ಆನ್​ಲೈನ್​ ಮೀಟಿಂಗ್: ಸಿಕ್ಕಿಬಿದ್ದ ' -2'​ ನೋಡುತ್ತಿದ್ದ ಮ್ಯಾನೇಜರ್ ! ಕಚೇರಿಯೊಂದರ ವರ್ಚುವಲ್​ ಮೀಟಿಂಗ್​ ವೇಳೆ ಮ್ಯಾನೇಜರ್​ ತಪ್ಪಾಗಿ ಲಸ್ಟ್​ ಸ್ಟೋರೀಸ್​-2 ಎಲ್ಲರಿಗೂ ಕಾಣಿಸುವಂತೆ ಮಾಡಿದ ಘಟನೆ ನಡೆದಿದೆ. ಕಚೇರಿಗಳಲ್ಲಿ ಉದ್ಯೋಗಿಗಳ ಮಟ್ಟದ ವರ್ಚುವಲ್ ಮೀಟಿಂಗ್​ ( ) ಕೊರೋನಾದಿಂದಾಗಿ ಹೆಚ್ಚಳವಾಗಿದೆ. ಕೊರೋನಾಗಿಂತ ಮೊದಲು ಕೂಡ ಇಂಥ ಆನ್​ಲೈನ್​ ಸಭೆಗಳು ನಡೆಯುತ್ತಿದ್ದರೂ ಅದು ತೀರಾ ವಿರಳವಾಗಿತ್ತು. ಆದರೆ ಭಾರತ ಸೇರಿದಂತೆ ವಿಶ್ವಾದ್ಯಂತ ಕೊರೋನಾದ ಸಮಯದಲ್ಲಿ ಬಹುತೇಕ ಸಂಘ-ಸಂಸ್ಥೆಗಳು, ಕಂಪೆನಿಗಳು, ಕಚೇರಿಗಳು ಎಲ್ಲವೂ ವರ್ಚುವಲ್​ ಮೀಟಿಂಗ್​ಗಳ ಮೊರೆ ಹೋಗಿವೆ. ಕೊರೋನಾ ಸಮಯದಲ್ಲಿ ಇಂಥ ಮೀಟಿಂಗ್​ಗಳು ಸಕತ್​ ಸುದ್ದಿ ಮಾಡುತ್ತಿತ್ತು. ಕೊರೋನಾದ ಆತಂಕದಿಂದ ತತ್ತರಿಸಿ ಹೋಗಿದ್ದ ಜನರಿಗೆ ಕೆಲವೊಂದು ಮೀಟಿಂಗ್​ಗಳಲ್ಲಿ ನಡೆಯುತ್ತಿದ್ದ ಚಿತ್ರ-ವಿಚಿತ್ರ ಘಟನೆಗಳು ನಗುವಿನ ಅಲೆಯನ್ನು ತರಿಸಿದ್ದಂತೂ ನಿಜ. ಕೆಲವು ಮೀಟಿಂಗ್​ಗಳಲ್ಲಿ ಬಟ್ಟೆ ಧರಿಸದೇ ಉದ್ಯೋಗಿಗಳು ಭಾಗವಹಿಸಿದ್ದರೆ, ಇನ್ನು ಕೆಲವು ಮೀಟಿಂಗ್​ಗಳಲ್ಲಿ ಕಂಪ್ಯೂಟರ್​ ಹಿಂದುಗಳು ದಂಪತಿಯ ರಸಮಯ ದೃಶ್ಯಗಳೂ ನಡೆಯುತ್ತಿದ್ದು ಅದನ್ನು ಮೀಟಿಂಗ್​ನಲ್ಲಿ ಇದ್ದವರು ಲೈವ್​ () ಆಗಿಯೇ ವೀಕ್ಷಿಸಿದ್ದೂ ಆಗಿದೆ. ಇನ್ನು ಕೆಲವು ಕಡೆ ಗಂಡನೋ, ಪತ್ನಿಯೋ ಕಂಪ್ಯೂಟರ್​ ಆನ್​ ಮಾಡಿಕೊಂಡು ಮೀಟಿಂಗ್​ನಲ್ಲಿ ಪಾಲ್ಗೊಂಡಿದ್ದರೆ, ಅವರ ಸಂಗಾತಿ ಗೊತ್ತಿಲ್ಲದೇ ಸ್ನಾನ ಮಾಡಿಕೊಂಡು ತುಂಡುಡುಗೆಯಲ್ಲಿ ಕಂಪ್ಯೂಟರ್​ ಹಿಂಬದಿಯಿಂದ ಹಾದು ಹೋಗಿರುವುದೂ ನಡೆದಿದೆ. ಇನ್ನು ಕೆಲವು ಕಡೆಗಳಲ್ಲಿ ಶಾಲಾ ಮಕ್ಕಳಿಗೆ ಆನ್​ಲೈನ್​ ತರಗತಿ ನಡೆಯುತ್ತಿರುವಾಗಲೇ ಕೆಲವು ಕಿಡಿಗೇಡಿಗಳು ಅಶ್ಲೀಲ ವಿಡಿಯೋಗಳನ್ನು ಹರಿಬಿಟ್ಟಿರುವುದೂ ನಡೆದಿದೆ. ಆದ್ದರಿಂದ ವರ್ಚುವಲ್​ ಮೀಟಿಂಗ್​, ಸಭೆಗಳು ತಂದೊಡ್ಡುತ್ತಿರುವ ಸಮಸ್ಯೆಗಳು ಒಂದಲ್ಲ, ಎರಡಲ್ಲ. ಆದರೆ ಈಗ ಅಂಥದ್ದೇ ಒಂದು ಘಟನೆ ನಡೆದಿದೆ. ಆದರೆ ಇಲ್ಲಿ ಕಚೇರಿಯೊಂದರ ವರ್ಚುವಲ್​ ಸಭೆಯಲ್ಲಿ ಮ್ಯಾನೇಜರ್​ ಒಬ್ಬರು ಗುಟ್ಟಾಗಿ ಲಸ್ಟ್​ ಸ್ಟೋರೀಸ್​ ನೋಡುತ್ತಿದ್ದು, ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾರೆ. ಅಷ್ಟಕ್ಕೂ ಈ ಉದ್ಯೋಗಿಯೊಬ್ಬರೇ ಅದನ್ನು ನೋಡಿದ್ದರೆ ಪರವಾಗಿರಲಿಲ್ಲ. ಬದಲಿಗೆ ಮೀಟಿಂಗ್​ ಸಮಯದಲ್ಲಿ ಯಾವುದೋ ಬಟನ್​ ಒತ್ತಲು ಹೋಗಿ ಇನ್ನಾವುದನ್ನೋ ಒತ್ತಿದ ಕಾರಣ, ಅವರ ಕಂಪ್ಯೂಟರ್​ನಲ್ಲಿ ಲಸ್ಟ್​ ಸ್ಟೋರೀಸ್​ 2 (' -2) ಅನ್ನು ಎಲ್ಲರೂ ವೀಕ್ಷಿಸುವಂತಾಯಿತು! ಗೂಗಲ್​ ಮೀಟ್​ ( ) ಮೂಲಕ ಕಚೇರಿಯ ಆನ್​ಲೈನ್​ ಮೀಟಿಂಗ್​ ನಡೆಯುತ್ತಿರುವ ವೇಳೆ ಈ ಘಟನೆ ನಡೆದಿದೆ. : ಕಚೇರಿಯ ಆನ್ಲೈನ್ ಮೀಟಿಂಗ್ ವೇಳೆ ಪಾಪಪ್ ಆಯ್ತು ಅಂಡರ್‌ವೇರ್ ಸೈಟ್ಈ ಬಗಗೆ @aneetta_joby_ ಹ್ಯಾಂಡಲ್ ಹೊಂದಿರುವ ಬಳಕೆದಾರರು ಇದರ ವಿಡಿಯೋ ಶೇರ್​ ಮಾಡಿದ್ದಾರೆ. ಸೆಷನ್​ ವೇಳೆ ಲಸ್ಟ್​ ಸ್ಟೋರೀಸ್​-2 ಪ್ಲೇ ಆಗುತ್ತಿರುವ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ. ಮೀಟಿಂಗ್​ ಸಂದರ್ಭದಲ್ಲಿ ಎಲ್ಲರಿಗೂ ಈ ಚಿತ್ರ ನೋಡುವ ಅವಕಾಶ ದೊರಕಿತು ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ. 