2022; ಅಗ್ನಿಪಥಕ್ಕೆ 2 ಲಕ್ಷ ಅರ್ಜಿ, ಜು.5ರಂದು ಪ್ರಕ್ರಿಯೆ ಅಂತ್ಯ ಅಗ್ನಿಪಥ ಯೋಜನೆಯಡಿ ಭಾರತೀಯ ವಾಯುಪಡೆಗೆ ಕಳೆದ ಆರು ದಿನಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿವೆ. ಜೂ.24 ರಂದು ಪ್ರಾರಂಭವಾದ ನೋಂದಣಿ ಪ್ರಕ್ರಿಯೆ ಜು.5ರಂದು ಪ್ರಕ್ರಿಯೆ ಅಂತ್ಯವಾಗಲಿದೆ. ನವದೆಹಲಿ (ಜು.1):ಅಗ್ನಿಪಥ ಯೋಜನೆಯಡಿ ( ) ಭಾರತೀಯ ವಾಯುಪಡೆಗೆ ( ) ಕಳೆದ ಆರು ದಿನಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿವೆ. ಜೂ.24 ರಂದು ಪ್ರಾರಂಭವಾದ ನೋಂದಣಿ ಪ್ರಕ್ರಿಯೆ ಜು.5ರಂದು ಪ್ರಕ್ರಿಯೆ ಅಂತ್ಯವಾಗಲಿದೆ. 17.5 ಮತ್ತು 23 ವಯಸ್ಸಿನ ಯುವಕರು ಮತ್ತು ಯುವತಿಯರು ಭಾರತೀಯ ವಾಯುಪಡೆಯ ಅಗ್ನಿವೀರ್ ನೇಮಕಾತಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. 2022 ರ ಯೋಜನೆಯು ದೇಶದ ಕಿರಿಯ ಜನಸಂಖ್ಯೆಯನ್ನು ಉನ್ನತ ವೇತನ ಶ್ರೇಣಿಯೊಂದಿಗೆ ಮಿಲಿಟರಿಗೆ ತೆಗೆದುಕೊಳ್ಳಲು ಉತ್ತೇಜಿಸಲು ಪ್ರಾರಂಭಿಸಲಾಗಿದೆ. ಈ ಯೋಜನೆಯು ಅಭ್ಯರ್ಥಿಗಳಿಗೆ ನಾಲ್ಕು ವರ್ಷಗಳ ಅವಧಿಗೆ ಭಾರತೀಯ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡುತ್ತದೆ. 4 ವರ್ಷಗಳ ತರಬೇತಿ ಬಳಿಕ ಶೇ.25 ರಷ್ಟು ಅಗ್ನಿವೀರರಿಗೆ ಸೇನೆಯಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ವಾಯುಪಡೆ ತಿಳಿಸಿದೆ. ಭೂಸೇನೆ ಮತ್ತು ನೌಕಾಪಡೆ ಶೀಘ್ರವೇ ನೇಮಕಾತಿಗೆ ಚಾಲನೆ ನೀಡಲಿವೆ. ಅಗ್ನಿಪಥ್‌ ಯೋಜನೆ: ಬಿಜೆಪಿಯಿಂದ ಯುವಕರ ದುರ್ಬಳಕೆ, ಈಶ್ವರ ಖಂಡ್ರೆ ಅಗ್ನಿಪಥ್ ಯೋಜನೆ: ಯಾರು ಅರ್ಹರು?: ಅಗ್ನಿಪಥ್ ಯೋಜನೆಗೆ ಅರ್ಹರಾಗಲು ನಿಮ್ಮ ವಯಸ್ಸು 17 ವರ್ಷದಿಂದ 21 ವರ್ಷಗಳ ನಡುವೆ ಇರಬೇಕು. ಈ ನೇಮಕಾತಿಯಲ್ಲಿ ಸೇನೆಯಂತೆಯೇ ಅದೇ ಪ್ರಕ್ರಿಯೆಯಿಂದ ಆಯ್ಕೆ ಮಾಡಲಾಗುತ್ತದೆ. ಅಂದರೆ ಸೇನೆ ನಿಗದಿಪಡಿಸಿದ ನಿಯಮಗಳ ಪ್ರಕಾರವೇ ನೇಮಕಾತಿ ನಡೆಯಲಿದೆ. ಇದರಲ್ಲಿ ನೇಮಕಾತಿಯ ನಂತರ ತರಬೇತಿ ಅವಧಿ ಸೇರಿದಂತೆ ಒಟ್ಟು 4 ವರ್ಷಗಳ ಕಾಲ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಗುತ್ತದೆ.