2022: ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯಲ್ಲಿನ ಖಾಲಿ ಹುದ್ದೆಗಳಿಗೆ ನೇಮಕಾತಿ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ಮಾರ್ಚ್ 29 ಆಗಿದೆ. ಬೆಂಗಳೂರು(ಮಾ.15):ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯಲ್ಲಿ ( ) ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಪ್ರಾಜೆಕ್ಟ್ ಡೈರೆಕ್ಟರ್, ಅಸೋಸಿಯೇಟ್ ಫೆಲೋ, ಆಫೀಸ್ ಸೂಪರಿಂಟೆಂಡೆಂಟ್ ಸೇರಿ ಒಟ್ಟು 38 ವಿವಿಧ ಹುದ್ದೆಗಳು ಖಾಲಿ ಇದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನ ಅಧಿಕೃತ ವೆಬ್‌ಸೈಟ್ . ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ಮಾರ್ಚ್ 29 ಆಗಿದೆ. ಒಟ್ಟು 38 ಹುದ್ದೆಗಳ ವಿವರ ಇಲ್ಲಿದೆಪ್ರಾಜೆಕ್ಟ್ ಡೈರೆಕ್ಟರ್ ( ) – 1 ಹುದ್ದೆಸೀನಿಯರ್ ಫೆಲೋ ( ) – 10 ಹುದ್ದೆಗಳುಅಸೋಸಿಯೇಟ್ ಫೆಲೋ ( ) – 20 ಹುದ್ದೆಗಳುಆಫೀಸ್ ಸೂಪರಿಂಟೆಂಡೆಂಟ್ ( ) – 1 ಹುದ್ದೆಜೂನಿಯರ್ ಅಕೌಂಟ್ ಆಫೀಸರ್ ( ) – 1 ಹುದ್ದೆಡಿವಿಷನ್ ಕ್ಲರ್ಕ್ ( ) – 2 ಹುದ್ದೆಲೋವರ್ ಡಿವಿಷನ್ ಕ್ಲರ್ಕ್ ( ) – 3 ಹುದ್ದೆ 2022: ಉಪನ್ಯಾಸಕ ಸೇರಿ ವಿವಿಧ ಹುದ್ದೆಗಳಿಗೆ ಯುಪಿಎಸ್‌ಸಿ ನೇಮಕಾತಿ ಶೈಕ್ಷಣಿಕ ವಿದ್ಯಾರ್ಹತೆ:ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಹುದ್ದೆಗನುಸಾರವಾಗಿ ವಿದ್ಯಾರ್ಹತೆ ಪಡೆದಿರಬೇಕು.ಪ್ರಾಜೆಕ್ಟ್ ಡೈರೆಕ್ಟರ್ – ಹುದ್ದೆಗಳಿಗೆ ಸ್ನಾತಕೋತ್ತರ ಪದವಿ, ಡಾಕ್ಟರೇಟ್ ಮಾಡಿರಬೇಕು.ಸೀನಿಯರ್ ಫೆಲೋ – ಹುದ್ದೆಗಳಿಗೆ ಸ್ನಾತಕೋತ್ತರ ಪದವಿ, ಡಾಕ್ಟರೇಟ್ ಮಾಡಿರಬೇಕು.ಅಸೋಸಿಯೇಟ್ ಫೆಲೋ – ಹುದ್ದೆಗಳಿಗೆ ಸ್ನಾತಕೋತ್ತರ ಪದವಿ, ಡಾಕ್ಟರೇಟ್ ಮಾಡಿರಬೇಕು.ಆಫೀಸ್ ಸೂಪರಿಂಟೆಂಡೆಂಟ್ – ಹುದ್ದೆಗಳಿಗೆ ಪದವಿ ಮಾಡಿರಬೇಕುಜೂನಿಯರ್ ಅಕೌಂಟ್ ಆಫೀಸರ್ – ಹುದ್ದೆಗಳಿಗೆ ಪದವಿ ಮಾಡಿರಬೇಕುಅಪ್ಪರ್ ಡಿವಿಷನ್ ಕ್ಲರ್ಕ್ – ಹುದ್ದೆಗಳಿಗೆ ಪದವಿ ಮಾಡಿರಬೇಕುಲೋವರ್ ಡಿವಿಷನ್ ಕ್ಲರ್ಕ್ – ಹುದ್ದೆಗಳಿಗೆ ಪದವಿ ಮಾಡಿರಬೇಕು 2022: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ನೇಮಕಾತಿ ವಯೋಮಿತಿ:ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳಿಗೆ ಹುದ್ದೆಗನುಸಾರವಾಗಿ ವಯೋಮಿತಿ ನಿಗದಿಯಾಗಿದೆಪ್ರಾಜೆಕ್ಟ್ ಡೈರೆಕ್ಟರ್ – ಗರಿಷ್ಠ 65 ವರ್ಷಸೀನಿಯರ್ ಫೆಲೋ – ಗರಿಷ್ಠ 60 ವರ್ಷಅಸೋಸಿಯೇಟ್ ಫೆಲೋ – ಗರಿಷ್ಠ 55 ವರ್ಷಆಫೀಸ್ ಸೂಪರಿಂಟೆಂಡೆಂಟ್ – ಗರಿಷ್ಠ 40 ವರ್ಷಜೂನಿಯರ್ ಅಕೌಂಟ್ ಆಫೀಸರ್ – ಗರಿಷ್ಠ 40 ವರ್ಷಅಪ್ಪರ್ ಡಿವಿಷನ್ ಕ್ಲರ್ಕ್ – ಗರಿಷ್ಠ 45 ವರ್ಷಲೋವರ್ ಡಿವಿಷನ್ ಕ್ಲರ್ಕ್ – ಗರಿಷ್ಠ 40 ವರ್ಷ ವೇತನ ವಿವರ:ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಸಾರವಾಗಿ ವೇತನ ದೊರೆಯಲಿದೆ. ಪ್ರಾಜೆಕ್ಟ್ ಡೈರೆಕ್ಟರ್ – ₹70,000ಸೀನಿಯರ್ ಫೆಲೋ – ₹41,000ಅಸೋಸಿಯೇಟ್ ಫೆಲೋ – ₹37,000ಆಫೀಸ್ ಸೂಪರಿಂಟೆಂಡೆಂಟ್ – ₹37,800ಜೂನಿಯರ್ ಅಕೌಂಟ್ಸ್ ಆಫೀಸರ್ – ₹37,800ಅಪ್ಪರ್‌ ಡಿವಿಷನ್ ಕ್ಲರ್ಕ್ – ₹ 27,200ಲೋವರ್ ಡಿವಿಷನ್ ಕ್ಲರ್ಕ್- ₹21,200