'ನನ್ನ ಮ್ಯಾನೇಜರ್ ಅವರು ತಾವು ನೋಡುತ್ತಿರುವ ಈ ಚಿತ್ರವನ್ನು ಕಂಪ್ಯೂಟರ್​ ಪರದೆಯ ಮೇಲೆ ಹಂಚಿಕೊಂಡಿದ್ದಾರೆ. ಎಲ್ಲರೂ ಈಗ ಈ ಚಿತ್ರವನ್ನು ನೋಡಿದೆವು' ಎಂದು ಅವರು ಹೇಳಿದ್ದಾರೆ. ಈ ಸುದ್ದಿ ಕಾಳ್ಗಿಚ್ಚಿನಂತೆ ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿದೆ. ಥಹರೇವಾರಿ ಪ್ರತಿಕ್ರಿಯೆಗಳು ಬರುತ್ತಿವೆ. ಮ್ಯಾನೇಜರ್​ ಈ ರೀತಿ ಮಾಡಿದ್ದು ಸರಿಯಲ್ಲ ಎಂದು ಹಲವರು ಹೇಳುತ್ತಿದ್ದರೆ, ಇಂಥ ಸುದ್ದಿಗಳನ್ನು ಬಹಿರಂಗಗೊಳಿಸಿದ್ದು ಸರಿಯಲ್ಲ ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ. ಅಂದಹಾಗೆ, ಬಹು ನಿರೀಕ್ಷಿತ ಲಸ್ಟ್ ಸ್ಟೋರೀಸ್ 2' ( -2) ಇದೇ 29ರಂದು ನೆಟ್​ಫ್ಲಿಕ್ಸನ ಇಂಡಿಯಾದಲ್ಲಿ ಪ್ರೀಮಿಯರ್ ಆಗಲಿದೆ. ಲೈಂಗಿಕತೆ ಬಗೆಗಿನ ಬಣ್ಣದ ಕಥೆಗಳು ಇದರಲ್ಲಿವೆ. ಈ ಎರಡನೇ ಭಾಗವು ಹೊಸ ನಿರ್ದೇಶಕರಾಗಿರುವ ಅಮಿತ್ ರವೀಂದ್ರನಾಥ್ ಶರ್ಮಾ, ಕೊಂಕಣ ಸೇನ್ ಶರ್ಮಾ, ಆರ್. ಬಾಲ್ಕಿ ಮತ್ತು ಸುಜೋಯ್ ಘೋಷ್ ಮತ್ತು ನಟರಲ್ಲಿ ಅಮೃತಾ ಶುಭಾಷ್, ಅಂಗದ್ ಬೇಡಿ, ಕಾಜೋಲ್, ಕುಮುದ್ ಮಿಶ್ರಾ, ಮೃಣಾಲ್ ಠಾಕೂರ್, ನೀನಾ ಗುಪ್ತಾ ಅವರನ್ನು ಒಳಗೊಂಡಿದ್ದರೆ, ದೊಡ್ಡ ತಾರಾ ಬಳಗವೇ ಇದೆ. ತಾರಾ ಬಳಗದಲ್ಲಿ ಕಾಜೋಲ್​, ತಮನ್ನಾ ಭಾಟಿಯಾ, ತಿಲ್ಲೋಟಮಾ ಶೋಮ್ ಮತ್ತು ವಿಜಯ್ ವರ್ಮಾ ಮುಂತಾದವರು ಇದ್ದಾರೆ. ಬೋಲ್ಡ್​ ಕಥಾಹಂದರ ಹೊಂದಿರುವ ಈ ಸಿನಿಮಾ ಬಗ್ಗೆ ಸಿನಿಪ್ರಿಯರು ಕುತೂಹಲ ಇಟ್ಟುಕೊಂಡಿದ್ದಾರೆ. : ಬೆಸ್ಟ್‌ ಇಂಪ್ರೆಶನ್ ಬರುವಂತೆ ಮಾಡುವುದು ಹೇಗೆ ?