2022: ವಿವಿಧ ಹುದ್ದೆಗಳಿಗೆ ತೃತೀಯ ಲಿಂಗಿಗಳಿಗೂ ಸೇರಿ ನೇಮಕಾತಿ ರಾಜ್ಯ ಪೊಲೀಸ್​ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ವಿಭಾಗಕ್ಕೆ ಪೊಲೀಸ್​ ಕಾನ್ಸ್​ಟೇಬಲ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಅಧಿಸೂಚನೆ ಸಂಖ್ಯೆ 6 ರಲ್ಲಿ 1,137 ಹುದ್ದೆಗಳು, ಅಧಿಸೂಚನೆ ಸಂಖ್ಯೆ 7ರಲ್ಲಿ 3064 ಹುದ್ದೆಗಳು, ಅಧಿಸೂಚನೆ ಸಂಖ್ಯೆ 9ರಲ್ಲಿ ಕಲ್ಯಾಣ ಕರ್ನಾಟಕಕ್ಕೆ 420 ಹುದ್ದೆಗಳಿವೆ. ಕರ್ನಾಟಕ ರಾಜ್ಯ ಪೊಲೀಸ್​ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ವಿಭಾಗಕ್ಕೆ ಪೊಲೀಸ್​ ಕಾನ್ಸ್​ಟೇಬಲ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಅಧಿಸೂಚನೆ ಸಂಖ್ಯೆ 6 ರ ಪ್ರಕಾರ ಪೊಲೀಸ್‌ ಕಾನ್ಸ್ಟೇಬಲ್‌ ಸಿವಿಲ್‌, ಸೇವಾನಿರತ ಮತ್ತು ಬ್ಯಾಕ್‌ಲಾಗ್‌ ಸೇರಿದಂತೆ 1,137 ಹುದ್ದೆಗಳ ನೇರ ನೇಮಕಕ್ಕೆ ಪುರುಷ, ಮಹಿಳೆ ಮತ್ತು ತೃತೀಯ ಲಿಂಗಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ನವೆಂಬರ್​ 21 ಕೊನೆಯ ದಿನಾಗಿದೆ.ಒಟ್ಟು 1,137ಹುದ್ದೆಗಳ ವಿವರ ಇಂತಿದೆಪೊಲೀಸ್​ ಕಾನ್ಸ್​ಟೇಬಲ್ ಸಿವಿಲ್ ಹುದ್ದೆಗಳು:ಪುರುಷ -683 ಹುದ್ದೆಗಳುಮಹಿಳೆ-229 ಹುದ್ದೆಗಳುಪುರುಷ ತೃತೀಯ ಲಿಂಗಿ -22 ಹುದ್ದೆಗಳುಮಹಿಳಾ ತೃತೀಯ ಲಿಂಗಿ - 10 ಹುದ್ದೆಗಳುಸೇವಾನಿರತ ಪೊಲೀಸ್​ ಕಾನ್ಸ್​ಟೇಬಲ್ ಸಿವಿಲ್ ಹುದ್ದೆಗಳು:ಪುರುಷ - 134 ಹುದ್ದೆಗಳುಮಹಿಳೆ- 57 ಹುದ್ದೆಗಳುಪುರುಷ ತೃತೀಯ ಲಿಂಗಿ - 1 ಹುದ್ದೆಮಹಿಳಾ ತೃತೀಯ ಲಿಂಗಿ - 1 ಹುದ್ದೆ ನೇಮಕಾತಿ ಅಧಿಸೂಚನೆ ಸಂಖ್ಯೆ 7 ರಪ್ರಕಾರ ಸಶಸ್ತ ಪೊಲೀಸ್ ಕಾನ್ಸ್​ಟೇಬಲ್ (ಸಿಎಆರ್/ಡಿಎಆರ್) ಸಾಮಾನ್ಯ ಪುರುಷ ಮತ್ತು ಪುರುಷ ತೃತೀಯ ಲಿಂಗಿಗಳಿಗೆ ಒಟ್ಟು 3064 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ 31 ಕೊನೆಯ ದಿನವಾಗಿದೆ.ನೇಮಕಾತಿ ಅಧಿಸೂಚನೆ ಸಂಖ್ಯೆ ಸಂಖ್ಯೆ 9 ರಪ್ರಕಾರ ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ಸಶಸ್ತ ಪೊಲೀಸ್ ಕಾನ್ಸ್​ಟೇಬಲ್ (ಸಿಎಆರ್/ಡಿಎಆರ್) ಸಾಮಾನ್ಯ ಪುರುಷ ಮತ್ತು ಪುರುಷ ತೃತೀಯ ಲಿಂಗಿಗಳಿಗೆ ಒಟ್ಟು 420 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ 31 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ ತಾಣ ://-./ ಅಥವಾ ://.../ ಅನ್ನು ಭೇಟಿ ನೀಡಿ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬಹುದು. ಶೈಕ್ಷಣಿಕ ವಿದ್ಯಾರ್ಹತೆ:ನೇಮಕಾತಿ ಅಧಿಸೂಚನೆಯ ಪ್ರಕಾರ, ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಪಿಯುಸಿ ಉತ್ತೀರ್ಣರಾಗಿರಬೇಕು. ವಯೋಮಿತಿ:ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿನ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳ ವಯಸ್ಸು 25 ವರ್ಷಗಳು ಮೀರಿರಬಾರದು. ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 2 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ. ಬುಡಕಟ್ಟು ಜನಾಂಗದಲ್ಲಿ ವಾಸಿಸುತ್ತಿರುವ ಅಭ್ಯರ್ಥಿಗಳಾಗಿದ್ದರೆ 5 ವರ್ಷಗಳ ವಯೋಮಿತಿ ಸಡಿಲಿಕೆ ಇದೆ. 2022; ಕರ್ನಾಟಕ ವಿಭಾಗದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಅರ್ಜಿ ಶುಲ್ಕ:ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡ ಪ್ರವರ್ಗ 1 ಅಭ್ಯರ್ಥಿಗಳು 200 ರೂ ಅರ್ಜಿ ಶುಲ್ಕ ಪಾತಿಸಬೇಕು ಮತ್ತು ಸಾಮಾನ್ಯ, ಪ್ರವರ್ಗ -2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳು 400 ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ಅಥವಾ ಚಲನ್ ಮೂಲಕ ಪಾವತಿ ಮಾಡಬೇಕು. 2022: ಖಾಲಿ ಇರುವ 292 ಬೋಧಕ ಹುದ್ದೆಗಳಿಗೆ ಅರ್ಜಿ ಆಹ್ವಾನ ಆಯ್ಕೆ ಪ್ರಕ್ರಿಯೆ:ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿನ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಸಹಿಷ್ಣುತೆ ಪರೀಕ್ಷೆ, ದೈಹಿಕ ಗುಣಮಟ್ಟದ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ.