2022; ಬರೋಬ್ಬರಿ 5 ಸಾವಿರಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ ಭಾರತೀಯ ಸ್ಟೇಟ್ ಬ್ಯಾಂಕ್ ಕ್ಲೆರಿಕಲ್ ಕೇಡರ್‌ನಲ್ಲಿ ಜೂನಿಯರ್ ಅಸೋಸಿಯೇಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. 5 ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದು , ಸೆಪ್ಟೆಂಬರ್ 27 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ನವದೆಹಲಿ (ಸೆ.13):ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕ್ಲೆರಿಕಲ್ ಕೇಡರ್‌ನಲ್ಲಿ ಜೂನಿಯರ್ ಅಸೋಸಿಯೇಟ್ (ಗ್ರಾಹಕ ಬೆಂಬಲ ಮತ್ತು ಮಾರಾಟ) ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು 5000 ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 27, 2022 ರವರೆಗೆ ಅಧಿಕೃತ ವೆಬ್‌ಸೈಟ್ .. ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಸೂಚನೆಯಲ್ಲಿ ತಿಳಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ವಯೋಮಿತಿ, ಶೈಕ್ಷಣಿಕ ವಿದ್ಯಾರ್ಹತೆ, ಅರ್ಜಿ ಶುಲ್ಕ ,ಆಯ್ಕೆ ಪ್ರಕ್ರಿಯೆ ಮತ್ತು ರಾಜ್ಯವಾರು ಹುದ್ದೆಗಳು ಈ ಎಲ್ಲಾ ಬಗ್ಗೆ ತಿಳಿದುಕೊಳ್ಳಲು ಮಾಹಿತಿ ಈ ಕೆಳಗಿನಂತಿದೆ. ವಯೋಮಿತಿ:ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಆಗಸ್ಟ್ 1, 2022 ರಂತೆ 20 ರಿಂದ 28 ವರ್ಷ ವಯಸ್ಸಿನೊಳಗಿರಬೇಕು. ಶೈಕ್ಷಣಿಕ ವಿದ್ಯಾರ್ಹತೆ:ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಸಮಾನ ಅರ್ಹತೆ. ಇಂಟಿಗ್ರೇಟೆಡ್ ಡ್ಯುಯಲ್ ಡಿಗ್ರಿ ಪ್ರಮಾಣಪತ್ರವನ್ನು ಹೊಂದಿರಬೇಕು. ಅರ್ಜಿ ಶುಲ್ಕ:ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಸಾಮಾನ್ಯ ಮತ್ತು ವರ್ಗಗಳಿಗೆ ಸೇರಿದ ಅಭ್ಯರ್ಥಿಗಳು ರೂ 750 ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಆದರೆ / / / ವರ್ಗಗಳಿಗೆ ಅರ್ಜಿ ಶುಲ್ಕವನ್ನು ಪಾವತಿಸುವುದರಿಂದ ವಿನಾಯಿತಿ ನೀಡಲಾಗಿದೆ. ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ನ್ಯೂಸ್: ಶಿಕ್ಷಕ, ಪೊಲೀಸ್ ನೇಮಕಾತಿಗೆ ಅಧಿಸೂಚನೆ ಪ್ರಕಟ ಆಯ್ಕೆ ಪ್ರಕ್ರಿಯೆ:ಅಭ್ಯರ್ಥಿಗಳನ್ನು ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳು ಮತ್ತು ನಿರ್ದಿಷ್ಟಪಡಿಸಿದ ಸ್ಥಳೀಯ ಭಾಷೆಗಳ ಪರೀಕ್ಷೆಗಳನ್ನು ಒಳಗೊಂಡಿರುವ ಆನ್‌ಲೈನ್ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ. ತನಿಖೆ ಮಧ್ಯೆಯೇ ಪ್ರಾಧ್ಯಾಪಕರ ಆಯ್ಕೆ ಪಟ್ಟಿ ಪ್ರಕಟ ಕ್ಲರ್ಕ್ ನೇಮಕಾತಿ 2022: ರಾಜ್ಯವಾರು ಹುದ್ದೆಯ ವಿವರಗಳುಗುಜರಾತ್ - 353 ಹುದ್ದೆಗಳುದಮನ್ ಮತ್ತು ದಿಯು - 4 ಹುದ್ದೆಗಳುಕರ್ನಾಟಕ - 316 ಹುದ್ದೆಗಳುಮಧ್ಯಪ್ರದೇಶ - 389 ಹುದ್ದೆಗಳುಛತ್ತೀಸ್‌ಗಢ - 92 ಹುದ್ದೆಗಳುಪಶ್ಚಿಮ ಬಂಗಾಳ - 340 ಹುದ್ದೆಗಳುಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು - 10 ಹುದ್ದೆಗಳುಸಿಕ್ಕಿಂ - 26 ಹುದ್ದೆಗಳುಒಡಿಶಾ - 170 ಹುದ್ದೆಗಳುಜಮ್ಮು ಮತ್ತು ಕಾಶ್ಮೀರ - 35 ಹುದ್ದೆಗಳುಹರಿಯಾಣ - 5 ಹುದ್ದೆಗಳುಹಿಮಾಚಲ ಪ್ರದೇಶ - 55 ಹುದ್ದೆಗಳುಪಂಜಾಬ್ - 130 ಹುದ್ದೆಗಳುತಮಿಳುನಾಡು - 355 ಹುದ್ದೆಗಳುಪಾಂಡಿಚೇರಿ - 7 ಹುದ್ದೆಗಳುದೆಹಲಿ - 32 ಹುದ್ದೆಗಳುಉತ್ತರಾಖಂಡ - 120 ಹುದ್ದೆಗಳುತೆಲಂಗಾಣ - 225 ಹುದ್ದೆಗಳುರಾಜಸ್ಥಾನ - 284 ಹುದ್ದೆಗಳುಕೇರಳ - 270 ಹುದ್ದೆಗಳುಲಕ್ಷದ್ವೀಪ - 3 ಹುದ್ದೆಗಳುಉತ್ತರ ಪ್ರದೇಶ - 631 ಹುದ್ದೆಗಳುಮಹಾರಾಷ್ಟ್ರ - 747 ಹುದ್ದೆಗಳುಗೋವಾ - 50 ಹುದ್ದೆಗಳುಅಸ್ಸಾಂ - 258 ಹುದ್ದೆಗಳುಆಂಧ್ರ ಪ್ರದೇಶ - 15 ಹುದ್ದೆಗಳುಮಣಿಪುರ - 28 ಹುದ್ದೆಗಳುಮೇಘಾಲಯ - 23 ಹುದ್ದೆಗಳುಮಿಜೋರಾಂ - 10 ಹುದ್ದೆಗಳುನಾಗಾಲ್ಯಾಂಡ್ - 15 ಹುದ್ದೆಗಳುತ್ರಿಪುರ - 10 ಹುದ್ದೆಗಳುಒಟ್ಟು - 5008 ಹುದ್ದೆಗಳು