2022; ಭರ್ಜರಿ ಉದ್ಯೋಗವಕಾಶ, ಸ್ಥಳೀಯರಿಗೆ ಆದ್ಯತೆ ಬೆಂಗಳೂರಿನಲ್ಲಿರುವ ಸ್ವೀಡನ್​ ಮೂಲದ ಐಕಿಯ ಪಿಠೋಪಕರಣಗಳ ಮಳಿಗೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಜುಲೈ 15ರೊಳಗೆ ಆನ್‌ಲೈನ್‌ ನಲ್ಲಿ ಅರ್ಜಿ ಸಲ್ಲಿಸಬಹುದು. ಬೆಂಗಳೂರು (ಜೂನ್ 29):ಬೆಂಗಳೂರಿನಲ್ಲಿ ಇತ್ತೀಚೆಗಷ್ಟೇ ಓಪನ್ ಆಗಿರುವ ಸ್ವೀಡನ್​ ಮೂಲದ ಐಕಿಯ ( ) ಪಿಠೋಪಕರಣಗಳ ಮಳಿಗೆಯಲ್ಲಿ ವಿವಿಧ ಹುದ್ದೆಗಳು ಖಾಲಿ ಇದ್ದು ನೇಮಕಾತಿ ಕುರಿತು ಕಂಪನಿ ಅಧಿಸೂಚನೆ ಹೊರಡಿಸಿದೆ. ಸ್ಥಳೀಯರಿಗೆ ಉದ್ಯೋಗ ನೀಡಲು ಮುಂದಾಗಿರುವ ಐಕಿಯ ಈ ಹಿನ್ನೆಲೆಯಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಈಗಾಗಲೇ ಕಂಪೆನಿ ಶೇ.72 ಸ್ಥಳೀಯ ಉದ್ಯೋಗಿಗಳೊಂದಿಗೆ 1000 ನೌಕರರನ್ನು ನೇಮಕ ಮಾಡಿದೆ. ಇದೀಗ ಮತ್ತಷ್ಟು ಹುದ್ದೆಗಳ ಭರ್ತಿಗೆ ಮುಂದಾಗಿದೆ. ಈ ಸಂಬಂಧ ಕಂಪೆನಿಯು ತನ್ನ ಅಧಿಕೃತ ವೆಬ್‌ಸೈಟ್ . ನಲ್ಲಿ ಮಾಹಿತಿ ಪ್ರಕಟಿಸಿದೆ. ಆಸಕ್ತ ಮತ್ತು ಸ್ಥಳೀಯ ಅಭ್ಯರ್ಥಿಗಳು ಜುಲೈ 15ರೊಳಗೆ ಆನ್‌ಲೈನ್‌ ನಲ್ಲಿ ಅರ್ಜಿ ಸಲ್ಲಿಸಬಹುದು. ಹುದ್ದೆಗಳು:ಬೆಂಗಳೂರಿನಲ್ಲಿರುವ ಸ್ವೀಡನ್​ ಮೂಲದ ಐಕಿಯ ಪಿಠೋಪಕರಣಗಳ ಮಳಿಗೆಯಲ್ಲಿ ಎಷ್ಟು ಹುದ್ದೆಗಳಿವೆ ಎಂದು ಕಂಪೆನಿ ಬಹಿರಂಗ ಪಡಿಸಿಲ್ಲ ಆದ್ರೆ ಯಾವ ವಿಭಾಗದಲ್ಲಿ ಕೆಲಸವಿದೆ ಎಂದು ಮಾಹಿತಿ ನೀಡಿದೆ. ಹುದ್ದೆಗಳ ಮಾಹಿತಿ ಹೀಗಿದೆ.ಸಪ್ಲೈ ಪ್ಲಾನರ್​​, ಜವಳಿ ಕಾರ್ಪೆಟ್​​ಗಳುಸಪ್ಲೈ ಪ್ಲಾನರ್, ಜವಳಿ ಉತ್ಪನ್ನಗಳುಸಪ್ಲೈ ಪ್ಲಾನರ್, ವರ್ಗ ಪ್ರದೇಶ -ಮೆಟಲ್​​, ಪ್ಲಾಸ್ಟಿಕ್, ಫ್ಲೋಟ್ ಗ್ಲಾಸ್ ಮತ್ತು ಎಲೆಕ್ಟ್ರಾನಿಕ್ಸ್ಪ್ರಾಜೆಕ್ಟ್ ಲೀಡರ್ (ವಿಸ್ತರಣೆ ಲಾಜಿಸ್ಟಿಕ್ಸ್)ಉತ್ಪನ್ನ ಅನುಸರಣೆ ತಜ್ಞಮಲ್ಟಿಚಾನಲ್ ನೆಟ್‌ವರ್ಕ್ ಪ್ರಾಜೆಕ್ಟ್ ಮ್ಯಾನೇಜರ್ಹಿರಿಯ ಸೈಬರ್ ಇಂಜಿನಿಯರ್ಸೈಬರ್ ಇಂಜಿನಿಯರ್ಸರ್ವಿಸ್​ ಫುಲ್​ಫಿಲ್​ಮೆಂಟ್​​ ಆಪರೇಷನ್​ ಡೆವಲಪರ್ಮಾರಾಟ ಸಹೋದ್ಯೋಗಿ (ಮೂಲ ತಂಡ)ಪಬ್ಲಿಕ್​ ರಿಲೇಷನ್​​ ಲೀಡರ್​​ಉತ್ತರಾಧಿಕಾರ ಯೋಜನೆ ತಜ್ಞಸೇವಾ ವ್ಯಾಪಾರ ವಸಾಹತು ಜೂನಿಯರ್ ಸ್ಪೆಷಲಿಸ್ಟ್ಗೂಡ್ಸ್ ಫ್ಲೋ ಟೀಮ್ ಲೀಡರ್ - ವಿಆರ್ ಮಾಲ್ ತಂಡ-ನಾಯಕ - ಮಾಲ್ 2022; 325 ಹುದ್ದೆಗಳಿಗೆ ಅರ್ಜಿ ಆಹ್ವಾನ ಶೈಕ್ಷಣಿಕ ವಿದ್ಯಾರ್ಹತೆ: ಬೆಂಗಳೂರಿನಲ್ಲಿರುವ ಸ್ವೀಡನ್​ ಮೂಲದ ಐಕಿಯ ಪಿಠೋಪಕರಣಗಳ ಮಳಿಗೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಹುದ್ದೆಗೆ ಅನುಸಾರ ಶೈಕ್ಷಣಿಕ ವಿದ್ಯಾರ್ಹತೆಯನ್ನು ಪಡೆದಿರಬೇಕು. ಸಂಸ್ಥೆಯ ನಿಯಮಾವಳಿ ಅನುಸಾರ ಕ್ರಿಯಾತ್ಮಕವಾಗಿ ಕೆಲಸ ಮಾಡಬೇಕು.ಇಂಗ್ಲಿಷ್​ನಲ್ಲಿನಲ್ಲಿ ಚೆನ್ನಾಗಿ ಮಾತನಾಡುವ ಮತ್ತು ಬರೆಯುವ ಸಾಮರ್ಥ್ಯವನ್ನು ಇರಬೇಕು.ಸಾಮಾನ್ಯ ಕಂಪ್ಯೂಟರ್ ಜ್ಞಾನ ಹೊಂದಿದ್ದು, ಸ್ಪೂರ್ತಿದಾಯಕವಾಗಿ ಕೆಲಸ ಮಾಡಬೇಕು. ಆಯ್ಕೆ ಪ್ರಕ್ರಿಯೆ:ಬೆಂಗಳೂರಿನಲ್ಲಿರುವ ಸ್ವೀಡನ್​ ಮೂಲದ ಐಕಿಯ ಪಿಠೋಪಕರಣಗಳ ಮಳಿಗೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಐಕಿಯ ಮಳಿಗೆಯಲ್ಲಿ ಪ್ರತಿನಿತ್ಯ ಅಭ್ಯರ್ಥಿಗಳ ಆಯ್ಕೆಗೆ ನಿರಂತರವಾಗಿ ಸಂದರ್ಶನ ಪ್ರಕ್ರಿಯೆ ನಡೆಯುತ್ತಿದೆ. ಈ ಹಿನ್ನಲೆ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಇಂದೇ ಅರ್ಜಿ ಸಲ್ಲಿಸಿ, ಉದ್ಯೋಗ ನಿಮ್ಮದಾಗಿಸಿಕೊಳ್ಳಿ. ಹುದ್ದೆಗಳ ಮಾಹಿತಿ ಮತ್ತು ಅರ್ಜಿ ಸಲ್ಲಿಸಲು ಇಲ್ಲಿಕ್ಲಿಕ್ ಮಾಡಿ 2022: ವಿವಿಧ 106 ಹುದ್ದೆಗಳಿಗೆ ನೇಮಕಾತಿ ಕೋಲಾರದಲ್ಲಿ ಶೀಘ್ರಲಿಪಿಗಾರರ ಹುದ್ದೆಗೆ ಅರ್ಜಿ ಆಹ್ವಾನ:ಕೋಲಾರ ಜಿಲ್ಲಾ ನ್ಯಾಯಾಲಯ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಇರುವ ಶೀಘ್ರಲಿಪಿಗಾರರ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಆರಂಭವಾಗುವ ದಿನಾಂಕ 27-06-2022 ಮತ್ತು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕಡೆಯ ದಿನಾಂಕ 26-07-2022 ರಾತ್ರಿ 11-59 ಗಂಟೆಯ ವರೆಗೆ ಮಾತ್ರ ಹಾಗೂ ಬ್ಯಾಂಕ್‌ ಮುಖಾಂತರ ಶುಲ್ಕ ಪಾವತಿಸಲು 28-07-2022 ಕೊನೆಯ ದಿನಾಂಕವಾಗಿದೆ. ವಿದ್ಯಾರ್ಹತೆ, ವಯೋಮಿತಿ, ಹುದ್ದೆಗಳ ವರ್ಗೀಕರಣ ಹಾಗೂ ಹೆಚ್ಚಿನ ವಿವರಗಳಿಗೆ ಕೋಲಾರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ವೆಬ್‌ಸೈಟ್‌ ವಿಳಾಸದ ಮೂಲಕ ತಿಳಿದುಕೊಳ್ಳಬಹುದು ಎಂದು ಕೋಲಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ತಿಳಿಸಿದ್ದಾರೆ.