚು ಉದ್ಯೋಗಿಳು ಈ ಸಂಸ್ಥೆಗಳಲ್ಲಿದ್ದಾರೆ! ಜಗತ್ತಿನಲ್ಲಿ ಕೆಲವೇ ಕೆಲವು ಕಂಪನಿಗಳು ಹಾಗೂ ಸರ್ಕಾರಿ ಇಲಾಖೆಗಳಿವೆ. ಅವುಗಳಲ್ಲಿ ಲಕ್ಷ ಲಕ್ಷ ಉದ್ಯೋಗಿಗಳಿದ್ದಾರೆ. ಅದರಲ್ಲೂ ವಿಶ್ವದ ಕೆಲವು ದೇಶಗಳಾದ, ಗ್ರೆನೆಡಾ ಹಾಗೂ ಕೆರಿಬಿಯನ್‌ ದ್ವೀಪ ಸಮೂಹದಲ್ಲಿರುವ ದೇಶಗಳ ಜನಸಂಖ್ಯೆಗಿಂತ ಹೆಚ್ಚಿನ ಉದ್ಯೋಗಿಗಳು ಈ ಕಂಪನಿಗಳಲ್ಲಿದ್ದಾರೆ. ಅವುಗಳ ಲಿಸ್ಟ್‌ ಇಲ್ಲಿದೆ. ಜಗತ್ತಿನಲ್ಲಿ ಕೆಲವೇ ಕೆಲವು ಕಂಪನಿಗಳು ಹಾಗೂ ಸರ್ಕಾರಿ ಇಲಾಖೆಗಳಿವೆ. ಅವುಗಳಲ್ಲಿ ಲಕ್ಷ ಲಕ್ಷ ಉದ್ಯೋಗಿಗಳಿದ್ದಾರೆ. ಅದರಲ್ಲೂ ವಿಶ್ವದ ಕೆಲವು ದೇಶಗಳಾದ, ಗ್ರೆನೆಡಾ ಹಾಗೂ ಕೆರಿಬಿಯನ್‌ ದ್ವೀಪ ಸಮೂಹದಲ್ಲಿರುವ ದೇಶಗಳ ಜನಸಂಖ್ಯೆಗಿಂತ ಹೆಚ್ಚಿನ ಉದ್ಯೋಗಿಗಳು ಈ ಕಂಪನಿಗಳಲ್ಲಿದ್ದಾರೆ. ಅವುಗಳ ಲಿಸ್ಟ್‌ ಇಲ್ಲಿದೆ. ಅಮೆರಿಕ ರಕ್ಷಣಾ ಇಲಾಖೆ:ವಿಶ್ವದ ಅತಿದೊಡ್ಡ ಮಿಲಿಟರಿ ಶಕ್ತಿಯಾಗಿರುವ ಅಮೆರಿಕದ ರಕ್ಷಣಾ ಇಲಾಖೆ ವಿಶ್ವದ ಅತೀದೊಡ್ಡ ಉದ್ಯೋಗದಾತರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಅಮೆರಿಕ ರಕ್ಷಣಾ ಇಲಾಖೆಯಲ್ಲಿ 29.10 ಲಕ್ಷ ಮಂದಿ ಉದ್ಯೋಗಿಗಳಿದ್ದಾರೆ. ಪೀಪಲ್ಸ್‌ ಲಿಬರೇಷನ್‌ ಆರ್ಮಿ:ಚೀನಾದ ಪೀಪಲ್ಸ್‌ ಲಿಬರೇಷನ್‌ ಆರ್ಮಿ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಚೀನಾದ ಪ್ರಮುಖ ಸೈನಿಕ ದಳ. 25.50 ಲಕ್ಷ ಮಂದಿ ಉದ್ಯೋಗಿಗಳು ಇದರಲ್ಲಿದ್ದಾರೆ. ವಾಲ್‌ಮಾರ್ಟ್‌:ಸ್ಯಾಮ್‌ ವಾಲ್ಟನ್‌ ಹಾಗೂ ಬುಡ್‌ ವ್ಯಾಲ್ಟನ್‌ರಿಂದ 1962ರಲ್ಲಿ ಆರಂಭವಾದ ಕಂಪನಿ ವಾಲ್‌ಮಾರ್ಟ್‌. ಅಮೆರಿಕದ ಈ ಕಂಪನಿ 23 ಲಕ್ಷ ನೌಕರರನ್ನು ಹೊಂದಿದೆ. ನ್ಯಾಷನಲ್‌ ಹೆಲ್ತ್‌ ಸರ್ವೀಸ್‌:ಇಂಗ್ಲೆಂಡ್‌ನಲ್ಲಿ ಸಾರ್ವಜನಿಕ ಫಂಡ್‌ನಲ್ಲಿ ನಡೆಯತ್ತಿರುವ ಕಂಪನಿ ನ್ಯಾಷನಲ್‌ ಹೆಲ್ತ್‌ ಸರ್ವೀಸ್‌. ಇದು 13.80 ಲಕ್ಷ ನೌಕರರನ್ನು ಹೊಂದಿದೆ. ಭಾರತೀಯ ರೈಲ್ವೆ:ವಿಶ್ವದ ಅತಿದೊಡ್ಡ ಉದ್ಯೋಗದಾತ ಕಂಪನಿಗಳಲ್ಲಿ ಭಾರತದ ಇನ್ನೊಂದು ಕಂಪನಿ ಇದ್ದರೆ ಅದು ಭಾರತೀಯ ರೈಲ್ವೆ. 12.12 ಲಕ್ಷ ನೌಕರರನ್ನು ಭಾರತೀಯ ರೈಲ್ವೆ ಹೊಂದಿದೆ.