2022: ಹಿರಿಯ ಸಂಶೋಧನಾ ​ ಫೆಲೋ ಸೇರಿ 4 ಹುದ್ದೆಗಳಿಗೆ ನೇಮಕಾತಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು ಖಾಲಿ ಇರುವ 4 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಅರ್ಜಿ ಸಲ್ಲಿಸಲು ಮೇ.21 ಕೊನೆಯ ದಿನವಾಗಿದೆ. ಬೆಂಗಳೂರು (ಮೇ.7):ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು ( ) ಇಲ್ಲಿ ಖಾಲಿ ಇರುವ ಹುದ್ದೆಯನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸೀನಿಯರ್ ರಿಸರ್ಚ್​​ ಫೆಲೋ ( ) ಮತ್ತು ಪ್ರಾಜೆಕ್ಟ್​ ಅಸೋಸಿಯೇಟ್ ( ) ಸೇರಿ ಒಟ್ಟು 4 ಹುದ್ದೆ ಖಾಲಿ ಇದ್ದು, ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೋರಲಾಗಿದೆ. ಮೇ.21 ಈ ಮೇಲ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು .. ಗೆ ಭೇಟಿ ನೀಡಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಒಟ್ಟು 4ಹುದ್ದೆಗಳ ಮಾಹಿತಿ ಇಂತಿದೆ:ಹಿರಿಯ ಸಂಶೋಧನಾ ​ ಫೆಲೋ: 2 ಹುದ್ದೆಗಳುಯೋಜನಾ ಸಹಾಯಕ: 2 ಹುದ್ದೆಗಳು ಶೈಕ್ಷಣಿಕ ವಿದ್ಯಾರ್ಹತೆ:ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆಯಲ್ಲಿ ಖಾಲಿ ಇರುವ ಹಿರಿಯ ಸಂಶೋಧನಾ ​ ಫೆಲೋ ಮತ್ತು ಯೋಜನಾ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​ನಿಂದ ಕಡ್ಡಾಯವಾಗಿ ಆಯಾಯ ಹುದ್ದೆಗೆ ಸಂಬಂಧಿಸಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಹಿರಿಯ ಸಂಶೋಧನಾ ​ ಫೆಲೋ ಹುದ್ದೆಗೆ ಬಿಎಎಂಎಸ್ ಮಾಡಿರಬೇಕು. ಮತ್ತು ಯೋಜನಾ ಸಹಾಯಕ ಹುದ್ದೆಗಳಿಗೆ (ಲೈಫ್ ಸೈನ್ಸ್ ಮತ್ತು ಯೋಗ) ಬಿ.ಟೆಕ್, ಸ್ನಾತಕೋತ್ತರ ಪದವಿ , , , , ಸ್ನಾತಕೋತ್ತರ ಡಿಪ್ಲೊಮಾ, . ಮಾಡಿರಬೇಕು. ಕೆಲಸದ ಅನುಭವ:ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆಯಲ್ಲಿ ಖಾಲಿ ಇರುವ ಹಿರಿಯ ಸಂಶೋಧನಾ ಫೆಲೋಶಿಪ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವವರು 2 ವರ್ಷಗಳ ಸಂಶೋಧನಾ ಅನುಭವವನ್ನು ಹೊಂದಿರಬೇಕು. ಮತ್ತು ಪ್ರಾಜೆಕ್ಟ್ ಅಸೋಸಿಯೇಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಕನಿಷ್ಠ 1 ವರ್ಷದ ಸಂಶೋಧನಾ ಅನುಭವ ಹೊಂದಿರಬೇಕು. ವಯೋಮಿತಿ:ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆಯಲ್ಲಿ ಖಾಲಿ ಇರುವ ಹಿರಿಯ ಸಂಶೋಧನಾ ಫೆಲೋಶಿಪ್ ಮತ್ತು ಯೋಜನಾ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು 35 ವರ್ಷದ ಒಳಗಿರಬೇಕು. ವರ್ಗಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗಿದೆ. ಆಯ್ಕೆ ಪ್ರಕ್ರಿಯೆ:ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆಯಲ್ಲಿ ಖಾಲಿ ಇರುವ ಹಿರಿಯ ಸಂಶೋಧನಾ ಫೆಲೋಶಿಪ್ ಮತ್ತು ಯೋಜನಾ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಕೌಶಲ್ಯ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ. ವೇತನ ವಿವರ:ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆಯಲ್ಲಿ ಖಾಲಿ ಇರುವ ಹಿರಿಯ ಸಂಶೋಧನಾ ಫೆಲೋಶಿಪ್ ಮತ್ತು ಯೋಜನಾ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಸಾರ ಮಾಸಿಕ ವೇತನ ದೊರೆಯಲಿದೆ.ಹಿರಿಯ ಸಂಶೋಧನಾ ಫೆಲೋ ಹುದ್ದೆಗೆ ₹35000ಪ್ರಾಜೆಕ್ಟ್ ಅಸೋಸಿಯೇಟ್ ಹುದ್ದೆಗೆ ₹ 25000 ರಿಂದ ₹31000 ವೇತನ ದೊರೆಯಲಿದೆ. ಅರ್ಜಿ ಸಲ್ಲಿಸಬೇಕಾದ ಈ ಮೇಲ್ ವಿಳಾಸ:ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆಯಲ್ಲಿ ಖಾಲಿ ಇರುವ ಹಿರಿಯ ಸಂಶೋಧನಾ ಫೆಲೋಶಿಪ್ ಮತ್ತು ಯೋಜನಾ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ .@. ಗೆ ಮೇ.21ರ ಮೊದಲು ಅರ್ಜಿ ಸಲ್ಲಿಸಬೇಕು.