ಬೆಂಗಳೂರಿನಲ್ಲಿ ಗಗನಸಖಿ ಹುದ್ದೆಗಳಿಗೆ ಅರ್ಜಿ ಆಹ್ವಾನ; ನಾಳೆ ಸಂದರ್ಶನ: ವಿವರ ಹೀಗಿದೆ ನೋಡಿ.. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲೇ ಪೋಸ್ಟಿಂಗ್ ಸಿಗುತ್ತದೆ. ಇನ್ನು, ಈ ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ಪ್ರಮುಖ ಮಾಹಿತಿಗಳನ್ನು ತಿಳಿದುಕೊಳ್ಳಿ. 2023: ನಿಮಗೆ ಗಗನಸಖಿ ಆಗುವ ಇಚ್ಛೆ ಇದ್ಯಾ..? ಹಾಗಾದ್ರೆ, ನಿಮಗಿಲ್ಲಿದೆ ಸದವಕಾಶ. ಏರ್​ ಇಂಡಿಯಾ ಲಿಮಿಟೆಡ್‌ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಅನೇಕ ಕ್ಯಾಬಿನ್ ಕ್ರ್ಯೂ ಅಥವಾ ಗಗನಸಖಿ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಆಗಸ್ಟ್ 11, 2023 ಅಂದರೆ ನಾಳೆ ಬೆಂಗಳೂರಿನಲ್ಲಿ ಸಂದರ್ಶನ ನಡೆಯಲಿದೆ. ಈ ಹಿನ್ನೆಲೆ ವಿಮಾನಯಾನ ಕ್ಷೇತ್ರದಲ್ಲಿ ಕೆಲಸ ಮಾಡಲು ಇಚ್ಛಿಸುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದ್ದು, ಆಸಕ್ತರು ಸಂದರ್ಶನದಲ್ಲಿ ಭಾಗಿಯಾಗಬಹುದು. ಇನ್ನು, ಈ ಹುದ್ದೆ ಮಹಿಳೆಯರಿಗೆ ಮಾತ್ರ ಲಭ್ಯವಿದ್ದು, ಪುರುಷರಿಗೆ ಈ ಬಾರಿ ಅರ್ಜಿ ಸಲ್ಲಿಸಲು ಅಥವಾ ಸಂದರ್ಶನದಲ್ಲಿ ಭಾಗಿಯಾಗಲು ಅವಕಾಶವಿಲ್ಲ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲೇ ಪೋಸ್ಟಿಂಗ್ ಸಿಗುತ್ತದೆ. ಇನ್ನು, ಈ ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ಪ್ರಮುಖ ಮಾಹಿತಿಗಳನ್ನು ಈ ಲೇಖನದಲ್ಲಿ ನೀಡಲಾಗಿದ್ದು, ಈ ಬಗ್ಗೆ ತಿಳಿದುಕೊಳ್ಳಿ. ಇದನ್ನು ಓದಿ:ಅತ್ಯಾಚಾರಿಗಳಿಗೆ ಸರ್ಕಾರಿ ಉದ್ಯೋಗವಿಲ್ಲ: ಕಾಂಗ್ರೆಸ್‌ ಸರ್ಕಾರದಿಂದ ‘ಜಾಬ್‌ ಬುಲ್ಡೋಜರ್’ ಅಸ್ತ್ರ’! ಹುದ್ದೆ: ಕ್ಯಾಬಿನ್ ಸಿಬ್ಬಂದಿ (ಮಹಿಳೆ)ಸ್ಥಳ: ಬೆಂಗಳೂರುಪ್ರಕ್ರಿಯೆಯ ದಿನಾಂಕ: 11ನೇ ಆಗಸ್ಟ್, 2023ನೇಮಕಾತಿ ವಿಧಾನ: ವಾಕ್-ಇನ್ ಇಂಟರ್‌ವ್ಯೂ ನಾಳೆ ಅಂದರೆ ಆಗಸ್ಟ್‌ 11, 2023 ರಂದು ಬೆಂಗಳೂರಿನಲ್ಲಿ ಬೆಳಗ್ಗೆ 9:30 ರಿಂದ ಮಧ್ಯಾಹ್ನ 12:30 ರವರೆಗೆ ಸಂದರ್ಶನ ನಡೆಯಲಿದೆ. ಹಾಗೂ, ಈ ಸಂದರ್ಶನ ಎಲ್ಲಿ ನಡೆಯುತ್ತೆ ಅಂತೀರಾ.. ಇದನ್ನೂ ಓದಿ:ಕಾರ್ಪೊರೇಟ್‌ ಲೈಫ್‌ ಬೇಕಾ ಗುರು? ಐಟಿ ಉದ್ಯೋಗಕ್ಕಿಂತ ಕ್ಯಾಬ್‌ ಚಾಲಕನಾಗೇ ಹೆಚ್ಚು ದುಡೀತಾರೆ ಈ ಟೆಕ್ಕಿ! ಸಂದರ್ಶನದ ಸ್ಥಳ:ಫಾರ್ಚೂನ್ ಸೆಲೆಕ್ಟ್ ಕಾಸ್ಮೋಸ್‌,# 49, ಕನ್ನಿಂಗ್‌ಹ್ಯಾಮ್‌ ಕ್ರೆಸೆಂಟ್ ರಸ್ತೆ,ಫೋರ್ಟಿಸ್ ಆಸ್ಪತ್ರೆಯ ಹಿಂದೆ,ಬೆಂಗಳೂರು 560052. ಅರ್ಹತೆಯ ಮಾನದಂಡಭಾರತೀಯ ಪ್ರಜೆಯಾಗಿರಬೇಕು, ಭಾರತೀಯ ಪಾಸ್‌ಪೋರ್ಟ್, ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಅನ್ನು ಹೊಂದಿರಬೇಕು.ಫ್ರೆಶರ್‌ಗಳಿಗೆ 18-27 ವರ್ಷ ವಯಸ್ಸಿನ ನಡುವೆ ಮತ್ತು ಅನುಭವಿ ಸಿಬ್ಬಂದಿಗೆ 35 ವರ್ಷ ದವರೆಗೆ.ಕನಿಷ್ಠ ಶೈಕ್ಷಣಿಕ ಅರ್ಹತೆ: ಕನಿಷ್ಠ 50% ಅಂಕಗಳೊಂದಿಗೆ ಮಾನ್ಯತೆ ಪಡೆದ ಮಂಡಳಿ / ವಿಶ್ವವಿದ್ಯಾಲಯದಿಂದ 12 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.ಅಗತ್ಯವಿರುವ ಕನಿಷ್ಠ ಎತ್ತರ: ಹೆಣ್ಣು - 155 ಸೆಂ.ಮೀ.ತೂಕ: ಎತ್ತರಕ್ಕೆ ಅನುಗುಣವಾಗಿ. ಶ್ರೇಣಿ: ಮಹಿಳಾ ಅಭ್ಯರ್ಥಿಗಳು - 18 ರಿಂದ 22.ಸಮವಸ್ತ್ರ ಧರಿಬೇಕು, ಯಾವುದೇ ಗೋಚರಿಸುವ ಟ್ಯಾಟೂ ಇರಬಾರದುಇಂಗ್ಲಿಷ್ ಮತ್ತು ಹಿಂದಿಯಲ್ಲಿ ನಿರರ್ಗಳವಾಗಿ ಮಾತನಾಡಬೇಕುದೃಷ್ಟಿ 6/6. ಇದನ್ನೂ ಓದಿ:ಮೂನ್‌ಲೈಟಿಂಗ್ ಮಾಡೋರಿಗೆ ಶಾಕಿಂಗ್ ನ್ಯೂಸ್‌: ಹೆಚ್ಚುವರಿ ಆದಾಯ ಘೋಷಿಸದ ಸಾವಿರಾರು ಜನರಿಗೆ ಐಟಿ ನೋಟಿಸ್‌ ಸಂದರ್ಶನ ದಿನ ಹೇಗಿರಬೇಕು?ಉಡುಪು:ಪಾಶ್ಚಾತ್ಯ ಫಾರ್ಮಲ್ಸ್ಸಂದರ್ಶನದ ದಿನದಂದು ದಯವಿಟ್ಟು ನಿಮ್ಮ ಅಪ್‌ಡೇಟ್ ಅಗಿರುವ ರೆಸ್ಯೂಮ್ ಅನ್ನು ತೆಗೆದುಕೊಂಡು ಹೋಗಿಅನುಭವಿ ಅಭ್ಯರ್ಥಿಗಳು ತಮ್ಮ ಎಸ್‌ಇಪಿ ಕಾರ್ಡ್‌ಗಳ ನಕಲನ್ನು ತೆಗೆದುಕೊಂಡು ಹೋಗಿ ಆಯ್ಕೆ ಪ್ರಕ್ರಿಯೆ: ವಾಕ್-ಇನ್-ಇಂಟರ್‌ವ್ಯೂ ಇದನ್ನೂ ಓದಿ:ಫುಲ್‌ ಟೈಟಾಗಿ ಮಧ್ಯರಾತ್ರಿ ಬಾಸ್‌ಗೆ ಮೆಸೇಜ್‌ ಮಾಡಿದ ಉದ್ಯೋಗಿ: ವೈರಲ್‌ ಆಯ್ತು ಪೋಸ್ಟ್‌! ಹುದ್ದೆಯ ಕುರಿತಾದ ಅಧಿಕೃತ ನೋಟಿಫಿಕೇಶನ್‌ಗಾಗಿ ://..//---%28Female%29----11th-%2C-2023-/17443044/ ಅನ್ನು ಕ್ಲಿಕ್ ಮಾಡಿ. ಹಾಗೂ, ಹುದ್ದೆಗಾಗಿ ಅರ್ಜಿ ಸಲ್ಲಿಸಲು ://career44../?= ಲಿಂಕ್ ಕ್ಲಿಕ್‌ ಮಾಡಿ.. ಇದನ್ನೂ ಓದಿ: : ಟೀ ಮಾರಿದ ಯುವಕ ಮಂಗೇಶ್ ಖಿಲಾರಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸ್‌; ಹೋರಾಟದ ಹಾದಿ ಹೀಗಿದೆ..