2022: ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ನರ್ಸ್ ಸೇರಿ ವಿವಿಧ 42 ಹುದ್ದೆಗಳಿಗೆ ಅರ್ಜಿ ಆಹ್ವಾನ ಭಾರತೀಯ ಅಣುವಿದ್ಯುತ್ ನಿಗಮ ನಿಯಮಿತ ತನ್ನ ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ನರ್ಸ್ ಸೇರಿ ವಿವಿಧ 42 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್ 2 ಕೊನೆಯ ದಿನವಾಗಿದೆ. ಬೆಂಗಳೂರು(ಫೆ.11):ಭಾರತೀಯ ಅಣುವಿದ್ಯುತ್ ನಿಗಮ ನಿಯಮಿತ ( - )ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ನರ್ಸ್​, ಅಸಿಸ್ಟೆಂಟ್, ಸ್ಟೆನೋಗ್ರಾಫರ್ ಸೇರಿ ವಿವಿಧ 42 ಹುದ್ದೆಗಳು ಖಾಲಿ ಇದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು. ಆನ್​ಲೈನ್​() ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್ 2 ಕೊನೆಯ ದಿನವಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ .. ಗೆ ಭೇಟಿ ನೀಡಲು ಕೋರಲಾಗಿದೆ. ಒಟ್ಟು 42 ಹುದ್ದೆಗಳ ಮಾಹಿತಿ:ಸೈಂಟಿಫಿಕ್ ಅಸಿಸ್ಟೆಂಟ್-(ಸೇಫ್ಟಿ ಸೂಪರ್​ವೈಸರ್)- 03ನರ್ಸ್​​ -02ಅಸಿಸ್ಟೆಂಟ್ ಗ್ರೇಡ್ 1()-13ಅಸಿಸ್ಟೆಂಟ್ ಗ್ರೇಡ್ 1(&)-11ಅಸಿಸ್ಟೆಂಟ್ ಗ್ರೇಡ್ 1( &)-04ಸ್ಟೆನೋಗ್ರಾಫರ್ ಗ್ರೇಡ್ 1- 09 ಶೈಕ್ಷಣಿಕ ವಿದ್ಯಾರ್ಹತೆ:ಭಾರತ ಅಣುಶಕ್ತಿ ನಿಗಮದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಹುದ್ದೆಗೆ ಅನುಸಾರವಾಗಿ ವಿದ್ಯಾರ್ಹತೆ ಹೊಂದಿರಬೇಕು.-ಸೈಂಟಿಫಿಕ್ ಅಸಿಸ್ಟೆಂಟ್ ಹುದ್ದೆಗೆ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ (ಮೆಕ್ಯಾನಿಕಲ್ ಅಥವಾ ಎಲೆಕ್ಟ್ರಿಕಲ್) ಅಥವಾ . + ಒಂದು ವರ್ಷದ ಡಿಪ್ಲೊಮಾ/ಇಂಡಸ್ಟ್ರಿಯಲ್ ಸುರಕ್ಷತೆಯಲ್ಲಿ ಪ್ರಮಾಣಪತ್ರ ಪಡೆದಿರಬೇಕು-ನರ್ಸ್​​ ಹುದ್ದೆಗೆ ಅರ್ಜಿ ಸಲ್ಲಿಸುವವರು ಪಿಯುಸಿ ಉತ್ತೀರ್ಣರಾಗಿರಬೇಕು, ಜತೆಗೆ ನರ್ಸಿಂಗ್​​ನಲ್ಲಿ 3 ವರ್ಷಗಳ ಡಿಪ್ಲೋಮಾ ಪೂರ್ಣಗೊಳಿಸಿರಬೇಕು.-ಉಳಿದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಶೇ.50ರಷ್ಟು ಅಂಕಗಳೊಂದಿಗೆ ಪದವಿ ಪೂರ್ಣಗೊಳಿಸಿರಬೇಕು. 1 ನಿಮಿಷದಲ್ಲಿ 30 ಇಂಗ್ಲಿಷ್ ಪದಗಳನ್ನು ಟೈಪ್​ ಮಾಡುವ ಸ್ಪೀಡ್ ಇರಬೇಕು. 2022: ಸಬ್ ಇನ್ಸ್ ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ರಾಜ್ಯ ಪೊಲೀಸ್ ವಯೋಮಿತಿ:ಭಾರತ ಅಣುಶಕ್ತಿ ನಿಗಮದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಹುದ್ದೆಗೆ ಅನುಸಾರವಾಗಿ ವಯೋಮಿತಿ ನಿಗದಿಯಾಗಿದೆ. ಅದರ ವಿವರ ಈ ಕೆಳಗಿನಂತಿದೆ.ಸೈಂಟಿಫಿಕ್ ಅಸಿಸ್ಟೆಂಟ್-(ಸೇಫ್ಟಿ ಸೂಪರ್​ವೈಸರ್)- 18-35 ವರ್ಷನರ್ಸ್​​ : 18-30 ವರ್ಷಅಸಿಸ್ಟೆಂಟ್ ಗ್ರೇಡ್ 1: 21ರಿಂದ 28 ವರ್ಷಅಸಿಸ್ಟೆಂಟ್ ಗ್ರೇಡ್ 1: 21ರಿಂದ 28 ವರ್ಷಅಸಿಸ್ಟೆಂಟ್ ಗ್ರೇಡ್ 1: 21ರಿಂದ 28 ವರ್ಷಸ್ಟೆನೋಗ್ರಾಫರ್ ಗ್ರೇಡ್ 1: 21ರಿಂದ 28 ವರ್ಷ ಆಯ್ಕೆ ಪ್ರಕ್ರಿಯೆ:ಭಾರತ ಅಣುಶಕ್ತಿ ನಿಗಮದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. : 2020ರ ಲಾಕ್‌ಡೌನ್ ಮೊದಲ 3 ತಿಂಗಳಲ್ಲಿ ಉದ್ಯೋಗ ಕಳೆದುಕೊಂಡವರು 23 ಲಕ್ಷ ಮಂದಿ! ವೇತನ ವಿವರ:ಭಾರತ ಅಣುಶಕ್ತಿ ನಿಗಮದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಹುದ್ದೆಗೆ ಅನುಸಾರವಾಗಿ ವೇತನ ನಿಗದಿಯಾಗಿದ್ದು, ವಿವರಣೆ ಈ ಕೆಳಗಿನಂತಿದೆ.ಸೈಂಟಿಫಿಕ್ ಅಸಿಸ್ಟೆಂಟ್-(ಸೇಫ್ಟಿ ಸೂಪರ್​ವೈಸರ್)-ಮಾಸಿಕ ₹ 44,900ನರ್ಸ್​​ -ಮಾಸಿಕ ₹ 44,900ಅಸಿಸ್ಟೆಂಟ್ ಗ್ರೇಡ್ 1()- ಮಾಸಿಕ ₹ 25,500ಅಸಿಸ್ಟೆಂಟ್ ಗ್ರೇಡ್ 1(&)-ಮಾಸಿಕ ₹ 25,500ಅಸಿಸ್ಟೆಂಟ್ ಗ್ರೇಡ್ 1( &)-ಮಾಸಿಕ ₹ 25,500ಸ್ಟೆನೋಗ್ರಾಫರ್ ಗ್ರೇಡ್ 1- ಮಾಸಿಕ ₹ 25,500 ಉದ್ಯೋಗ ಸ್ಥಳ:ಭಾರತೀಯ ಅಣುವಿದ್ಯುತ್ ( ) ನಿಗಮ ನಿಯಮಿತದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಕಾರವಾರ ತಾಲೂಕಿನ ಕೈಗಾ ಅಣು ಸ್ಥಾವರದಲ್ಲಿ ( ) ಕರ್ತವ್ಯ ನಿರ್ವಹಿಸಬೇಕಾಗುತ್ತದೆ.