ನರ್ಸಿಂಗ್ ಆಗಿದ್ಯಾ? ಸೌದಿ ಅರೇಬಿಯಾದಲ್ಲಿದೆ ವಿಫುಲ ಅವಕಾಶ, ಕೈ ತುಂಬಾ ವೇತನ! ಸೌದಿ ಕಮಿಷನ್ ಫಾರ್ ಹೆಲ್ತ್ ಸ್ಪೆಷಲಿಸ್ಟ್ ವೆಬ್‌ಸೈಟ್‌ನಲ್ಲಿರುವ ಮುಮಾರಿಸ್ ಪ್ಲಸ್ ಸೇವೆ ಅಡಿಯಲ್ಲಿ ಅಗತ್ಯ ತರಬೇತು ಪಡೆದವರಿಗೆ ಕೆಲಸ ಮಾಡಲು ಅವಕಾಶವಿದ್ದು, ಪ್ರಯತ್ನಿಸಬಹುದು. ಬೆಂಗಳೂರು: ಸೌದಿ ಅರೇಬಿಯಾದ ಆರೋಗ್ಯ ಸಚಿವಾಲಯ (-ಈಸ್ಟರ್ನ್ ಹೆಲ್ತ್ ಕ್ಲಸ್ಟರ್) ದಲ್ಲಿ ಕೆಲಸ ಮಾಡಲು ನರ್ಸಿಂಗ್ ಆಗಿರುವ ನುರಿತವರಿಗೆ ವಿಫುಲ ಉದ್ಯೋಗ ಅವಕಾಶಗಳಿದ್ದು, ವಿಶೇಷವಾಗಿ ನಿಯೋಜಿಸಿಕೊಳ್ಳಲಾಗುತ್ತಿದೆ. ಕೌಶಲ್ಯ ಇರುವ ಅಭ್ಯರ್ಥಿಗಲು ಅರ್ಜಿ ಸಲ್ಲಿಸಬಹುದಾಗಿದ್ದು, ಹೆಚ್ಚಿನ ಮಾಹಿತಿ ಇಲ್ಲಿದೆ. ಅಡಲ್ಟ್ ಆಂಕೊಲಾಜಿ ( ), ಡಯಾಲಿಸಿಸ್ (), ತುರ್ತು ನಿಗ್ರಹ ಕೋಣೆ ( ), ವಯಸ್ಕರು, ವೈದ್ಯಕೀಯ, ನವಜಾತ ಶಿಶುಗಳ ತೀವ್ರ ನಿಗಾ ಘಟಕ ( ), ನರಗಳು, , ಆಪರೇಟಿಂಗ್ ರೂಮ್ (), ಅಂಗಾಂಗ ಕಸಿ ( ), ಪೀಡಿಯಾಟ್ರಿಕ್ ಆಂಕೊಲಾಜಿ, , ಸ್ಪೆಷಲೈಸ್ಡ್ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಕಾರ್ಯ ನಿರ್ವಹಿಸಲು ವಿಫುಲ ಅವಕಾಶಗಳಿವೆ. ನರ್ಸಿಂಗ್‌ನಲ್ಲಿ ಪದವಿ/ಪಿ.ಜಿ. ಬಿ.ಎಸ್ಸಿ ಶಿಕ್ಷಣದ ಅರ್ಹತೆ ಇದ್ದವರು ಮತ್ತು ಕನಿಷ್ಠ ಒಂದು ವರ್ಷದ ಕೆಲಸದ ಅನುಭವ ಹೊಂದಿರುವವರು ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದು. ವಿವರವಾದ ಬಯೋಡಾಟಾ ಮತ್ತು ಶಿಕ್ಷಣ ( ), ಕೆಲಸದ ಅನುಭವ ( ), ಪಾಸ್‌ಪೋರ್ಟ್‌ನ ಪ್ರತಿಗಳೊಂದಿಗೆ ಕೇರಳಿಗರು rmt3.@.. ಇ-ಮೇಲ್ ಐಡಿಗೆ ಸೆಪ್ಟೆಂಬರ್ 04 ರಂದು ಬೆಳಿಗ್ಗೆ 10 ಗಂಟೆಯೊಳಗೆ ಅರ್ಜಿಯನ್ನು ಸಲ್ಲಿಸಬೇಕೆಂದು ನೋರ್ಕಾ ರೂಟ್ಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಜಿತ್ ತಿಳಿಸಿದ್ದಾರೆ. ಇದಕ್ಕಾಗಿ ಸಂದರ್ಶನವನ್ನು ಮುಂಬೈನಲ್ಲಿ ನಡೆಸಲಾಗುವುದು. ಇದನ್ನೂ ಓದಿ -ನೂರಾರು ಜೀವ ಉಳಿಸಿದ್ದ ಸ್ಟಾಫ್ ನರ್ಸ್ ಆತ್ಮಹತ್ಯೆ; ಊರಿಗೆ ಊರೇ ಬಂದ್ ಮಾಡಿದ ಜನತೆ! ಆದರೆ, ಈ ಅವಕಾಶಕ್ಕೆ ಸೌದಿ ಕಮಿಷನ್ ಫಾರ್ ಹೆಲ್ತ್ ಸ್ಪೆಷಲಿಸ್ಟ್ ವೆಬ್‌ಸೈಟ್‌ನಲ್ಲಿರುವ ಮುಮಾರಿಸ್ ಪ್ಲಸ್ ಸೇವೆ ಮೂಲಕ ವೃತ್ತಿಪರ ಕೌಶಲ್ಯ ತರಬೇತಿ ಪಡೆದಿರಬೇಕು. ಅರ್ಜಿದಾರರು ಈ ಹಿಂದೆ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿರಬೇಕು. ಕನಿಷ್ಠ ಆರು ತಿಂಗಳ ಸಿಂಧುತ್ವದೊಂದಿಗೆ ಪಾಸ್‌ಪೋರ್ಟ್ ಹೊಂದಿರಬೇಕು. ಸಂದರ್ಶನದ ಸಮಯದಲ್ಲಿ ಪಾಸ್‌ಪೋರ್ಟ್ ಅನ್ನು ಕಡ್ಡಾಯವಾಗಿ ತರಬೇಕು. ಹೆಚ್ಚಿನ ಮಾಹಿತಿಗಾಗಿ 0471-2770536, 539, 540, 577 ಈ ಸಂಖ್ಯೆಗಳನ್ನು (ರಜಾ ದಿನಗಳನ್ನು ಹೊರತುಪಡಿಸಿ, ಕಚೇರಿ ಸಮಯದಲ್ಲಿ ಸಂಪರ್ಕಿಸಬಹುದು) ಅಥವಾ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ನೋರ್ಕಾ ಗ್ಲೋಬಲ್ ಕಾಂಟ್ಯಾಕ್ಟ್ ಸೆಂಟರ್‌ನ ಟೋಲ್ ಫ್ರೀ ಸಂಖ್ಯೆಗಳು 1800 425 3939 (ಭಾರತದಿಂದ) +91-8802 012 345 ( ವಿದೇಶದಿಂದ, ಮಿಸ್ಡ್ ಕಾಲ್ ಸೇವೆ) ಸಂಪರ್ಕಿಸಬಹುದು.